Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಾರೀಸ್ ಕ್ರಾಸ್ ಎಸ್‍ಯುವಿಗಾಗಿ ಟಿಆರ್‌ಡಿ ಮತ್ತು ಮಾಡೆಲಿಸ್ಟಾ ಕಿಟ್‌ಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ
ಟೊಯೊಟಾ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‍ಯುವಿಯಾದ ಯಾರೀಸ್ ಕ್ರಾಸ್ ಅನ್ನು ತವರುಮನೆ ಜಪಾನ್ನಲ್ಲಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಯಾರೀಸ್ ಕ್ರಾಸ್ ಮಾದರಿಗೆ ಹೊಸ ಟಿಆರ್‌ಡಿ ಮತ್ತು ಮಾಡೆಲಿಸ್ಟಾ ಕಿಟ್‌ಗಳನ್ನು ಬಿಡುಗಡೆಗೊಳಿಸಿದೆ.

ಯಾರೀಸ್ ಕ್ರಾಸ್ ಮಾದರಿಗಾಗಿ ಟೊಯೊಟಾದ ಟಿಆರ್‌ಡಿ ಮತ್ತು ಮಾಡೆಲಿಸ್ಟಾ ಸಂಸ್ಥೆಗಳಿಂದ ಆಫ್ಟರ್ ಮಾರ್ಕೆಟ್ ಅಕ್ಸೆಸರೀಸ್ ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಟಿಆರ್‌ಡಿ ಪ್ಯಾಕೇಜ್ ಕಿಟ್‌ಗಳಲ್ಲಿ 18 ಇಂಚಿನ ಅಲಾಯ್ ವ್ಹೀಲ್, ಡೋರ್ ಹ್ಯಾಂಡಲ್ ಪ್ರೊಟೆಕ್ಟರ್‌ಗಳು, ಸನ್ ಶೇಡ್, ಕಾರ್ಬನ್ ಲೈಸೆನ್ಸ್ ಪ್ಲಾಟ್ ಫ್ರೇಮ್, ಲಗೇಜ್ ಮ್ಯಾಟ್ ಮತ್ತು ಡೋರ್ ಸ್ಟೆಬಿಲೈಜರ್‌ಗಳನ್ನು ಒಳಗೊಂಡಿದೆ. ಇನ್ನು ಮಾಡೆಲಿಸ್ಟಾ ಕಿಟ್ ಅನ್ನು ಅಡ್ವಾನ್ಸ್ ರೋಬಸ್ಟ್ ಸ್ಟೈಲ್ ಮತ್ತು ಎಲಿಗೆಂಟ್ ಐಸ್ ಸ್ಟೈಲ್ ಎಂಬ ಎರಡು ವಿಭಿನ್ನ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

ಮಾಡೆಲಿಸ್ಟಾ ಕಿಟ್‌ಗಳಲ್ಲಿ ರೂಫ್ ಮೌಂಟೆಡ್ ಸ್ಪಾಯ್ಲರ್, ಅಲಂಕರಿಸಿದ ಮುಂಭಾಗದ ಗ್ರಿಲ್, ಹಿಂಭಾಗದಲ್ಲಿ ಡೋರ್ ಹ್ಯಾಂಡಲ್, ಸ್ಪಾಯ್ಲರ್, ಹೊಸ 19 ಇಂಚಿನ ಅಲಾಯ್ ವ್ಜೀಲ್ ಗಳು, ಸೈಡ್ ಮತ್ತು ಹಿಂಭಾಗದ ಸ್ಕರ್ಟ್‌ಗಳು, ಬಾಡಿ ಬಣ್ಣದ ವ್ಜೀಲ್ ಆರ್ಚ್ ಕ್ಲಾಡಿಂಗ್ ಇತ್ಯಾದಿಗಳನ್ನು ಒಳಗೊಂಡಿದೆ.
MOST READ: ಮಿನಿ ಕ್ಲಬ್‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಒಳಾಂಗಣ ಅಕ್ಸೆಸರೀಸ್ ನಲ್ಲಿ ಎಲ್ಇಡಿ ಕ್ಯಾಬಿನ್ ಲೈಟ್, ಸ್ಕಫ್ ಪ್ಲೇಟ್ಗಳು, ಸೆಂಟರ್ ಕನ್ಸೋಲ್, ಕ್ರೋಮ್ ಮತ್ತು ಬೋರ್ಡೆಕ್ಸ್ ರೆಡ್ ಹೈಲೈಟ್ಸ್, ಲಗೇಜ್ ವುಡ್ ಡೆಕ್ ಮತ್ತು ಮುಂತಾದವು ಸೇರಿವೆ.

ಈ ಹೊಸ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ ಕಂಪನಿಯ ಟಿಎನ್‌ಜಿಎ-ಬಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಯಾರೀಸ್ ಕ್ರಾಸ್ 4,180 ಎಂಎಂ ಉದ್ದ, 1765 ಎಂಎಂ ಅಗಲ, 1560 ಎಂಎಂ ಎತ್ತರ ಮತ್ತು 2560 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಕಾಂಪ್ಯಾಕ್ಟ್ ಎಸ್‍ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟೊಯೊಟಾ ಎಸ್‍ಯಿವಿಗಳಿಗಿಂತ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗ ಟೊ-ಟೈರ್ ಗ್ರಿಲ್ ಅನ್ನು ಹೊಂದಿದೆ.

ಈ ಹೊಸ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗೆ ಹೆಡ್ ಲ್ಯಾಂಪ್ ಮತ್ತು ಬಂಪರ್ ಕೆಳಭಾಗದಲ್ಲಿ ವೃತ್ತಾಕಾರದ ಫಾಂಗ್ ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಸ್ಕ್ವೇರ್ ಆಫ್ ವ್ಹೀಲ್ ಕಮಾನುಗಳು ಮತ್ತು ಬ್ಲ್ಯಾಕ್ ಪ್ಲೋಟಿಂಗ್ ರೂಪ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿನ್ಯಾಸವು ಆಕರ್ಷಕವಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ. ಒಂದು ವೇಳೆ ಭಾರತೀಯ ಮಾರುಕಟ್ಟೆಯಲ್ಲಿ ಯಾರೀಸ್ ಕ್ರಾಸ್ ಬಿಡುಗಡೆಯಾದರೆ ಮಾರುತಿ ಸುಜುಕಿ ವಿಟಾರಾ ಬ್ರೇಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ 300 ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.