2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ಬ್ರಿಟನ್, ಜಪಾನ್ ದೇಶಗಳ ನಂತರ ಈಗ ದಕ್ಷಿಣ ಏಷ್ಯಾ ದೇಶವಾದ ಥಾಯ್ಲೆಂಡ್‌ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೊಸ ನೀತಿಯನ್ನು ರೂಪಿಸಿದೆ. 2035ರಿಂದ ಥಾಯ್ಲೆಂಡ್‌ನಲ್ಲಿ ಶೂನ್ಯ ಮಾಲಿನ್ಯ ಹೊರಸೂಸುವ ವಾಹನಗಳನ್ನು ಅಂದರೆ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಥಾಯ್ಲೆಂಡ್‌ ಸರ್ಕಾರ ಘೋಷಿಸಿದೆ.

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

2030ರ ಅಂತ್ಯದ ವೇಳೆಗೆ ದೇಶದ ಎಲೆಕ್ಟ್ರಿಕ್ ವಾಹನಗಳ ಪಾಲನ್ನು 50%ಗಳಿಗೆ ಹೆಚ್ಚಿಸುವ ಗುರಿಯನ್ನು ಥಾಯ್ಲೆಂಡ್‌ ಸರ್ಕಾರ ಹೊಂದಿದೆ. ಥಾಯ್ಲೆಂಡ್‌ನಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಥಾಯ್ಲೆಂಡ್‌ ಸರ್ಕಾರವು ಜನರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಇದರ ಜೊತೆಗೆ ಥಾಯ್ಲೆಂಡ್‌ನಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸಹ ಅಭಿವೃದ್ಧಿ ಪಡಿಸಲಾಗುತ್ತಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ಥಾಯ್ಲೆಂಡ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಅಭಿಯಾನಗಳನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ ಎಲೆಕ್ಟ್ರಿಕ್ ವೆಹಿಕಲ್ ಅಸೋಸಿಯೇಶನ್ ಆಫ್ ಥಾಯ್ಲೆಂಡ್‌ನ ಯೋಸಾಂಗ್‌ಪಾಂಗ್ ಲಾವೊನುಯೆಲ್ ಮಾಹಿತಿ ನೀಡಿದ್ದಾರೆ.

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ನಾವು ಎಲೆಕ್ಟ್ರಿಕ್ ವಾಹನಗಳನ್ನು ಸ್ವಾಭಾವಿಕವಾಗಿ ಅಳವಡಿಸಿಕೊಂಡರೆ ಅದರ ಅನುಷ್ಟಾನಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆದರೆ ನಿಗದಿತ ಅವಧಿಯೊಳಗೆ ಅವುಗಳನ್ನು ಅನುಷ್ಠಾನಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ವರದಿಗಳ ಪ್ರಕಾರ ಥಾಯ್ಲೆಂಡ್‌ನಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆ ಕೇವಲ 1%ನಷ್ಟಿದೆ. ಕಳೆದ ವರ್ಷ ಥಾಯ್ಲೆಂಡ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು 1.4%ನಷ್ಟು ಹೆಚ್ಚಾಗಿದೆ. ಇದೇ ವೇಳೆ ಪೆಟ್ರೋಲ್, ಡೀಸೆಲ್ ಕಾರುಗಳ ಮಾರಾಟವು 26%ನಷ್ಟು ಹೆಚ್ಚಾಗಿದೆ.

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ಥಾಯ್ಲೆಂಡ್‌ನ ವಾಹನ ಉದ್ಯಮವು ಜಿಡಿಪಿಗೆ 10%ನಷ್ಟು ಕೊಡುಗೆ ನೀಡುವುದರ ಜೊತೆಗೆ 8.50 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಿದೆ. ಪೆಟ್ರೋಕೆಮಿಕಲ್ ಹಾಗೂ ಪ್ಲಾಸ್ಟಿಕ್ ಕೈಗಾರಿಕೆಗಳು ಥಾಯ್ಲೆಂಡ್‌ನ ಆಟೋ ಮೊಬೈಲ್ ಉದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ಥಾಯ್ಲೆಂಡ್‌ನಲ್ಲಿ ತಯಾರಿಸಿದ 50%ನಷ್ಟು ಕಾರುಗಳನ್ನು ಫಿಲಿಪೈನ್ಸ್, ಮಲೇಷ್ಯಾ ಹಾಗೂ ಇಂಡೋನೇಷ್ಯಾದಂತಹ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಥಾಯ್ಲೆಂಡ್‌ನಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳಿಗೆ 50%ನಷ್ಟು ಅಬಕಾರಿ ಸುಂಕ ವಿಧಿಸಿದರೆ, ಎಲೆಕ್ಟ್ರಿಕ್ ಕಾರುಗಳಿಗೆ ಕೇವಲ 10%ನಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ.

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ಥಾಯ್ಲೆಂಡ್‌ನ ಪ್ರಮುಖ ನಗರವಾದ ಬ್ಯಾಂಕಾಕ್ ಕಲುಷಿತ ಗಾಳಿಯಿಂದ ತತ್ತರಿಸುತ್ತಿದೆ. ಬ್ಯಾಂಕಾಕ್ ನಗರವು ಸಾರ್ವಜನಿಕ ಸಾರಿಗೆ ಹಾಗೂ ರಸ್ತೆಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

2035ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ ಈ ದೇಶ

ಆದರೂ ಬ್ಯಾಂಕಾಕ್ ಆಗ್ನೇಯ ಏಷ್ಯಾದ ದೇಶಗಳಲ್ಲಿ ಪ್ರಮುಖ ಕಾರು ತಯಾರಕ ನಗರವಾಗಿ ಹೊರಹೊಮ್ಮಿದೆ. ಈ ನಗರದ ತಲಾ ಆದಾಯವು ಸುಮಾರು 6,500 ಡಾಲರ್'ಗಳಾಗಿದ್ದು, ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ.

Most Read Articles

Kannada
English summary
Thailand to sell only electric cars by 2035. Read in Kannada.
Story first published: Friday, April 23, 2021, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X