31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಎಸ್-ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ ಕಾರು ಉತ್ತಮ ಮೈಲೇಜ್ ಮತ್ತು ಆಕರ್ಷಕ ಫೀಚರ್ಸ್ ಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಕಿಟ್ ಅನ್ನು VXi ಮತ್ತು ZXi ರೂಪಾಂತರಗಳಲ್ಲಿ ನೀಡಲಾಗಿದ್ದು, ಇವುಗಳ ಬೆಲೆ ಕ್ರಮವಾಗಿ ರೂ.8.14 ಲಕ್ಷ ಮತ್ತು ರೂ.8.82 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೊಸ 2022 ಮಾರುತಿ ಡಿಜೈರ್ ಸಿಎನ್‌ಜಿ ಮತ್ತು ಪೆಟ್ರೋಲ್ ರೂಪಾಂತರಗಳನ್ನು ಮಾರುತಿ ಸುಜುಕಿ ಸಬ್‌ಸ್ಕ್ರೈಬ್ ಮೂಲಕ ಕ್ರಮವಾಗಿ ರೂ.16,999 ಮತ್ತು ರೂ.14,100 ರಿಂದ ಪ್ರಾರಂಭವಾಗುವ ಎಲ್ಲವನ್ನೂ ಒಳಗೊಂಡ ಮಾಸಿಕ ಚಂದಾದಾರಿಕೆ ಶುಲ್ಕದಲ್ಲಿ ಹೊಂದಬಹುದು ಎಂದು ವಾಹನ ತಯಾರಕರು ದೃಢಪಡಿಸಿದ್ದಾರೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

2022ರ ಮಾರುತಿ ಡಿಜೈರ್ ಸಿಎನ್‌ಜಿ ಕಾರು 1.2 ಲೀಟರ್ ಕೆ-ಸೀರಿಸ್ ಡ್ಯುಯಲ್ ಜೆಟ್, ಡ್ಯುಯಲ್ VVT ಇಂಜಿನ್ ಅನ್ನು ಫ್ಯಾಕ್ಟರಿ ಕಿಟಡ್ ಸಿಎನ್‌ಜಿ ಕಿಟ್‌ಗೆ ಜೋಡಿಸಲಾಗಿದೆ. ಈ ಸೆಟಪ್ 6,000 ಆರ್‌ಪಿಎಂನಲ್ಲಿ 71 ಬಿಹೆಚ್‍ಪಿ ಪವರ್ ಮತ್ತು 4,300 ಆರ್‌ಪಿಎಂನಲ್ಲಿ 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಮಾದರಿಯು 82 ಬಿಹೆ‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಸಿಎನ್‌ಜಿ ಆವೃತ್ತಿಯು ಸ್ವಲ್ಪ ಕಡಿಮೆ ಪವರ್ ಮತ್ತು ಟಾರ್ಕ್ ಉತ್ಪಾದಿಸುತ್ತದೆ. ಹೊಸ ಡಿಜೈರ್ ಸಿಎನ್‌ಜಿ ರೂಪಾಂತರವು 31.12 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೀಗಾಗಿ ಇದು ದೇಶದ ಅತ್ಯಂತ ಮಿತವ್ಯಯ ಮತ್ತು ಶಕ್ತಿಯುತ ಸಿಎನ್‌ಜಿ ಸೆಡಾನ್ ಆಗಿದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಎಸ್-ಸಿಎನ್‌ಜಿ ವಾಹನದ ಪವರ್‌ಟ್ರೇನ್ ಮತ್ತು ಸಸ್ಪೆಂಕ್ಷನ್ ಅನ್ನು ಉತ್ತಮ ಬಾಳಿಕೆ, ಹೆಚ್ಚಿನ ಮೈಲೇಜ್ ಮತ್ತು ಉತ್ತಮ ಸುರಕ್ಷತೆಯನ್ನು ನೀಡಲು ವಿಶೇಷವಾಗಿ ಟ್ಯೂನ್ ಮಾಡಲಾಗಿದೆ" ಎಂದು ವಾಹನ ತಯಾರಕರು ಹೇಳುತ್ತಾರೆ. ಮಾರುತಿ ಸುಜುಕಿಯ ಸಿಎನ್‌ಜಿ ಮಾದರಿಗಳು ಡ್ಯುಯಲ್ ಇಂಟರ್‌ಡೆಪೆಂಡೆಂಟ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್‌ಗಳು (ಇಸಿಯು) ಮತ್ತು ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಮ್‌ನೊಂದಿಗೆ ಪ್ರಯೋಜನ ಪಡೆದಿವೆ,

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಅದು ಗಾಳಿ-ಇಂಧನ ಅನುಪಾತವನ್ನು ನೀಡುವುದಲ್ಲದೆ, ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಸೋರಿಕೆ ಮತ್ತು ತುಕ್ಕು ತಪ್ಪಿಸುವ ಸಲುವಾಗಿ, ಕಂಪನಿಯು ಸ್ಟೇನ್‌ಲೆಸ್ ಸ್ಟೀಲ್ ಪೈಪ್‌ಗಳು, ಜಾಯೆಟ್ಸ್ ಮತ್ತು ಮೈಕ್ರೋಸ್ವಿಚ್ ಅನ್ನು ಬಳಸಿದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಹೊಸ 2022ರ ಮಾರುತಿ ಡಿಜೈರ್ ಸಿಎನ್‌ಜಿ ಮಾದರಿಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. VXi ಟ್ರಿಮ್ 14-ಇಂಚಿನ ಸ್ಟೀಲ್ ರಿಮ್‌ಗಳೊಂದಿಗೆ ವೀಲ್ ಕವರ್‌ಗಳು, ಪವರ್ ಕಿಟಕಿಗಳು, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್‌ಗಳು, ಫಾಕ್ಸ್ ವುಡ್ ಇಂಟೀರಿಯರ್ ಟ್ರಿಮ್, 2 ಡಿಐಎನ್ ಆಡಿಯೊ ಪ್ಲೇಯರ್ ಅನ್ನು ಹೊಂದಿದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಇದರೊಂದಿಗೆ ಡಿಜೈರ್ ಸಿಎನ್‌ಜಿ ಕಾರಿನಲ್ಲಿ 4-ಸ್ಪೀಕರ್‌ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ರಿಯರ್ ಎಸಿ ವೆಂಟ್, ರಿಯರ್ ಪವರ್ ಔಟ್‌ಲೆಟ್, ರಿಯರ್ ಸೆಂಟರ್ ಆರ್ಮ್‌ರೆಸ್ಟ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಎತ್ತರ ಹೊಂದಾಣಿಕೆ ಮಾಡಬಹುದಾದ ORVM ಗಳು, ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಹೆಡ್ ರೆಸ್ಟ್‌ಗಳು ಮತ್ತು ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್ ಅನ್ನು ಹೊಂದಿದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಡಿಜೈರ್ ಸಿಎನ್‌ಜಿ ಕಾರಿನ ZXi ರೂಪಾಂತರದಲ್ಲಿ 15-ಇಂಚಿನ ಅಲಾಯ್ ವ್ಹೀಲ್, ಇತ್ತೀಚಿನ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 7-ಇಂಚಿನ ಸ್ಮಾರ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅಪ್ಲಿಕೇಶನ್ ಆಧಾರಿತ ಆಡಿಯೊ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳು, ಕೀಲೆಸ್‌ನೊಂದಿಗೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಲೆದರ್ ನಿಂದ ಕೂಡಿದ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಇನ್ನು ವರದಿಗಳ ಪ್ರಕಾರ, ಮಾರುತಿ ಸುಜುಕಿ ತನ್ನ ಜನಪ್ರಿಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಮತ್ತು ವಿಟಾರಾ ಬ್ರೆಝಾ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯನ್ನು CNG ರೂಪಾಂತರಗಳನ್ನು ಸಹ ತರುತ್ತದೆ. ಎರಡನೆಯದು ಏಪ್ರಿಲ್ 2022 ರಲ್ಲಿ ಅದರ ಎರಡನೇ ತಲೆಮಾರಿನೊಳಗೆ ಪ್ರವೇಶಿಸಲು ಸಿದ್ಧವಾಗಿದೆ. ಹೊಸ ಮಾದರಿಯನ್ನು ಮಾರುತಿ ಬ್ರೆಝಾ ಎಂದು ಹೆಸರಿಸಲಾಗುವುದು ಮತ್ತು ಇದು ಹೊಸ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಒಳಗೆ ಮತ್ತು ಹೊರಗೆ ಸಮಗ್ರ ಬದಲಾವಣೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಮಾರುತಿ ಸುಜುಕಿ ಇಂಡಿಯಾ 2022ರ ಫೆಬ್ರವರಿ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಇದರ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 164,056 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 164,469 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸ್ಥಿರವಾಗಿದೆ. 2022ರ ಜನವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 154,379 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

31 ಕಿ.ಮೀ ಮೈಲೇಜ್ ನೀಡುವ ಮಾರುತಿ ಸುಜುಕಿ ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.6.2 ಪ್ರತಿಶತದಷ್ಟು ತಿಂಗಳ-ಮಾಸಿಕ ಬೆಳವಣಿಗೆಯನ್ನು ಕಂಡಿದ್ದಾರೆ. ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ಉತ್ಪಾದನೆಯ ಮೇಲೆ ಅಲ್ಪ ಪರಿಣಾಮ ಬೀರುತ್ತಿದೆ ಎಂದು ಕಾರು ತಯಾರಕರು ಹೇಳಿದರು.

Most Read Articles

Kannada
English summary
New 2022 maruti suzuki dzire s cng launched in india prices details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X