ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸುವವರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಅವುಗಳಲ್ಲಿ ನೀರಿನ ಬಗ್ಗೆ ಪ್ರಮುಖ ಪ್ರಶ್ನೆ ಎದುರಾಗುತ್ತದೆ. ಯಾವುದೇ ಹಡಗಾಗಲೀ ಹಲವು ವಾರಗಳವರೆಗೆ ಅಥವಾ ಹಲವು ತಿಂಗಳುಗಳವರೆಗೆ ಸಮುದ್ರದ ನೀರಿನಲ್ಲಿ ಚಲಿಸುತ್ತದೆ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಇಷ್ಟು ದಿನಗಳವರೆಗೆ ಕ್ರೂಸ್ ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ? ಹಡಗುಗಳಲ್ಲಿರುವ ನೀರು ಕುಡಿಯಲು ಯೋಗ್ಯವಾಗಿರುತ್ತದೆಯೇ? ಸಮುದ್ರದ ನೀರನ್ನೇ ಕುಡಿಯಲು ಬಳಸುತ್ತಾರೆಯೇ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಹಡಗುಗಳಲ್ಲಿರುವ ನೀರು ಕುಡಿಯಲು ಯೋಗ್ಯವೇ?

ಹಡಗುಗಳಲ್ಲಿರುವ ಕುಡಿಯುವ ನೀರು ವರ್ಲ್ಡ್ ಹೆಲ್ತ್ ಆರ್ಗಾನೈಜೆಷನ್ ಸ್ಟಾಂಡರ್ಡ್‍‍ಗಳಿಗೆ ಅನುಸಾರವಾಗಿ ಕುಡಿಯಲು ಯೋಗ್ಯವಾಗಿರುತ್ತದೆ. ನೀವು ಯಾವಾಗಲಾದರೂ ಹಡಗುಗಳಲ್ಲಿ ಪ್ರಯಾಣಿಸುವಾಗ ನೀರನ್ನು ತೆಗೆದುಕೊಂಡು ಹೋಗದಿದ್ದಲ್ಲಿ ಹಡಗಿನಲ್ಲಿರುವ ನೀರನ್ನೇ ಕುಡಿಯಬಹುದು.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಹಡಗುಗಳಲ್ಲಿರುವ ನೀರನ್ನು ಹೇಗೆ ಪರಿಷ್ಕರಿಸಲಾಗುತ್ತದೆ?

ಕ್ರೂಸ್ ಹಡಗಿನಲ್ಲಿರುವ ಕುಡಿಯುವ ನೀರನ್ನು ಸಮುದ್ರದಿಂದಲೇ ತೆಗೆದುಕೊಳ್ಳಲಾಗುತ್ತದೆ. ಸಮುದ್ರದ ನೀರಿನಲ್ಲಿ ಹೆಚ್ಚು ಉಪ್ಪಿನಾಂಶವಿರುವುದರಿಂದ, ಈ ನೀರನ್ನು ಎವೊಪರೇಟ್ ಮಾಡಿ ಅಂದರೆ ಆವಿಯಾಗಿಸಿ ಅದನ್ನು ಕುಡಿಯಲು ಬಳಸಲಾಗುತ್ತದೆ. ನಂತರ ಮಿನರಲ್ ವಾಟರ್ ಅನ್ನು ಈ ನೀರಿಗೆ ಸೇರಿಸಲಾಗುತ್ತದೆ. ಹೆಚ್ಚುವರಿ ರಕ್ಷಣೆಗಾಗಿ ಕ್ಲೋರಿನ್ ಅನ್ನು ಸೇರಿಸಲಾಗುತ್ತದೆ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಟಾಯ್ಲೆಟ್ ನೀರನ್ನು ಬಳಸಲಾಗುತ್ತದೆಯೇ?

ಹಡಗುಗಳಲ್ಲಿರುವ ಟಾಯ್ಲೆಟ್ ನೀರನ್ನು ಪರಿಷ್ಕರಿಸಿ ಬಳಸುವುದಿಲ್ಲ. ಹಡಗುಗಳಲ್ಲಿ ತ್ಯಾಜ್ಯ ನೀರನ್ನು ಗ್ರೇ ವಾಟರ್ ಹಾಗೂ ಬ್ಲಾಕ್ ವಾಟರ್ ಎಂಬ ಎರಡು ವಿಧದಲ್ಲಿ ಸಂಗ್ರಹಿಸಲಾಗುತ್ತದೆ. ಗ್ರೇ ವಾಟರ್ ಸ್ನಾನದ ಹಾಗೂ ಸಿಂಕುಗಳ ನೀರಾದರೆ, ಬ್ಲಾಕ್ ವಾಟರ್ ಟಾಯ್ಲೆಟ್‍‍ನ ನೀರಾಗಿರುತ್ತದೆ. ಈ ಎರಡೂ ರೀತಿಯ ನೀರನ್ನು ಸಮುದ್ರದಲ್ಲಿಯೇ ಹೊರಬಿಡಲಾಗುತ್ತದೆ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ವಾಟರ್ ಬಾಟಲ್‍‍ಗಳನ್ನು ದುಡ್ಡು ನೀಡಿ ಖರೀದಿಸಬೇಕೆ?

ಸಾಮಾನ್ಯವಾಗಿ ವಾಟರ್ ಬಾಟಲ್‍‍ಗಳನ್ನು ಹಡಗುಗಳಲ್ಲಿ ಖರೀದಿಸಬೇಕಾಗುತ್ತದೆ. ಆದರೆ ಕೆಲವು ಐಷಾರಾಮಿ ಹಡಗುಗಳಲ್ಲಿ ನೀವಿರುವ ರೂಂಗಳಿಗೆ, ಊಟದ ಜೊತೆಗೆ ಯಾವುದೇ ದುಡ್ಡನ್ನು ಪಡೆಯದೇ ವಾಟರ್‍ ಬಾಟಲ್‍‍ಗಳನ್ನು ನೀಡಲಾಗುತ್ತದೆ. ಹೆಚ್ಚಿನ ಕ್ರೂಸರ್ ಹಡಗುಗಳಲ್ಲಿ ನೀರನ್ನು ಮರುಬಳಸುವ ಬಾಟಲ್ ಅಥವಾ ಗ್ಲಾಸುಗಳಲ್ಲಿ ನೀಡಲಾಗುತ್ತದೆ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಹೊರಗಿನ ನೀರನ್ನು ಹಡಗುಗಳಲ್ಲಿ ಬಳಸಲು ಅವಕಾಶ ನೀಡಲಾಗುತ್ತದೆಯೇ?

ವಿವಿಧ ಹಡಗು ಕಂಪನಿಗಳು ವಿವಿಧ ರೀತಿಯ ನಿಯಮಗಳನ್ನು ಹೊಂದಿವೆ. ಹೊರಗಿನಿಂದ ಊಟ ಅಥವಾ ಇನ್ನು ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ನೀವು ಯಾವ ಕಂಪನಿಯ ಹಡಗನ್ನು ಬಳಸುತ್ತಿದ್ದಿರಾ ಎಂಬುದನ್ನು ಅವಲಂಬಿಸಿರುತ್ತದೆ. ರಾಯಲ್ ಕೆರೆಬಿಯನ್ ಕ್ರೂಸ್ ಲೈನ್ ಕಂಪನಿಯು 500 ಎಂಎಲ್‍‍ನ 12 ವಾಟರ್ ಬಾಟಲ್‍‍ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುತ್ತದೆ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಕ್ರೂಸ್ ನೀರನ್ನು ಬೇಬಿ ಫಾರ್ಮುಲಾಗೆ ಬಳಸಬಹುದೇ?

ಬೇಬಿ ಫಾರ್ಮುಲಾಗೆ ಕ್ರೂಸ್ ನೀರನ್ನು ಬಳಸಬಹುದು. ಆದರೆ ಈ ನೀರನ್ನು ಸಂಸ್ಕರಿಸಿದ ನಂತರ, ಅದರಲ್ಲಿರುವ ಕ್ಲೋರಿನ್ ಹಾಗೂ ಬ್ರೋಮಿನ್ ಪ್ರಮಾಣವು ನಿಮ್ಮ ಮನೆಯಲ್ಲಿರುವ ನೀರಿಗಿಂತ ಭಿನ್ನವಾಗಿರಬಹುದು. ಇದು ಋಣಾತ್ಮಕ ಪರಿಣಾಮವನ್ನು ಬೀರಬಹುದು.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ವೈದ್ಯಕೀಯ ಉದ್ದೇಶಕ್ಕಾಗಿ ಡಿಸ್ಟಿಲ್ಡ್ ನೀರಿನ ಅಗತ್ಯವಿದ್ದಾಗ ಏನಾಗುತ್ತದೆ?

ಎಲ್ಲಾ ಹಡಗು ಕಂಪನಿಗಳು ನೀವು ತಂಗುವ ಕೋಣೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಡಿಸ್ಟಿಲ್ಡ್ ನೀರನ್ನು ಒದಗಿಸುತ್ತವೆ. ನೀವೂ ಸಹ ಲಗೇಜುಗಳಲ್ಲಿ ಡಿಸ್ಟಿಲ್ಡ್ ವಾಟರ್ ಅನ್ನು ಸಾಗಿಸಬಹುದು. ಡಿಸ್ಟಿಲ್ಡ್ ವಾಟರ್‍‍ಗಳಿಗೆ ಮಿಡ್ಲ್ ಕ್ಲಾಸ್ ಕ್ರೂಸ್ ಹಡಗುಗಳಲ್ಲಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಐಷಾರಾಮಿ ಹಡಗುಗಳಲ್ಲಿ ಡಿಸ್ಟಿಲ್ಡ್ ವಾಟರ್‍‍ಗಳಿಗೆ ಶುಲ್ಕ ವಿಧಿಸುವುದಿಲ್ಲ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ಮರುಬಳಕೆ ಮಾಡಬಹುದಾದ ಬಾಟಲ್ ಅಥವಾ ಕಪ್‍‍ಗಳನ್ನು ಬಳಸಬಹುದೇ?

ಮೊದಲೇ ಹೇಳಿದಂತೆ, ಕ್ರೂಸ್ ನೀರು ಸುರಕ್ಷಿತವಾಗಿರುತ್ತದೆ. ಬಾಟಲ್‍‍ಗಳಲ್ಲಿ ನೀರನ್ನು ತುಂಬಿಸಿ ಕೊಳ್ಳುವ ಮೂಲಕ ನೀವು ಅದನ್ನು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು. ಹಡಗುಗಳಲ್ಲಿ, ಆರೋಗ್ಯದ ದೃಷ್ಟಿಯಿಂದ ಬಾಟಲ್‍‍ಗಳಲ್ಲಿ ನೇರವಾಗಿ ಹಡಗುಗಳಲ್ಲಿರುವ ನಲ್ಲಿಯ ಮೂಲಕ ನೀರು ತುಂಬುವುದನ್ನು ನಿಷೇಧಿಸಲಾಗಿದೆ.

ಹಡಗುಗಳಿಗೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ ಗೊತ್ತಾ?

ನಿಮ್ಮ ಬಳಿಯಿರುವ ಬಾಟಲ್‍‍ಗಳಲ್ಲಿ ನೇರವಾಗಿ ನೀರನ್ನು ತುಂಬಿಸಿಕೊಳ್ಳುವ ಬದಲು ಹಡಗುಗಳಲ್ಲಿರುವ ಗ್ಲಾಸುಗಳಲ್ಲಿ ನೀರನ್ನು ಹಿಡಿದು ಅದರ ಮೂಲಕ ತುಂಬಿಸಿ ಕೊಳ್ಳಬಹುದು.

Most Read Articles

Kannada
English summary
Facts about Cruise Ship Drinking water. Read in Kannada.
Story first published: Thursday, February 13, 2020, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X