Just In
Don't Miss!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- News
ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಿಲೀಪ್ ಛಾಬ್ರಿಯಾ ಗ್ಯಾರೇಜ್'ನಲ್ಲಿದ್ದ ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು
ಕಾರು ವಿನ್ಯಾಸಕ ದಿಲೀಪ್ ಛಾಬ್ರಿಯಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಬಂಧಿಸಲಾಗಿತ್ತು. ಕಾರು ನೋಂದಣಿ ದಂಧೆಯಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ.

ಈಗ ಮುಂಬೈ ಅಪರಾಧ ವಿಭಾಗದ ಪೊಲೀಸರು ದಿಲೀಪ್ ಛಾಬ್ರಿಯಾ ಅವರ ಪುಣೆಯ ಗ್ಯಾರೇಜ್'ನಿಂದ 14 ಡಿಸಿ ಅವಂತಿ ಕಾರುಗಳನ್ನು ಹಾಗೂ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದ್ದ 40 ಯುನಿಟ್ ಎಂಜಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ದಿಲೀಪ್ ಛಾಬ್ರಿಯಾ ಅವರ ಮಗ ಹಾಗೂ ಮಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಅಂದ ಹಾಗೆ ಕಾರು ವಿನ್ಯಾಸಕ ದಿಲೀಪ್ ಛಾಬ್ರಿಯಾ ಅವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಛಾಬ್ರಿಯಾರವರ ಬಳಿಯಿಂದ ಆಮದು ಎಂಜಿನ್, ಕಸ್ಟಮೈಸ್ ಮಾಡಿದ ಹಾಗೂ ಮಾಡಿಫೈಗೊಂಡ ಹಲವು ವಾಹನಗಳ ನೋಂದಣಿ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪುಣೆಯಲ್ಲಿರುವ ಡಿಸಿ ಘಟಕದಿಂದ ಎಲ್ಲಾ ವಾಹನಗಳ ಡ್ಯುಯಲ್ ರಿಜಿಸ್ಟ್ರೇಷನ್ ಸಂಖ್ಯೆಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರಿಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಅವಂತಿ ಬಳಕೆಗಾಗಿ 400 ಎಂಜಿನ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಆದರೆ, ಅವಂತಿಯು 127 ಯುನಿಟ್‌ಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡಿದೆ. ಈ ಪೈಕಿ 68 ಕಾರುಗಳನ್ನು ದಿಲೀಪ್ ಛಾಬ್ರಿಯಾ ಮತ್ತು ಅವರ ಕುಟುಂಬವು ಬಳಸಿದ್ದು ಎಲ್ಲವು ಡ್ಯುಯಲ್ ರಿಜಿಸ್ಟ್ರೇಷನ್ ಸಂಖ್ಯೆಗಳನ್ನು ಹೊಂದಿವೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಕಾರುಗಳ ಮೂಲಕ ವಂಚನೆ ಎಸಗಿ ಹಲವು ಬಾರಿ ಸಾಲ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿಯೂ ಅಪರಾಧ ವಿಭಾಗವು ದಿಲೀಪ್ ಛಾಬ್ರಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಆತನ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ 19 ಹೈ ಎಂಡ್ ಕಾರು ಹಾಗೂ ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ವಾಹನಗಳ ಮಾಲೀಕರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ದಿಲೀಪ್ ಛಾಬ್ರಿಯಾ ಅವರನ್ನು ಜನವರಿ 7ರವರೆಗೆ ಬಂಧನದಲ್ಲಿಡಲಾಗಿದೆ. ಇದೊಂದು ದೊಡ್ಡ ಹಗರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಹಗರಣದಡಿಯಲ್ಲಿ ಸುಮಾರು 100 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಹೇಳಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಪ್ರಕರಣದಲ್ಲಿ ಬೊನಿಟೊ, ಅವರ ಸಹೋದರಿ ಕಾಂಚನ್, ಕಂಪನಿಯ ನಿರ್ದೇಶಕರಾದ ಚೋಕಲಿಂಗಂ ಹಾಗೂ ಸೆಲ್ವಾರ ಅವರ ಸಹ ವಂಚನೆ ಎಸಗಿರುವ ಕಾರಣಕ್ಕೆ ಪೊಲೀಸರು ಅವರುಗಳನ್ನು ಸಹ ಹುಡುಕಾಡುತ್ತಿದ್ದಾರೆ.

ದಿಲೀಪ್ ಛಾಬ್ರಿಯಾ ಪ್ರಸಿದ್ಧ ಕಾರು ವಿನ್ಯಾಸಕರಾಗಿದ್ದು, ಅವರ ಡಿಸಿ 2 ಕಂಪನಿಯಲ್ಲಿ ಹಲವಾರು ಜನಪ್ರಿಯ ಕಾರುಗಳನ್ನು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಕ್ರಿಕೆಟಿಗ ಹಾಗೂ ನಟಿಯೊಬ್ಬರು ಕೂಡ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.