35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್‌ ಜೊತೆಗೆ ಕಾರುಗಳ ಬಗ್ಗೆ ಕ್ರೇಜ್‌ ಹೊಂದಿದ್ದಾರೆ. ರವಿಶಾಸ್ತ್ರಿ ದುಬಾರಿ ಬೆಲೆಯ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರು ಕಸ್ಟಮೈಸ್ ಮಾಡಲಾದ ತಮ್ಮ ಕಾರಿನ ವೀಡಿಯೊವನ್ನು ಶೇರ್ ಮಾಡಿದ್ದಾರೆ.

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ರವಿಶಾಸ್ತ್ರಿ ಆಡಿ, ಮರ್ಸಿಡಿಸ್ ಬೆಂಝ್, ಫೋರ್ಡ್ ಹಾಗೂ ಬಿಎಂಡಬ್ಲ್ಯು ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ. ಈಗ ಅವರು ತಮ್ಮ ಬಳಿಯಿದ್ದ ಆಡಿ ಕಾರನ್ನು ಕಸ್ಟಮೈಸ್ ಮಾಡಿದ್ದಾರೆ. ಇದರ ಬಗ್ಗೆ ಮಾಹಿತಿಯನ್ನು ಸಹ ನೀಡಿದ್ದಾರೆ. 35 ವರ್ಷಗಳ ಹಿಂದೆ ಭಾರತೀಯ ಉಪಖಂಡದಲ್ಲಿ ಆಡಿ ಕಾರುಗಳನ್ನು ಹೊಂದಿದ್ದ ಕೆಲವೇ ಕೆಲವು ಮಾಲೀಕರ ಪೈಕಿ ತಾವು ಸಹ ಒಬ್ಬರು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ಇಷ್ಟು ವರ್ಷಗಳ ನಂತರವೂ ಆಡಿ ಕಾರಿನ ಮೇಲೆ ಕುಳಿತುಕೊಳ್ಳಬಹುದೆಂದು ಹಾಗೂ ಅದರ ಮೇಲೆ ತಮ್ಮ ಹೆಸರನ್ನು (ಆರ್‌ಎಸ್ 5) ಬರೆಯಬಹುದೆಂದು ಊಹಿಸಿರಲಿಲ್ಲವೆಂದು ಅವರು ಹೇಳಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ರವಿಶಾಸ್ತ್ರಿ 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಈ ಆಡಿ ಎ 6 ಸೆಡಾನ್ ಕಾರನ್ನು ಬಹುಮಾನವಾಗಿ ನೀಡಲಾಗಿತ್ತು. ಇದರ ಬಗ್ಗೆ ಅವರು ಕಪಿಲ್ ದೇವ್ ಅವರೊಂದಿಗೆ ಮಾತನಾಡಿದ್ದರು. ಕಪಿಲ್ ದೇವ್ ಕಾರಿನ ಬೆಲೆಯನ್ನು ಹಂಚಿಕೊಂಡರೆ ಯಾವುದೇ ತೊಂದರೆ ಇಲ್ಲವೆಂದು ಹೇಳಿದ್ದರು.

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ರವಿಶಾಸ್ತ್ರಿರವರು ಈ ಆಡಿ ಕಾರನ್ನು ಗೆದ್ದರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಏನನ್ನಾದರೂ ಹಂಚಿಕೊಳ್ಳಲು ಬಯಸಿದರೆ, ಕಾರಿನ ಬೂಟ್‌ನಲ್ಲಿರುವ ಸ್ಟೆಪ್ನಿಯನ್ನು ಮಾತ್ರ ಹಂಚಿಕೊಳ್ಳುವುದಾಗಿ ಹೇಳಿದ್ದರು. ರವಿಶಾಸ್ತ್ರಿ ಆಡಿ ಎ 6 ಕಾರನ್ನು ಗೆದ್ದ ನಂತರ ಈ ಕಾರಿನಲ್ಲಿ ತಮ್ಮ ತಂಡದ ಸದಸ್ಯರೊಂದಿಗೆ ಸುತ್ತಾಡಲು ಹೋಗಿದ್ದರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

1985ರಲ್ಲಿ ಗೆದ್ದ ಕಾರನ್ನು ರವಿಶಾಸ್ತ್ರಿ ಇನ್ನೂ ಹೊಂದಿದ್ದಾರೆ. ರವಿಶಾಸ್ತ್ರಿ ಮಾತ್ರವಲ್ಲದೇ ಹಲವು ಕ್ರಿಕೆಟಿಗರು ಆಡಿ ಕಾರುಗಳನ್ನು ಹೊಂದಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದರೆ, ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್ ಆಡಿ ಕಾರುಗಳನ್ನು ಹೊಂದಿದ್ದಾರೆ.

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ಕಸ್ಟಮೈಸ್ ಮಾಡಲಾದ ಈ ಆಡಿ ಕಾರಿನ ಮುಂಭಾಗದ ಗ್ರಿಲ್‌ನಲ್ಲಿ ಆರ್‌ಎಸ್ 5 ಎಂದು ಕೆತ್ತಲಾಗಿದೆ. ಆರ್‌ಎಸ್ 5 ಅಕ್ಷರಗಳು ನೀಲಿ ಬಣ್ಣದಲ್ಲಿವೆ. ಆಡಿ ಆರ್‌ಎಸ್ 5 ಕಾರು ಅತ್ಯಂತ ಸ್ಪೋರ್ಟಿ ಹಾಗೂ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ಆಡಿ ಆರ್‌ಎಸ್ 5 ಕೂಪೆ ಐಷಾರಾಮಿ ಕಾರು ಈಗಾಗಲೇ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಆಡಿ ಕಂಪನಿಯು 2018ರ ಆಡಿ ಆರ್‌ಎಸ್ 5 ಕೂಪೆ ಕಾರನ್ನು ಪೂರ್ತಿಯಾಗಿ ಹೊಸ ಪ್ಲಾಟ್ ಫಾರಂನಲ್ಲಿ ತಯಾರಿಸಿದೆ.

35 ವರ್ಷ ಹಳೆಯ ಕಾರಿನ ಮೇಲೆ ತಮ್ಮ ಹೆಸರನ್ನು ಕೆತ್ತಿಸಿಕೊಂಡ ಟೀಂ ಇಂಡಿಯಾ ಕೋಚ್

ಹೊಸ ಪ್ಲಾಟ್‌ಫಾರಂನಲ್ಲಿ ತಯಾರಾಗಿರುವ 2018ರ ಆರ್‌ಎಸ್ 5 ಕೂಪೆ ಮೊದಲಿಗಿಂತ 60 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ. ಈ ಕಾರಿನ ಗಾತ್ರಗಳು ಮೊದಲಿಗಿಂತ ದೊಡ್ಡದಾಗಿವೆ. ಕಡಿಮೆ ತೂಕದ ಕಾರಣಕ್ಕೆ ಹೊಸ ಆರ್‌ಎಸ್‌ 5 ಕೂಪೆ ಕಾರಿನ ಪರ್ಫಾಮೆನ್ಸ್ ಸಹ ಹೆಚ್ಚಾಗಿದೆ.

Most Read Articles

Kannada
English summary
Ravi Shastri gets his name on his 35 years old car. Read in Kannada.
Story first published: Saturday, September 12, 2020, 14:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X