ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡುವ ಸಂದರ್ಭಗಳಿವು

ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್'ಗಳನ್ನು ಆನ್ ಮಾಡಲಾಗುತ್ತದೆ. ಇದರಿಂದ ಆಂಬುಲೆನ್ಸ್ ಬರುತ್ತಿದೆ ಎಂದು ರಸ್ತೆಯಲ್ಲಿರುವ ಎಲ್ಲರಿಗೂ ತಿಳಿಯುತ್ತದೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್'ಗಳನ್ನು ಯಾವಾಗ ಆನ್ ಮಾಡಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಯಾವಾಗಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲಾಗುತ್ತದೆ ಎಂಬ ಸಂಗತಿ ಬಹುತೇಕ ಜನರಿಗೆ ತಿಳಿದಿಲ್ಲ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಆಂಬ್ಯುಲೆನ್ಸ್‌ಗಳಲ್ಲಿ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲು ಸಾಕಷ್ಟು ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತದೆ. ಅವು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ತುರ್ತು ಪರಿಸ್ಥಿತಿ ಕೊನೆಗೊಂಡಾಗ ಅಥವಾ ಆಂಬುಲೆನ್ಸ್ ಒಂದೇ ಸ್ಥಳದಲ್ಲಿ ದೀರ್ಘಕಾಲ ನಿಲ್ಲಬೇಕಾದಾಗ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲಾಗುತ್ತದೆ. ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದರೆ ಎಮರ್ಜೆನ್ಸಿ ಲೈಟ್'ಗಳನ್ನು ಆನ್ ಮಾಡುವ ಅಗತ್ಯವಿಲ್ಲ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಆದ್ದರಿಂದ ತುರ್ತು ಪರಿಸ್ಥಿತಿ ಮುಗಿದ ತಕ್ಷಣ ಎಚ್ಚರಿಕೆ ದೀಪಗಳನ್ನು ಆಫ್ ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಯ ಅಂತ್ಯವನ್ನು ಎರಡು ಕಾರಣಗಳಿಂದ ನಿರ್ಧರಿಸಲಾಗುತ್ತದೆ. ರೋಗಿಯ ಆರೋಗ್ಯ ಪರಿಸ್ಥಿತಿ ಅಪಾಯದ ರೇಖೆಯನ್ನು ದಾಟಿದರೆ ತುರ್ತು ಪರಿಸ್ಥಿತಿಯೆಂದು ಪರಿಗಣಿಸಲಾಗುತ್ತದೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಕೆಲವು ಸಂದರ್ಭಗಳಲ್ಲಿ ರೋಗಿಗಳು ಚಿಂತಾಜನಕ ಸ್ಥಿತಿಯಲ್ಲಿರುತ್ತಾರೆ. ಆಂಬುಲೆನ್ಸ್‌ಗಳಲ್ಲಿರುವ ಅರೆವೈದ್ಯಕೀಯ ಸಿಬ್ಬಂದಿ ಅವರನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಇದರ ಒಂದು ಭಾಗವೆಂದರೆ ಸಿಪಿಆರ್ (ಸಿಪಿಆರ್ - ಕಾರ್ಡಿಯೋ ಪಲ್ಮನರಿ ರೆಸಿಸಿಯೊಷನ್) ಚಿಕಿತ್ಸೆ. ರೋಗಿಗಳ ಜೀವ ಉಳಿಸಲು ಚೆಸ್ಟ್ ಕಂಪ್ರೇಷನ್, ಬಾಯಿಯಿಂದ ಬಾಯಿಗೆ ಸಂಪರ್ಕದಂತಹ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಈ ರೀತಿಯ ಚಿಕಿತ್ಸೆಗಳು ರೋಗಿಯ ಆರೋಗ್ಯವನ್ನು ಚೇತರಿಸಿಕೊಳ್ಳುವಂತೆ ಮಾಡುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ರೋಗಿಗಳಿಗೆ ಪ್ರಜ್ಞೆ ಬರುವ ಸಾಧ್ಯತೆಗಳಿರುತ್ತವೆ. ರೋಗಿಯ ದೈಹಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಲ್ಲಿ, ಅವಸರದಲ್ಲಿ ಎಂಬುದರ ಬದಲಿಗೆ ಅವಸರದಲ್ಲಿಲ್ಲಎಂದು ಪ್ರಾಯೋಗಿಕವಾಗಿ ವರ್ಗೀಕರಿಸಲಾಗುತ್ತದೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಅಂತಹ ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲಾಗುತ್ತದೆ. ಆಂಬ್ಯುಲೆನ್ಸ್‌ಗಳಲ್ಲಿರುವ ಅರೆ ವೈದ್ಯಕೀಯ ಸಿಬ್ಬಂದಿ ರೋಗಿಗಳ ಜೀವ ಉಳಿಸಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಆದರೆ ಕೆಲವೊಮ್ಮೆ ಎಲ್ಲಾ ಪ್ರಯತ್ನಗಳ ನಡುವೆಯೂ ರೋಗಿಗಳು ಮೃತಪಡುತ್ತಾರೆ. ರೋಗಿಯು ಉಸಿರಾಟವನ್ನು ನಿಲ್ಲಿಸಿದರೆ ಅಥವಾ ಹೃದಯ ಬಡಿತವನ್ನು ನಿಲ್ಲಿಸಿದರೆ, ರೋಗಿ ಮೃತರಾಗಿದ್ದಾರೆಂದು ಘೋಷಿಸಲಾಗುತ್ತದೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಅಂತಹ ಸಂದರ್ಭಗಳಲ್ಲಿ ಆಂಬುಲೆನ್ಸ್‌ಗಳಲ್ಲಿ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಬಹುದು. ಆಂಬ್ಯುಲೆನ್ಸ್‌ ಚಾಲಕರು ಸಾಕಷ್ಟು ಅಪಾಯವನ್ನು ತೆಗೆದುಕೊಳ್ಳುತ್ತಾರೆ. ಟ್ರಾಫಿಕ್ ಜಾಮ್‌ನಲ್ಲಿಯೂ ವೇಗವಾಗಿ ಚಲಿಸಿ ರೋಗಿಗಳ ಪ್ರಾಣ ಉಳಿಸಲು ಪ್ರಯತ್ನಿಸುತ್ತಾರೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ರೋಗಿಯು ಬದುಕುಳಿಯುವ ಸಾಧ್ಯತೆಗಳಿದ್ದರೆ ಈ ರೀತಿ ಅಪಾಯಕ್ಕೆ ಕೈಹಾಕುತ್ತಾರೆ. ಒಂದು ವೇಳೆ ಆಂಬುಲೆನ್ಸ್‌ನೊಳಗಿರುವ ರೋಗಿ ಮೃತ ಪಟ್ಟರೆ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಆಗ ಆಂಬ್ಯುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲಾಗುತ್ತದೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಆಂಬ್ಯುಲೆನ್ಸ್‌ಗಳು ಹೆಚ್ಚು ಸಮಯ ಕಾಯುವಾಗಲೂ ಸಹ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲಾಗುತ್ತದೆ. ದೀರ್ಘಾವಧಿಗೆ ಕಾಯುತ್ತಿದ್ದರೆ ಎಂಜಿನ್ ಆಫ್ ಮಾಡಲಾಗುತ್ತದೆ. 15 ನಿಮಿಷಗಳಿಗಿಂತ ಹೆಚ್ಚು ಕಾಲ ಕಾಯುತ್ತಿದ್ದರೆ ಆಂಬ್ಯುಲೆನ್ಸ್ ಸಿಬ್ಬಂದಿ ಎಂಜಿನ್ ಆಫ್ ಮಾಡುತ್ತಾರೆ.

ಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್ ಆಫ್ ಆಗುವ ಸಂದರ್ಭಗಳಿವು

ಆಂಬ್ಯುಲೆನ್ಸ್‌ಗಳು ಐಡ್ಲಿಂಗ್'ನಲ್ಲಿದ್ದಾಗ ಸಹ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲಾಗುತ್ತದೆ. ಆಂಬ್ಯುಲೆನ್ಸ್‌ಗಳು ಆಸ್ಪತ್ರೆಯನ್ನು ಸಮೀಪಿಸುತ್ತಿದ್ದಂತೆಆಂಬುಲೆನ್ಸ್‌ಗಳಲ್ಲಿರುವ ಎಮರ್ಜೆನ್ಸಿ ಲೈಟ್'ಗಳನ್ನು ಆಫ್ ಮಾಡಲಾಗುತ್ತದೆ.

Most Read Articles

Kannada
English summary
Reasons for turning off emergency lights in ambulance. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X