ಲಾಕ್‌ಡೌನ್ ಎಫೆಕ್ಟ್: ಕಳೆದ 20 ದಿನಗಳಿಂದ ಇವರದ್ದು ಕಾರಿನಲ್ಲೇ ವಾಸ್ತವ್ಯ..

ದೇಶದಲ್ಲಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ, ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದು ಊರಿನಲ್ಲಿ ಸಿಲುಕಿಕೊಂಡವರಿಗೆ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಅವಧಿ ಮುಗಿಯುವವರೆಗೂ ಇರುವ ಜಾಗದಲ್ಲಿಯೇ ಇರಬೇಕಾಗುತ್ತದೆ.

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ಇದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕರ್ನಾಟಕ ಮೂಲದವರಿಬ್ಬರು ತಮ್ಮ ನಿಸ್ಸಾನ್ ಮೈಕ್ರಾ ಕಾರಿನೊಂದಿಗೆ ಗುಜರಾತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಕಳೆದ 20 ದಿನಗಳಿಂದ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪಾರಿಗಳಾದ ಆಶಿಕ್ ಹುಸೇನ್ ಹಾಗೂ ಮೊಹಮ್ಮದ್ ಠಾಕಿನ್ ಮರಿಲ್‌ರವರುಗಳೇ ಗುಜರಾತ್‌ನಲ್ಲಿ ಸಿಲುಕಿಕೊಂಡವರು.

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ಇವರಿಬ್ಬರೂ ಲಾಕ್‌ಡೌನ್ ಘೋಷಿಸುವ ಮೊದಲು ಸಭೆಯೊಂದರಲ್ಲಿ ಭಾಗವಹಿಸಲು ಗುಜರಾತ್‌ಗೆ ತೆರಳಿದ್ದರು. ಲಾಕ್‌ಡೌನ್ ಘೋಷಣೆಯ ನಂತರ ಮರಳಿ ಬರಲು ಯತ್ನಿಸಿದಾಗ ಅವರನ್ನು ಗುಜರಾತ್‌ನ ಉಂಬರ್ಗಾಂವ್‌ನಲ್ಲಿರುವ ಚೆಕ್ ಪಾಯಿಂಟ್‌ನಲ್ಲಿ ತಡೆದು ನಿಲ್ಲಿಸಲಾಯಿತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ಅವರು ತಮ್ಮ ಊರು ಹಾಗೂ ಕುಟುಂಬದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೂ ಸಹ ಅವರಿಗೆ ಅಲ್ಲಿಂದ ತೆರಳಲು ಅವಕಾಶ ನೀಡಿಲ್ಲ. ಅಂದಿನಿಂದ, ಅವರು ತಮ್ಮ ನಿಸ್ಸಾನ್ ಮೈಕ್ರಾ ಕಾರನ್ನು ಇತರ ಟ್ರಕ್‌ಗಳೊಂದಿಗೆ ನಿಲ್ಲಿಸಿ, ಕಳೆದ 20 ದಿನಗಳಿಂದ ಕಾರ್ ಅನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ತಮ್ಮ ಕಾರಿನಲ್ಲಿಯೇ ಮಲಗಿ, ಕಾರಿನಲ್ಲಿಯೇ ದಿನ ಕಳೆಯುತ್ತಿದ್ದಾರೆ. ಹತ್ತಿರದಲ್ಲಿರುವ ಹೋಟೆಲ್ ನಿರ್ವಾಹಕರು ಅವರಿಗೆ ವಾಶ್‌ರೂಮ್ ಹಾಗೂ ಶೌಚಾಲಯವನ್ನು ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರು ಅವರಿಗೆ ಆಹಾರ ಹಾಗೂ ಔಷಧಿಗಳನ್ನು ನೀಡುತ್ತಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ಅವರಿಗೆ ಮಲಗಲು ಹಾಸಿಗೆ ಕೂಡ ಇಲ್ಲ. ರಶೀದ್ ಎಂಬ ವ್ಯಕ್ತಿ ಇವರಿಗೆ ನೆರವಾಗುತ್ತಿದ್ದು, ಈ ವಿಷಯವನ್ನು ಅಲ್ಲಿನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದರ ಜೊತೆಗೆ ಇವರ ಕುಟುಂಬದವರು ಅವರನ್ನು ಮನೆಗೆ ಕಳುಹಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರು ವಲ್ಸಾದ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಇವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಇವರಿಬ್ಬರೂ ಸ್ಥಳೀಯ ಆಡಳಿತದಿಂದ ಇನ್ನೂ ಯಾವುದೇ ನೆರವನ್ನು ಪಡೆದಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ನಿಸ್ಸಾನ್ ಮೈಕ್ರಾ ಸಣ್ಣ ಹ್ಯಾಚ್‌ಬ್ಯಾಕ್ ಕಾರ್ ಆಗಿದ್ದು, ಈ ಕಾರಿನಲ್ಲಿ ಇಬ್ಬರು ಮಲಗುವುದು ಕಷ್ಟವಾಗುತ್ತದೆ. ಈ ಕಾರಿನಲ್ಲಿ ಹಗಲು ರಾತ್ರಿ ಕಳೆಯುವುದು ಕಷ್ಟದ ಕೆಲಸ. ಅವರಿಗೆ ಆದಷ್ಟು ಬೇಗ ಪರಿಹಾರ ಸಿಗುವ ನಿರೀಕ್ಷೆಗಳಿವೆ.

ಲಾಕ್‌ಡೌನ್ ಎಫೆಕ್ಟ್: 20 ದಿನಗಳಿಂದ ಕಾರಿನಲ್ಲೇ ಇರುವ ವ್ಯಾಪಾರಿಗಳು

ಇದೇ ರೀತಿಯ ಹಲವು ಘಟನೆಗಳು ನಡೆದಿವೆ. ಇತ್ತೀಚಿಗೆ ತೆಲಂಗಾಣದ ಮಹಿಳೆಯೊಬ್ಬರು ಆಂಧ್ರಪ್ರದೇಶದಲ್ಲಿ ಸಿಕ್ಕಿಕೊಂಡಿದ್ದ ತಮ್ಮ ಮಗನನ್ನು ಕರೆತರಲು ಸ್ಕೂಟರ್‌ನಲ್ಲಿ 1400 ಕಿ.ಮೀ ಪ್ರಯಾಣ ಬೆಳೆಸಿದ್ದರು.

Most Read Articles

Kannada
English summary
Two men sleep in a Nissan Micra for 20 days because of lockdown. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more