ಮುಂದಿನ 7 ವರ್ಷದಲ್ಲಿ ಬರೊಬ್ಬರಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ತಮ್ಮ ಹೊಚ್ಚ ಹೊಸ ಮಿಟಿಯೊರ್ 350 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.75 ಲಕ್ಷಗಳಾಗಿದೆ.

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಯಲ್ ಎನ್‌ಫೀಲ್ಡ್ ಸಿಇಒ ವಿನೋದ್ ದಸರಿ ಅವರು ಮುಂದಿನ ಏಳು ವರ್ಷಗಳಲ್ಲಿ ಒಟ್ಟು 28 ಹೊಸ ಬೈಕುಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಕಂಪನಿಯು ಯೋಜಿಸುತ್ತಿದೆ ಎಂದು ಹೇಳಿದರು. ಪ್ರತಿ ತ್ರೈಮಾಸಿಕದಲ್ಲಿ ಕಂಪನಿಯು ಹೊಚ್ಚ ಹೊಸ ಬೈಕನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ಯೋಜನೆಯನ್ನು ಹೊಂದಿದೆ ಎಂದು ದಸರಿ ಹೇಳಿದ್ದಾರೆ.

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ನಾವು ಈಗ ಮುಂದಿನ ಐದರಿಂದ ಏಳು ವರ್ಷಗಳವರೆಗೆ ಉತ್ಪನ್ನ ಯೋಜನೆಯನ್ನು ಪಡೆದುಕೊಂಡಿದ್ದೇವೆ. ನಾವು ಪ್ರತಿ ತ್ರೈಮಾಸಿಕದಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲು ನೋಡುತ್ತಿದ್ದೇವೆ. ನಾನು ರೂಪಾಂತರಗಳು ಮತ್ತು ಬಣ್ಣ ಆಯ್ಕೆಗಳ ರೀತಿಯ ವಿಷಯಗಳ ಬಗ್ಗೆ ಸಹ ಮಾತನಾಡುತ್ತಿಲ್ಲ. ನಾವು 28 ಬೈಕುಗಳನ್ನು ಮುಂದಿನ ಏಳು ವರ್ಷಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದೇವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ಹೊಸ ಮುಂಬರುವ ರಾಯಲ್ ಎನ್‌ಫೀಲ್ಡ್ 250 ಸಿಸಿ ಯಿಂದ 750 ಸಿಸಿ ವ್ಯಾಪ್ತಿಯಲ್ಲಿರುತ್ತವೆ ಎಂದು ದಸಾರಿ ಹೇಳಿದರು, 250 ಸಿಸಿ ಯಿಂದ 750 ಸಿಸಿಯ ಮಿಡಿ ವಿಭಾಗಕ್ಕೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತದೆ ಎಂದು ಹೇಳಿದರು.

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ಇಂತಹ ಆಕ್ರಮಣಕಾರಿ ಮಾರಾಟ ತಂತ್ರಕ್ಕೆ ಅಗತ್ಯವಾದ ಹೂಡಿಕೆಗಳು ಮತ್ತು ಉತ್ಪಾದನಾ ಸಾಮರ್ಥ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ದಾಸರಿ ಬಹಿರಂಗಪಡಿಸಲಿಲ್ಲ. ಮುಂದಿನ 2 ರಿಂದ 3 ವರ್ಷಗಳವರೆಗೆ ನಮಗೆ ಸಾಕಷ್ಟು ಉತ್ಪಾದನಾ ಸಾಮರ್ಥ್ಯವಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ಆದ್ದರಿಂದ, ನಮ್ಮ ಹೂಡಿಕೆಗಳ ಮಹತ್ವದ ಭಾಗವನ್ನು ಹೊಸ ಮಾದರಿಗಳು, ತಂತ್ರಜ್ಞಾನ ಮತ್ತು ಸಾಮರ್ಥ್ಯ ವರ್ಧನೆ ಮತ್ತು ಜಾಗತಿಕ ವಿಸ್ತರಣೆಯತ್ತ ನಿರ್ದೇಶಿಸಲಾಗುವುದು" ಎಂದು ಅವರು ಉಲ್ಲೇಖಿಸಿದ್ದಾರೆ.

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ಕಂಪನಿಯು ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಬೈಕುಗಳ ಭಾಗದತ್ತ ಗಮನ ಹರಿಸಲಿದೆ ಎಂದು ವಿನೋದ್ ಹೇಳಿದ್ದಾರೆ. ಈ ವಿಭಾಗವು ತನ್ನ ಪ್ರತಿಸ್ಪರ್ಧಿಗಳಿಂದ ಇತ್ತೀಚಿನ ಬೆಳವಣಿಗೆಗಳೊಂದಿಗೆ ರಾಯಲ್ ಎನ್‌ಫೀಲ್ಡ್ ಬೈಕುಗಳಿಗೆ ಉತ್ತಮ ಪೈಪೋಟಿಯನ್ನು ನೀಡುತ್ತಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ಅದರಲ್ಲೂ ವಿಶೇಷವಾಗಿ ಹೀರೋ-ಹಾರ್ಲೆ ಡೇವಿಡ್ಸನ್ ನಡುವಿನ ಪಾಲುದಾರಿಕೆ ಮತ್ತು ಹೋಂಡಾ ಹೈನಸ್ ಸಿಬಿ 350 ಪರಿಚಯದೊಂದಿಗೆ ಈ ವಿಭಾಗದಲ್ಲಿ ಪೈಪೋಟಿಯು ಮತ್ತಷ್ಟು ಹೆಚ್ಚಾಗಲಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಮಿಟಿಯೊರ್ 350 ಬೈಕಿನ ಬಿಡುಗಡೆಯೊಂದಿಗೆ ಗೇರ್‌ಗಳನ್ನು ಬದಲಾಯಿಸಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆಯಲು ಪ್ರಯತ್ನಿಸುತ್ತಿದೆ.

ಮುಂದಿನ 7 ವರ್ಷದಲ್ಲಿ 28 ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍ಫೀಲ್ಡ್ ಯುವಕರ ಕನಸಿನ ಬೈಕ್. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆ.

Most Read Articles

Kannada
English summary
Royal Enfield To Introduce 28 New Bikes Over The Next 7 Years. Read In Kannada.
Story first published: Monday, November 9, 2020, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X