Just In
Don't Miss!
- News
ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಟಿಎಂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಸ್ಟಾಸೈಕ್
ಎಲೆಕ್ಟ್ರಿಕ್ ಸೈಕಲ್ ತಯಾರಕ ಕಂಪನಿಯಾದ ಸ್ಟಾಸೈಕ್, ಕೆಟಿಎಂ ಕಂಪನಿಯ ಎರಡು ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದೆ. ಕೆಟಿಎಂ ಕಂಪನಿಯು ಎಲೆಕ್ಟ್ರಿಕ್ ಬೈಕ್ ಹಾಗೂ ಸೈಕಲ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಕಂಪನಿಯು ಶೀಘ್ರದಲ್ಲೇ ಎಲೆಕ್ಟ್ರಿಕ್ ಬೈಕ್ ಗಳನ್ನು ಬಿಡುಗಡೆಗೊಳಿಸಲಿದೆ. ಸ್ಟಾಸೈಕ್ ಕಂಪನಿಯನ್ನು ಇತ್ತೀಚೆಗಷ್ಟೇ ಹಾರ್ಲೆ ಡೇವಿಡ್ಸನ್ ಕಂಪನಿಯು ಖರೀದಿಸಿದೆ. ಸ್ಟಾಸೈಕ್ ಕೆಟಿಎಂನ ಎರಡು ರೆಪ್ಲಿಕಾ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ 12 ಇ ಡ್ರೈವ್ ಹಾಗೂ 16 ಇ ಡ್ರೈವ್ ಬ್ಯಾಲೆನ್ಸ್ ಎಲೆಕ್ಟ್ರಿಕ್ ಸೈಕಲ್‌ಗಳು ಸೇರಿವೆ. 12 ಇ ಡ್ರೈವ್ ಸೈಕಲ್ ಗಳು, 12 ಇಂಚಿನ ವ್ಹೀಲ್ ಗಳನ್ನು ಹೊಂದಿದ್ದರೆ, 16 ಇ ಡ್ರೈವ್ ಸೈಕಲ್ ಗಳು 16 ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಈ ಎರಡೂ ಬ್ಯಾಲೆನ್ಸ್ ಸೈಕಲ್ ಗಳು ಕಂಫರ್ಟಬಲ್ ರೈಡಿಂಗ್ ಹಾಗೂ ಸೆಲ್ಫ್ ಬ್ಯಾಲೆನ್ಸಿಂಗ್‌ನಂತಹ ಫೀಚರ್ ಗಳನ್ನು ಹೊಂದಿವೆ. ಈ ಸೈಕಲ್‌ಗಳಲ್ಲಿ ಎರಡು ರೈಡಿಂಗ್ ಮೋಡ್‌ಗಳಿದ್ದು, ವೇಗಕ್ಕೆ ತಕ್ಕಂತೆ ಬದಲಿಸಬಹುದು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಸೈಕಲ್‌ಗಳಲ್ಲಿ, 13 ಇಂಚುಗಳಿಂದ 17 ಇಂಚುಗಳವರೆಗಿನ ಅಡ್ಜಸ್ಟಬಲ್ ಸೀಟುಗಳನ್ನು ನೀಡಲಾಗಿದೆ. ಇದರಿಂದ ಎಲ್ಲಾ ವಯಸ್ಸಿನವರು ಈ ಸೈಕಲ್ ಗಳನ್ನು ಬಳಸಬಹುದು. ಈ ಎರಡೂ ಸೈಕಲ್‌ಗಳು 40-60 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತವೆ.

ಈ ಸೈಕಲ್‌ಗಳಲ್ಲಿ ತೆಗೆಯಬಹುದಾದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಅವುಗಳನ್ನು ಸುಲಭವಾಗಿ ಹೊರತೆಗೆದು, ಚಾರ್ಜ್ ಮಾಡಬಹುದು. ಪೂರ್ತಿಯಾಗಿ ಚಾರ್ಜ್ ಆದ ನಂತರ, ಈ ಸೈಕಲ್ ಗಳನ್ನು 30-60 ನಿಮಿಷಗಳವರೆಗೆ ಚಲಾಯಿಸಬಹುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಎರಡೂ ಸೈಕಲ್‌ಗಳ ಬಿಡಿಭಾಗಗಳ ಬೆಲೆ 160 ಡಾಲರ್ ಅಂದರೆ ರೂ.12,400ಗಳಿಂದ ಆರಂಭವಾಗುತ್ತದೆ. ಸ್ಟಾಸೈಕ್ ಕೆಟಿಎಂ 12 ಇ ಡ್ರೈವ್ ಸೈಕಲಿನ ಬೆಲೆ ರೂ.49,000ಗಳಾದರೆ,16 ಇ ಡ್ರೈವ್ ಸೈಕಲಿನ ಬೆಲೆ ರೂ.64,100ಗಳಾಗಿದೆ.

ಸ್ಟಾಸೈಕ್ ಕಂಪನಿಯು ಈ ಎರಡೂ ಸೈಕಲ್‌ಗಳನ್ನು ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದೆ. ಆದರೂ ಎಲ್ಲಾ ವಯಸ್ಸಿನವರು ಇವುಗಳನ್ನು ಬಳಸಬಹುದು. ಭಾರತದಲ್ಲಿ ಮಕ್ಕಳಿಗೆ ದುಬಾರಿ ಬೆಲೆ ಎನಿಸಲಿದೆ.