2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ 2021ರ ಸ್ಟಾರ್ ಸಿಟಿ ಪ್ಲಸ್‌ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಟಿವಿಎಸ್ ತನ್ನ 2021ರ ಸ್ಟಾರ್ ಸಿಟಿ ಪ್ಲಸ್‌ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಟೀಸರ್ ಚಿತ್ರದಲ್ಲಿ ಪ್ರದರ್ಶಿಸಿದ ಬೈಕ್ ಹೊಸ ಸ್ಪೆಷಲ್ ಎಢಿಷನ್ ಮಾದರಿ ಅಥವಾ ಹೊಸ ಆಲ್-ಬ್ಲ್ಯಾಕ್ ಬಣ್ಣದ ಆಯ್ಕೆಯಾಗಿರಬಹುದು. ಟೀಸರ್ ಚಿತ್ರದಲ್ಲಿ ಬೈಕ್‌ನ ಗೋಚರಿಸುವ ಅಂಶಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲುತ್ತದೆ. ಕಳೆದ ವರ್ಷ ಟಿವಿಎಸ್ ಕಂಪನಿಯು ಸ್ಟಾರ್ ಸಿಟಿ ಪ್ಲಸ್ ಬೈಕಿನ ಬಿಎಸ್ 6 ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಟೀಸರ್ ನಲ್ಲಿ ಹೇಳಿದೆ.

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕಿನಲ್ಲಿ ಬ್ಲ್ಯಾಕ್ ಹೆಚ್ಚಾಗಿ ಬ್ಲ್ಯಾಕ್ ಅಂಶಗಳಿಂದ ಕೂಡಿದೆ. ಇದರ ಫೀಚರ್ ಗಳ ವಿಷಯದಲ್ಲಿ ಸ್ಟೈಲಿಶ್ ಸಿಲ್ವರ್ ಸುತ್ತುವರೆದಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಟಿವಿಎಸ್ ಬ್ರ್ಯಾಂಡಿಂಗ್‌ನೊಂದಿಗೆ ಎತ್ತರದ ವಿಸರ್ ಅನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಇನ್ನು ಇದರೊಂದಿಗೆ ಬ್ಲ್ಯಾಕ್ ಮೀರರ್, ಕ್ಲೀಯರ್ ಲೆನ್ಸ್ ಇಂಡೀಕೆಟರ್, ಉದ್ದವಾದ ಸಿಂಗಲ್-ಪೀಸ್ ಸೀಟ್ ಮತ್ತು ಗ್ರ್ಯಾಬ್ ರೈಲ್ ಗಳನ್ನು ಹೊಂದಿವೆ. ಈ ಎಲ್ಲಾ ಫೀಚರ್ ಗಳನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಯಲ್ಲಿ ನೀಡಲಾಗಿದೆ,

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ 109.7 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. 2021ರ ಮಾದರಿಯಲ್ಲಿಯು ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಈ 109.7 ಸಿಸಿ ಎಂಜಿನ್‍ 7,350 ಆರ್‍‍ಪಿಎಂನಲ್ಲಿ 8.08 ಬಿ‍‍ಹೆಚ್‍‍ಪಿ ಪವರ್ ಮತ್ತು 7,350 ಆರ್‍‍ಪಿಎಂನಲ್ಲಿ 8.7 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಎಂಜಿನ್ ಉತ್ತಮ ಇಂಧನ ಕ್ಷಮತೆಯನ್ನು ಹೊಂದಿದೆ. ಟಿ‍ವಿಎಸ್ ಸ್ಟಾರ್ ಸಿಟಿ ಪ್ಲಸ್ ಇಟಿಎಫ್ಐ ಅಥವಾ ಇಕೋ-ಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಇಂಧನ ದಕ್ಷತೆಯನ್ನು ಶೇ.15ರಷ್ಟು ಹೆಚ್ಚಿಸಲು ಸಹಯವಾಗುತ್ತದೆ. ಇನ್ನು ಈ ಬೈಕಿನಲ್ಲಿ 5-ಸ್ಪೋಕ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಕೆರ್ಬ್ ತೂಕ 116 ಕೆಜಿಯಾಗಿದೆ. ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಯು‍ಎಸ್‍‍ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದು ಗ್ರಾಮಿಣ ಭಾಗದ ಜನರಿಗೆ ಹೆಚ್ಚು ಸಹಕಾರಿಯಾಗಲಿದೆ.

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್ ಟೀಸರ್ ಬಿಡುಗಡೆ

ಟಿ‍ವಿಎಸ್ ಕಂಪನಿಯ ಬೈಕ್‍‍ಗಳ ಸರಣಿಯಲ್ಲಿ ಜನಪ್ರಿಯ ಬೈಕ್‍‍ಗಳಲ್ಲಿ ಸ್ಟಾರ್ ಸಿಟಿ ಪ್ಲಸ್ ಕೂಡ ಒಂದಾಗಿದೆ. ಈ ಬೈಕ್ ಉತ್ತಮ ಮೈಲೇಜ್ ಮತ್ತು ಪ್ರಯಾಣಿಸಲು ಆರಾಮದಾಯಕವಾಗಿದೆ. ಆಕರ್ಷಕ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪ್ಲಾಟಿನಾ 110 ಮತ್ತು ಹೀರೋ ಹೆಚ್‍ಎಫ್ ಡಿಲಕ್ಸ್‌ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 TVS Star City Plus Teased. Read In Kannada.
Story first published: Thursday, February 25, 2021, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X