ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಈಗಾಗಲೇ ಗಗನಕ್ಕೇರಿವೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಸಾರ್ವಜನಿಕ ಸಾರಿಗೆ, ಎಲೆಕ್ಟ್ರಿಕ್ ವಾಹನಗಳಂತಹ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಮಾರ್ಗಗಳಲ್ಲಿ ಸೈಕಲ್‌ಗಳು ಸಹ ಸೇರಿವೆ. ಆದರೆ ಸೈಕಲ್ ಬಳಸುವುದಕ್ಕೆ ಕೆಲವು ಸಮಸ್ಯೆಗಳಿವೆ. ಆರೋಗ್ಯ ಸಮಸ್ಯೆಗಳಿರುವ ಜನರು ಹಾಗೂ ವಯಸ್ಸಾದವರಿಗೆ ಸೈಕಲ್ ಬಳಸಲು ಸಾಧ್ಯವಾಗುವುದಿಲ್ಲ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಆದರೆ Tesalt ಕಂಪನಿಯು ಈ ಸಮಸ್ಯೆಗೆ ಕೊನೆ ಹಾಡಿದೆ. Tesalt ಕಂಪನಿಯ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಅನ್ನು ಸದ್ಯಕ್ಕೆ ಚೆನ್ನೈನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ವಾಹನವು ಕಿಕ್ ಸ್ಕೂಟರ್ ವರ್ಗಕ್ಕೆ ಸೇರಿದೆ. ಸ್ಟ್ಯಾಂಡ್ ಅಪ್ ಕಿಕ್ ಸ್ಕೂಟರ್‌ಗಳು ದೊಡ್ಡ ದೊಡ್ಡ ನಗರಗಳಲ್ಲಿ ಜನಪ್ರಿಯವಾಗುತ್ತಿವೆ. ಇವು ಸಣ್ಣ ಪ್ರವಾಸಗಳಿಗೆ ಸೂಕ್ತವಾಗಿವೆ. ಒಂದು ಕಾಲನ್ನು ಈ ವಾಹನದಲ್ಲಿರುವ ಬೋರ್ಡ್ ಮೇಲೆ ಹಾಗೂ ಮತ್ತೊಂದು ಕಾಲನ್ನು ನೆಲದ ಮೇಲಿಟ್ಟು ತಳ್ಳುವ ಮೂಲಕ ಸಂಚರಿಸಬಹುದು.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಕೆಲವೇ ಪುಶ್ ಅಪ್‌ಗಳೊಂದಿಗೆ ಈ ಕಿಕ್ ಸ್ಕೂಟರ್‌ಗಳು ಸಾಕಷ್ಟು ದೂರ ಕ್ರಮಿಸುತ್ತವೆ. ಎಲೆಕ್ಟ್ರಿಕ್ ಮೋಡ್ ಮೂಲಕವೂ ಈ ವಾಹನವನ್ನು ಚಾಲನೆ ಮಾಡಬಹುದು. ಎಲೆಕ್ಟ್ರಿಕ್ ಮೋಡ್ ಅನ್ನು ಆರಿಸಿದರೆ, ಪಂಪ್ ಅನ್ನು ತಳ್ಳುವ ಅಗತ್ಯವಿಲ್ಲ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಸುಮ್ಮನೆ ನಿಂತು ಪ್ರಯಾಣಿಸಿದರೆ ಈ ವಾಹನವು ವಿಭಿನ್ನ ಅನುಭವವನ್ನು ನೀಡುತ್ತದೆ. ಈ ಕಿಕ್ ಸ್ಕೂಟರ್ ಓಡಿಸಲು ತರಬೇತಿಯ ಅಗತ್ಯವಿಲ್ಲ. ಎಲ್ಲಾ ವಯಸ್ಸಿನವರು ಈ ಕಿಕ್ ಸ್ಕೂಟರ್ ಚಾಲನೆ ಮಾಡಬಹುದು. ವಯಸ್ಕರು ಈ ಕಿಕ್ ಸ್ಕೂಟರ್ ಸವಾರಿ ಮಾಡುವಾಗ ಮಗುವಾಗುವುದು ಖಚಿತ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಇತರ ಕಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ, Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ವಿಭಿನ್ನವಾಗಿದೆ. ಎರಡೂ ವ್ಹೀಲ್ ಗಳು ಇತರ ಕಿಕ್ ಸ್ಕೂಟರ್‌ಗಳಿಗಿಂತ ಚಿಕ್ಕದಾಗಿವೆ. ಆದರೆ Tesalt ತನ್ನ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ನ ಮುಂಭಾಗದಲ್ಲಿ ದೊಡ್ಡ ವ್ಹೀಲ್ ಹಾಗೂ ಹಿಂಭಾಗದಲ್ಲಿ ಚಿಕ್ಕ ವ್ಹೀಲ್ ಅನ್ನು ನೀಡಿದೆ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಕೆಲವು ಕಿಕ್ ಸ್ಕೂಟರ್‌ಗಳಲ್ಲಿ ಬ್ರೇಕ್ ಹಿಡಿಯಲು ಪಾದಗಳನ್ನು ಬಳಸಬೇಕಾಗುತ್ತದೆ. ಆದರೆ Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ನಲ್ಲಿ ಹ್ಯಾಂಡ್ ಬ್ರೇಕ್ ನೀಡಲಾಗಿದೆ. ಈ ಕಿಕ್ ಸ್ಕೂಟರ್ ಯಾವುದೇ ಸೀಟ್ ಅಥವಾ ಪೆಡಲ್‌ಗಳನ್ನು ಹೊಂದಿಲ್ಲ. ಇದು ಸೈಕಲ್ ಹಾಗೂ ಈ ಕಿಕ್ ಸ್ಕೂಟರ್ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲಿ ಒಂದಾಗಿದೆ. ಈ Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಅನ್ನು ಸೀಟುಗಳೊಂದಿಗೂ ಖರೀದಿಸಬಹುದು.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಬಳಸುವ ಸ್ಥಳಗಳು

ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್

ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌

ಐಟಿ ಹಾಗೂ ಇನ್ನಿತರ ಶಾಪಿಂಗ್ ಕಾಂಪ್ಲೆಕ್ಸ್

ದೊಡ್ಡ ಶಾಪಿಂಗ್ ಮಾಲ್‌ಗಳು

ವಿಮಾನ ನಿಲ್ದಾಣಗಳು

ಮನರಂಜನಾ ರೆಸಾರ್ಟ್ ಗಳು

ಪ್ರವಾಸಿ ತಾಣಗಳು

ಒಟ್ಟಿನಲ್ಲಿ ಹೇಳುವುದಾದರೆ Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್‌ನಿಂದ ಲಾಸ್ಟ್ ಮೈಲ್ ಕನೆಕ್ಟಿವಿಟಿ ಪಡೆಯಬಹುದು.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಅನ್ನು ಯಾರು ಬಳಸಬಹುದು?

ಶಬ್ದವಿಲ್ಲದ ಹಾಗೂ ಪರಿಸರಕ್ಕೆ ಹಾನಿಯಾಗದ ವಾಹನಗಳನ್ನು ಬಯಸುವವರಿಗೆ ಈ ಕಿಕ್ ಸ್ಕೂಟರ್ ಸೂಕ್ತವಾಗಿದೆ. ಟ್ರಾಫಿಕ್ ಜಾಮ್, ಸಮಯ ಹಾಗೂ ಹಣ ವ್ಯರ್ಥವಾಗುವುದನ್ನು ತಪ್ಪಿಸಲು ಬಯಸುವವರಿಗೆ Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಸೂಕ್ತವಾಗಿದೆ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ಗಳು ದೊಡ್ಡದಾಗಿರುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕ್ಯಾಂಪಸ್‌ನೊಳಗೆ Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಬಳಸಬಹುದು. ತಮ್ಮ ಮನೆಯ ಬಳಿಯೇ ಕಚೇರಿ ಹೊಂದಿರುವ ಉದ್ಯೋಗಿಗಳು Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಅನ್ನು ಪರ್ಯಾಯವಾಗಿ ಬಳಸಬಹುದು.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಅಪಾರ್ಟ್ ಮೆಂಟ್ ನಿವಾಸಿಗಳು ಹತ್ತಿರದಲ್ಲಿರುವ ಅಂಗಡಿಗಳಿಗೆ ತೆರಳಲು Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಬಳಸಬಹುದು. ಈ ಕಿಕ್ ಸ್ಕೂಟರ್ ಸೈಕಲ್ ಗಾತ್ರಕ್ಕಿಂತ ಚಿಕ್ಕದಾಗಿರುವುದರಿಂದ ಎಲ್ಲೆಡೆ ಬಳಕೆಗೆ ಸೂಕ್ತವಾಗಿದೆ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಶೈಲಿ

ಸಾಮಾನ್ಯವಾಗಿ ಸೈಕ್ಲಿಂಗ್ ಮಾಡುವಾಗ ಕೆಲವು ವಿಧದ ಬಟ್ಟೆಗಳು ಸಮಸ್ಯೆಯನ್ನುಂಟು ಮಾಡುತ್ತವೆ. ಆ ಬಟ್ಟೆಗಳು ಸರಪಳಿಯಲ್ಲಿ ಸಿಲುಕಿ ಮುಜುಗರವನ್ನುಂಟು ಮಾಡುತ್ತವೆ. ಆದರೆ Tesalt ಬಿಗ್ ವ್ಹೀಲ್ ಅನ್ನು ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಬಳಸಲು ಕೋಟ್ ಸೂಟ್, ಪೈಜಾಮಾ ಹಾಗೂ ಸ್ಕರ್ಟ್ ನಂತಹ ಎಲ್ಲಾ ವಿಧದ ಉಡುಪುಗಳನ್ನು ತೊಡಬಹುದು.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ವ್ಯಾಯಾಮಕ್ಕೂ ಸೂಕ್ತ

ಬೆನ್ನು ನೋವು ಇರುವವರಿಗೆ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಸೈಕಲ್ ಬಳಸಲು ಸಾಧ್ಯವಾಗದಂತಹ ವಾತಾವರಣವಿದೆ. Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಅವರಿಗೆ ಅತ್ಯುತ್ತಮ ಪರ್ಯಾಯ ಮಾರ್ಗವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಿಕ್ ಸ್ಕೂಟರ್ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೂಕ್ತವಾಗಿದೆ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಬಳಸುವುದು ನಿಜಕ್ಕೂ ಅತ್ಯುತ್ತಮ ವ್ಯಾಯಾಮ. ಇದು ಕೊಬ್ಬನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕಿಕ್ ಸ್ಕೂಟರ್ ಬಳಸುವುದು ಕೊಬ್ಬನ್ನು ಕರಗಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಬಹಳ ಕಷ್ಟದ ಕೆಲಸ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಇದಕ್ಕೆ ಕಠಿಣ ವ್ಯಾಯಾಮದ ಅಗತ್ಯವಿದೆ. ಆದರೆ Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಅನ್ನು ಹೆಚ್ಚಿನ ವೇಗದಲ್ಲಿ ಬಳಸುವುದರಿಂದ ಹೆಚ್ಚುವರಿ ಕೊಬ್ಬನ್ನು ವೇಗವಾಗಿ ಕರಗಿಸಬಹುದು. ಕಿಕ್ ಸ್ಕೂಟರ್ ಅನ್ನು ನಿಯಮಿತವಾಗಿ ಬಳಸುವುದರಿಂದ ಬೆನ್ನು, ಸೊಂಟ ಹಾಗೂ ತೊಡೆಗಳಲ್ಲಿರುವ ಸ್ನಾಯುಗಳು ಬಲಗೊಳ್ಳುತ್ತವೆ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಸರ್ವೀಸ್ ಸಮಸ್ಯೆ ಇಲ್ಲ

ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಕಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ Tesalt ಉತ್ತಮ ಶೈಲಿ, ಕಡಿಮೆ ಬೆಲೆಯಂತಹ ವಿವಿಧ ಅಂಶಗಳನ್ನು ಹೊಂದಿದೆ. ಈ ಕಿಕ್ ಸ್ಕೂಟರ್ ರಿಪೇರಿ ಹಾಗೂ ನಿರ್ವಹಣೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಯಾವುದೇ ಮೆಕ್ಯಾನಿಕ್ Tesalt ಕಿಕ್ ಸ್ಕೂಟರ್ ಅನ್ನು ರಿಪೇರಿ ಮಾಡಬಹುದು.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಹೆಚ್ಚು ಶಬ್ದ ಮಾಡುವುದಿಲ್ಲ. ಸದ್ದಿಲ್ಲದೆ ಸಾಗುವ ಈ ವಾಹನವು ಪರಿಸರಕ್ಕೆ ಯಾವುದೇ ಮಾಲಿನ್ಯಕಾರಕವಾದ ಅಂಶಗಳನ್ನು ಹೊರಸೂಸುವುದಿಲ್ಲ. ಜೊತೆಗೆ ನಿರ್ವಹಣಾ ವೆಚ್ಚವು ಕಡಿಮೆ.

ಬ್ಯಾಟರಿ, ಮೋಟಾರ್, ಶ್ರೇಣಿ

Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ನಲ್ಲಿ 36 ವೋಲ್ಟ್ 10 ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಸುಲಭವಾಗಿ ಹೊರ ತೆಗೆಯಬಹುದು. ಈ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ 250 ವ್ಯಾಟ್ ಪವರ್ ಹೊಂದಿರುವ ಬಿ‌ಎಲ್‌ಡಿ‌ಸಿ ಮೋಟಾರ್ ನಿಂದ ಚಾಲಿತವಾಗಿದೆ. ಕಾಲ್ನಡಿಗೆಯಲ್ಲಿ ಸಾಗಲು ಬಯಸದಿದ್ದರೆ, ಎಲೆಕ್ಟ್ರಿಕ್ ಮೋಡ್‌ನ ಲಾಭವನ್ನು ಪಡೆಯಬಹುದು.

Tesalt ಕಂಪನಿಯ ಪ್ರಕಾರ, Tesalt ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ನಲ್ಲಿರುವ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 37 ಕಿ.ಮೀಗಳವರೆಗೆ ಚಲಿಸಬಲ್ಲದು. ಈ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಸಮೀಪದ ಓಡಾಟವನ್ನು ಸುಲಭವಾಗಿಸುತ್ತದೆ ಈ ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಕಿಕ್ ಸ್ಕೂಟರ್‌ನ ಬ್ಯಾಟರಿಯನ್ನು 3ಎ ಚಾರ್ಜರ್‌ನೊಂದಿಗೆ ಸುಮಾರು 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. Tesalt ಬಿಗ್ ವ್ಹೀಲ್ ಎಲೆಕ್ಟ್ರಿಕ್ ಕಿಕ್ ಸ್ಕೂಟರ್‌ನಲ್ಲಿ ಎಲ್‌ಸಿಡಿ ಡಿಸ್‌ಪ್ಲೇ ಇದ್ದು ಬ್ಯಾಟರಿ ಚಾರ್ಜ್ ಇಂಡಿಕೇಟರ್ ಹಾಗೂ ಸ್ಪೀಡ್ ಇಂಡಿಕೇಟರ್ ನೀಡಲಾಗಿದೆ. ಬೆಲೆ ಹಾಗೂ ಇನ್ನಿತರ ಮಾಹಿತಿಗಳನ್ನು Tesalt ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

Most Read Articles

Kannada
English summary
Tesalt big wheel electric kick scooter makes nearest travel easier video details
Story first published: Friday, September 24, 2021, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X