ದಿಲ್ಲಿಯಲ್ಲಿ ನೆರವೇರಿದ ಸ್ಕೋಡಾ ಫ್ಯಾಮಿಲಿ ಫನ್ ಕಾರು ರಾಲಿ
ಜೆಕ್ ಗಣರಾಜ್ಯ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಸ್ಕೋಡಾ ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ಸುರಕ್ಷಿತ ಚಾಲನೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 14ನೇ ಫ್ಯಾಮಿಲಿ
ಫನ್ ಕಾರು ರಾಲಿ ಯಶಸ್ವಿಯಾಗಿ ಹಮ್ಮಿಕೊಂಡಿತ್ತು.
ಸ್ಕೋಡಾ ಕಾರುಗಳನ್ನು ಹೊಂದಿರುವ ಮಾಲಿಕರು ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದರಂತೆ 100ರಷ್ಟು ಆಲಂಕೃತ ಸ್ಕೋಡಾ ಕಾರುಗಳು ರಾಲಿಯಲ್ಲಿ ಪಾಲ್ಗೊಂಡಿದ್ದವು.

ಸೇಫ್ ಡ್ರೈವಿಂಗ್ ಜೊತೆಗೆ ಟ್ರಾಫಿಕ್ ಬಗ್ಗೆ ದೆಹಲಿ ಜನರಲ್ಲಿ ಅರಿವು ಮೂಡಿಸುವುದು ಸ್ಕೋಡಾ ಫ್ಯಾಮಿಲಿ ಫನ್ ಕಾರು ರಾಲಿಯ ಉದ್ದೇಶವಾಗಿತ್ತು. ಇದಕ್ಕೆ ದೆಹಲಿ ಟ್ರಾಫಿಕ್ ಪೊಲೀಸ್ ಸಹ ಕೈಜೋಡಿಸಿಕೊಂಡಿತ್ತು.
ಈ ಎಲ್ಲ ಆಲಂಕೃತ ಕಾರು ರಾಲಿ ಒಟ್ಟು 65 ಕೀ.ಮೀ. ದೂರವನ್ನು ಕ್ರಮಿಸಿತ್ತು. ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.



Click it and Unblock the Notifications