ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ದೇಶಿಯವಾಗಿ ಉತ್ಪಾದನೆಗೊಂಡಿರುವ 2017ರ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಸೃಷ್ಠಿಯಾಗಿದೆ.

By Praveen

ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ದೇಶಿಯವಾಗಿ ಉತ್ಪಾದನೆಗೊಂಡಿರುವ 2017ರ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಅತ್ಯುತ್ತಮ ಬೆಲೆಗಳು ಮತ್ತು ಹೊಸ ನಮೂನೆಯ ಸೌಲಭ್ಯಗಳನ್ನು ಒದಗಿಸಿರುವ ಹಿನ್ನೆಲೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಹೀಗಾಗಿಯೇ ಕಳೆದ ಜುಲೈ 31ರಂದು ಬಿಡುಗಡೆಯಾದ ನಂತರ ಜೀಪ್ ಕಂಪಾಸ್ ಖರೀದಿ ಪ್ರಕ್ರಿಯೆ ಜೋರಾಗಿದ್ದು, ಇದುವರೆಗೆ 10 ಸಾವಿರ ಬುಕ್ಕಿಂಗ್‌ಗಳನ್ನು ಪಡೆಯಲಾಗಿದೆ. ಇದು ಐಷಾರಾಮಿ ಕಾರು ಖರೀದಿಗೆ ಬಂದಿರುವ ಬೃಹತ್ ಪ್ರಮಾಣದ ಬೇಡಿಕೆ ಎಂದೇ ಹೇಳಬಹುದು.

ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಇದರ ಜೊತೆಗೆ ಜೀಪ್ ಕಂಪಾಸ್ ಬಿಡುಗಡೆಯಾದ ಬಳಿಕ 92 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರಿನ ಕುರಿತು ಮಾಹಿತಿ ಪಡೆದಿದ್ದು, ಜೀಪ್ ಕಂಪಾಸ್ ಮಾರಾಟಕ್ಕೆ ಹೊಸ ತಂತ್ರ ರೂಪಿಸಿದ್ದ ಮಾತೃ ಸಂಸ್ಥೆ ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್ ಇಂಡಿಯಾ ಯೋಜನೆಗಳು ಫಲಪ್ರದಗೊಂಡಿವೆ.

Recommended Video

Jeep Compass Launched In India - DriveSpark
ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಇನ್ನು ಗ್ರಾಹಕರು ನೀರಿಕ್ಷಿಸಿದ್ದಕ್ಕಿಂತ ಕಡಿಮೆ ಬೆಲೆಗಳಿಗೆ ಜೀಪ್ ಕಂಪಾಸ್ ಬಿಡುಗಡೆಗೊಂಡಿದ್ದು, ಎಕ್ಸ್‌ಶೋರಂಗಳ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆ ರೂ.14.19 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.20.65 ಲಕ್ಷಕ್ಕೆ ಲಭ್ಯವಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಸ್ಪೋರ್ಟ್, ಲ್ಯಾಂಗಿಟ್ಯುಡ್ ಮತ್ತು ಲಿಮಿಟೆಡ್ ಎಂಬ ಮೂರು ಪ್ರಮುಖ ಆವೃತ್ತಿಗಳಲ್ಲಿ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿದ್ದು, ಡೀಸೆಲ್ ಆವೃತ್ತಿಯಲ್ಲಿ ಮಾತ್ರ 4x4 ಮಾದರಿಯನ್ನು ಪರಿಚಯಿಸಲಾಗಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಜೀಪ್ ಉತ್ಪಾದನೆಯ ಗ್ರ್ಯಾಂಡ್ ಚರೋಕಿ ಎಸ್‌ಯುವಿಯ ವೈಶಿಷ್ಟ್ಯತೆಗಳ ಹೋಲಿಕೆ ಪಡೆದುಕೊಂಡಿರುವ ಜೀಪ್ ಕಂಪಾಸ್ ಹೊಸ ಆವೃತ್ತಿಗಳು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್‌ಇಡಿ ಡಿಆರ್‌ಎಲ್‌ಗಳ ಅಳವಡಿಕೆ ಹೊಂದಿರುವುದು ಹೊಸ ಲುಕ್‌‌ಗೆ ಕಾರಣವಾಗಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಎಂಜಿನ್

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಇದಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿನ ಐಷಾರಾಮಿ ಕಾರುಗಳ ಎಲ್ಲಾ ಸೌಲಭ್ಯಗಳು ಜೀಪ್ ಕಂಪಾಸ್‌ನಲ್ಲಿ ಒದಗಿಸಲಾಗಿದ್ದು, ಅಗತ್ಯ ಸುರಕ್ಷಾ ಸಾಧನಗಳಲ್ಲದೇ ಮೂರು ವರ್ಷಗಳ ಕಾಲ ಹೊಸ ಕಾರುಗಳ ಮೇಲೆ ರೋಡ್ ಸೈಡ್ ಅಸಿಸ್ಟೇನ್ಸ್ ಸೌಲಭ್ಯ ನೀಡಲಾಗುತ್ತಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಹೊಸ ಜೀಪ್ ಕಂಪಾಸ್‌ಗೆ ಭಾರೀ ಬೇಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಮಾದರಿಗಳಲ್ಲೇ ಇದೊಂದು ಅತ್ಯುತ್ತಮ ಆವೃತ್ತಿಯಾಗಿದ್ದು, ಕೈಗೆಟುವ ದರಗಳಲ್ಲಿ ಜೀಪ್ ಕಂಪಾಸ್ ಲಭ್ಯವಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜೀಪ್ ಕಂಪಾಸ್ ಮತ್ತಷ್ಟು ಜನಪ್ರಿಯತೆ ಹೊಂದುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಬಹುದು.

Most Read Articles

Kannada
Read more on ಜೀಪ್ jeep
English summary
Read in Kannada about Jeep Compass Crosses Another Milestone As Booking Madness Continues.
Story first published: Saturday, September 2, 2017, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X