ಬೆಂಗಳೂರಿನಲ್ಲಿ ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

Written By:

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಾರಥ್ಯದ 'ನಮ್ಮ ಟೈಗರ್' ಕ್ಯಾಬ್ ನಿನ್ನೆಯಷ್ಟೇ ಲೋಕಾರ್ಪಣೆಗೊಂಡಿದ್ದು, ಈ ಹಿನ್ನೆಲೆ ಓಲಾ ಮತ್ತು ಉಬರ್ ಸಂಸ್ಥೆಗಳು ನೀಡುವ ಕ್ಯಾಬ್ ಸೇವೆಗಿಂತ ಹೇಗೆ ಭಿನ್ನವಾಗಿ ಎನ್ನುವ ಬಗ್ಗೆ ಇಲ್ಲಿ ಚರ್ಚೆ ಮಾಡಲಾಗಿದೆ.

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಊಬರ್ ಸಂಸ್ಥೆಗಳಿಗೆ ಸೆಡ್ಡು ಹೊಡೆದಿರುವ 'ನಮ್ಮ ಟೈಗರ್' (Namma TYGR)ಸಾಕಷ್ಟು ನೀರಿಕ್ಷೆಗಳೊಂದಿಗೆ ರಸ್ತೆಗಿಳಿದಿದ್ದು, ಜನಸ್ನೇಹಿ ಕೊಡುಗೆಗಳನ್ನು ಹಾಗೂ ಉನ್ನತ ಮಟ್ಟದ ಸ್ಥಿರತೆ, ಬಹು ಆಯಾಮಗಳ ಪಾವತಿ ವ್ಯವಸ್ಥೆ ಹಾಗೂ ಆದ್ಯಾತೆ ಪಿಕಪ್ ಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

'ಸದ್ಯ ನಮ್ಮ ಟೈಗರ್ ಅಪ್ಲಿಕೇಷನ್ ಮೂಲಕವೇ ಬುಕಿಂಗ್ ಮಾಡಿಸಿಕೊಳ್ಳಲಾಗುತ್ತಿದ್ದು, ರಸ್ತೆಯಲ್ಲಿ ನಿಂತು ಲಿಫ್ಟ್‌ ನೀಡಿ ಎಂದು ಕೇಳಿದರೂ ಸೇವೆ ನೀಡವುದು ನಮ್ಮ ಟೈಗರ್ ವಿಶೇಷವಾಗಿದೆ ಎನ್ನಲಾಗಿದೆ. ಆದ್ರೆ ಈ ಸೇವೆ ಲಭ್ಯವಾಗಲು ಇನ್ನು ಕೆಲದಿನಗಳ ಕಾಲ ಕಾಯಲೇಬೇಕು.

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ಪ್ರಯಾಣದ ದರ ಎಷ್ಟು?

''ನಮ್ಮ ಟೈಗರ್‌ನಲ್ಲಿ ಸದ್ಯಕ್ಕೆ ಎರಡು ಬಗೆಯ ಕ್ಯಾಬ್ ಗಳನ್ನು ಪರಿಚಯಿಸಲಾಗಿದ್ದು, ಮಿನಿ ಕ್ಯಾಬ್ ಗೆ ಪ್ರತಿ ಕಿ.ಮೀ.ಗೆ 12.50 ರೂ., ಸೆಡಾನ್ ನಲ್ಲಿ 14.50 ರೂ., ಹಾಗೂ ಎಸ್‌ಯುವಿನಲ್ಲಿ 18.50 ರೂ. ದರವಿದೆ. ಓಲಾ, ಉಬರ್ ನಲ್ಲಿ ಹಲವು ವಿಭಾಗಗಳಂತೆ ಕಿ.ಮೀ.ಗೆ 6 ರೂ., 8 ರೂ., 10 ರೂ. ದರಗಳು ಕೂಡಾ ಲಭ್ಯವಿವೆ.

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ನಮ್ಮ ಟೈಗರ್‌ಗೆ 10 ಸಾವಿರ ಕ್ಯಾಬ್ ಗಳ ಬಲ

'ನಮ್ಮ ಟೈಗರ್‌' ಆ್ಯಪ್ ಅನ್ನು ಪ್ಲೇಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊಬೈಲ್ ಆಧಾರಿತ ಜನರ ಅಗತ್ಯತೆಗಳನ್ನು ಪೂರೈಸಲು ಸುಸ್ಥಿಯಲ್ಲಿರುವ ಹತ್ತು ಸಾವಿರ ಕ್ಯಾಬ್ ಗಳು ಸಿದ್ಧವಾಗಿವೆ. ಇದರಿಂದ ಅನಗತ್ಯ ಸಂಚಾರ ಕಿರಿಕಿರಿ ಹಾಗೂ ಸಂಚಾರ ದಟ್ಟಣೆಯನ್ನು ತಡೆಯಲು ಇದು ಸಹಕಾರಿಯಾಗಲಿದೆ.

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ಸುರಕ್ಷತೆಗೆ ಹೆಚ್ಚಿನ ಆದ್ಯತೆ

ನಮ್ಮ ಟೈಗರ್ ಕ್ಯಾಬ್‌ನ ವಿಶೇಷತೆಗಳಲ್ಲಿ ಇದು ಕೂಡಾ ಒಂದು. ಸದ್ಯ ಓಲಾ ಮತ್ತು ಉಬರ್ ಚಾಲಕರಿಗಿಂತಲೂ ನಮ್ಮ ಟೈಗರ್ ಚಾಲಕರಿಗೆ ನೈಟ್ ಡ್ಯೂಟಿಗಳಲ್ಲಿ ಹೆಚ್ಚಿನ ಸುರಕ್ಷೆ ಸಿಗಲಿದ್ದು, ಚಾಲಕರ ಮೇಲೆ ನಿಗಾ ವಹಿಸುವ ಗಸ್ತು ವಾಹನಗಳನ್ನು ಪರಿಚಯಿಸಲಾಗಿದೆ.

ತಪ್ಪದೇ ಓದಿ-ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ಟೈಗರ್ ಕ್ಯಾಬ್ ಚಾಲಕರಿಗೆ ವಿಶೇಷ ಸೌಲಭ್ಯಗಳು

ಟೈಗರ್ ಕ್ಯಾಬ್ ಚಾಲಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಉಚಿತ ಆರೋಗ್ಯ ಸೇವೆ, ಅಪಘಾತ ಮತ್ತು ಜೀವ ವಿಮೆ, ಕಾರು ನಿರ್ವಹಣೆ ಹಾಗೂ ವಾರದ ಎಲ್ಲ ದಿನವೂ 24/7 ಸೇವೆ ಮುಂತಾದ ವಿಶಿಷ್ಟ ಸೌಲಭ್ಯಗಳು ಈ ನಮ್ಮ ಟೈಗರ್ ನ ಪ್ರಮುಖ ಸೇವೆಗಳಾಗಿವೆ.

Recommended Video - Watch Now!
Jeep Dealership Executives In Mumbai Beat Up Man Inside Showroom
ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ನಮ್ಮ ಟೈಗರ್ ಕ್ಯಾಬ್ ನ ಪ್ರಮುಖ ಸೇವೆಗಳು

ನಮ್ಮ ಟೈಗರ್ ಸೇವೆ ದಿನದ 24 ಗಂಟೆಯೂ ಸಾಮಾನ್ಯ ದರದಲ್ಲಿ ಸೇವೆ ಒದಗಿಸಲಿದೆ. ಕೊನೆ ನಿಮಿಷದ ವರೆಗೆ ಯಾವುದೇ ಚಾರ್ಚ್ ಇಲ್ಲದೇ, ಏಕಾಏಕಿ ದರ ವಿಧಿಸದೆ ಉತ್ತಮ ಸೇವೆ ನೀಡಲಿದೆ.

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ಇನ್ನು ನಗರದ ಹೆಣ್ಣೂರು ರಸ್ತೆಯಲ್ಲಿ ಈಗಾಗಲೇ ಕೇಂದ್ರ ಕಚೇರಿಯ ನಿರ್ಮಾಣ ಕಾರ್ಯ ಮುಗಿದಿದ್ದು, ಕೋಲ್ಕತ್ತಾ ಮೂಲದ ಹುಲಿ ಟೆಕ್ನಾಲಜೀಸ್‌' ಎಂಬ ಹೊಸ ಕಂಪನಿಯು 'ನಮ್ಮ ಟೈಗರ್' ಕ್ಯಾಬ್ ಸೇವೆಯನ್ನು ಮುನ್ನಡೆಸಲಿದೆ.

ತಪ್ಪದೇ ಓದಿ- ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

Namma TYGR ಆ್ಯಪ್ ಡೌನ್ ಲೋಡ್ ಹೇಗೆ?

Namma TYGR ಎಂದು ಪ್ಲೇಸ್ಟೋರ್ ನಲ್ಲಿ ಟೈಪ್ ಮಾಡಿ. ಬಳಿಕ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ತದನಂತರ ಇನ್ ಸ್ಟಾಲ್ ಮಾಡಿಕೊಂಡು ನಂತರ ನೀವು ಪ್ರಯಾಣಿಸಬೇಕಾದ ವಿಳಾಸ ನಮೂದಿಸಬೇಕು.

ಟೈಗರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನಗರದಲ್ಲಿ ಜನರು ಎದುರಿಸುತ್ತಿರುವ ಸಂಚಾರ ದಟ್ಟಣೆ ಹಾಗೂ ಸಂಚಾರ ಕಿರಿಕಿರಿಗಳನ್ನು ನಿವಾರಿಸಲು ಮಹತ್ತರ ಗುರಿಯೊಂದಿಗೆ ಹೊಸ ಕ್ಯಾಬ್ ಸೇವೆಯನ್ನು ತರಲಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಟೈಗರ್ ಗ್ರಾಹಕರನ್ನು ಯಾವ ರೀತಿ ಸೆಳೆಯುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

ತಪ್ಪದೇ ಓದಿ- ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

English summary
Read in Kannada about Tygr Cab Service Launched in Bengaluru.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark