Just In
- 14 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 18 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 20 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 30 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ
ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಮೊದಲು ಸಿಯಾಜ್ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ. ಏಪ್ರಿಲ್ 1ರಿಂದ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಲಿದೆ.
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಬಿಎಸ್-4 ಸಿಯಾಜ್ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ತನಕ ಸಮಯವಕಾಶವಿತ್ತು, ಆದರೆ ಅದಕ್ಕೂ ಮೊದಲೇ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಲಿದೆ. ಆದರೆ ಬಿಎಸ್-6 ಆವೃತ್ತಿಯನ್ನು 1.5 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು.
ಬಿಎಸ್-4 ಸಿಯಾಜ್ ಕಾರಿನಲ್ಲಿರುವ 1.5 ಲೀಟರ್ 4 ಸಿಲಿಂಡರ್ ಡಿಡಿಐಎಸ್ ಡೀಸೆಲ್ ಎಂಜಿನ್ 94 ಬಿಹೆಚ್ಪಿ ಪವರ್ ಮತ್ತು 225 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಸಿಯಾಜ್ ಕಾರಿನಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಡಿಆರ್ಎಲ್ ಹೆಡ್ಲ್ಯಾಂಪ್, ಸೆಂಟ್ರಲ್ ಏರ್ ಡ್ಯಾಮ್ನೊಂದಿಗೆ ಫ್ರಂಟ್ ಬಂಪರ್ ಮತ್ತು ಫಾಗ್ ಲ್ಯಾಂಪ್ಗಳಿವೆ .
ಸಿಯಾಜ್ ಕಾರಿನಲ್ಲಿ ಮಲ್ಟಿ ಸ್ಪೋಕ್ 15 ಇಂಚಿನ ಅಲಾಯ್ ವ್ಹೀಲ್, ಕ್ರೋಮ್ ಆಧಾರಿತ ಡೋರ್ ಹ್ಯಾಂಡಲ್ಸ್ ಮತ್ತು ಒಆರ್ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಗಳಿವೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಹೊಂದಿದೆ.
ಸಿಯಾಜ್ ಕಾರಿನ ಇಂಟಿರಿಯರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್, ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಅನ್ನು ಹೊಂದಿದೆ.
ಇತ್ತೀಚೆಗೆ ಬಿಡುಗಡೆಗೊಳಿಸಲಾದ ಬಿಎಸ್-6 ಮಾರುತಿ ಸುಜುಕಿ ಸಿಯಾಜ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.08 ಲಕ್ಷಗಳಾಗಿದೆ. ಹೊಸ ಮಾರುತಿ ಸುಜುಕಿ ಸಿಯಾಜ್ ಎಸ್ ಕಾರು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ.
ಹೊಸ ಸಿ-ಸೆಗ್ಮೆಂಟ್ ಸೆಡಾನ್ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಹೊಸ ಸಿಯಾಜ್ ಎಸ್ ಕಾರು ಮೂರು ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ. ಅವುಗಳು ಪ್ರೀಮಿಯಂ ಸಿಲ್ವರ್, ಸ್ನೋ ವೈಟ್ ಮತ್ತು ಸಾಂಗ್ರಿಯಾ ರೆಡ್ ಬಣ್ಣಗಳಾಗಿದೆ.
ಹೊಸ ಮಾರುತಿ ಸುಜುಕಿ ಸಿಯಾಜ್ ಎಸ್ ಕಾರಿನ ಕಾಸ್ಮೆಟಿಕ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಬ್ಲ್ಯಾಕ್ ಒಆರ್ವಿಎಂಗಳು, ಕಪ್ಪು ಬಣ್ಣದ 16 ಇಂಚಿನ ಅಲಾಯ್ ವ್ಹೀಲ್ಗಳು, ಬೂಟ್ ಲಿಡ್ ಮತ್ತು ನವೀಕರಿಸಿದ ಫಾಂಗ್ ಲ್ಯಾಂಪ್ಗಳನ್ನು ಅಳವಡಿಸಲಾಗಿದೆ.
ಮಾರುತಿ ಸಿಯಾಜ್ ಎಸ್ ಬಿಎಸ್-6 ಎಂಜಿನ್ ಅನ್ನು ಹೊಂದಿದೆ. ಮಾರುತಿ ಸಿಯಾಜ್ ಎಸ್ ಕಾರಿನಲ್ಲಿ ಬಿಎಸ್-6, 1.5 ಲೀಟರ್ ಕೆ 15 ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎರ್ಟಿಗಾ ಕಾರಿನಲ್ಲಿಯೂ ಕೂಡ ಇದೇ ಮಾದರಿಯ ಎಂಜಿನ್ ಅನ್ನು ಅಳವಡಿಸಲಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಸಿಯಾಜ್ ಕಾರು ಹೋಂಡಾ ಸಿಟಿ, ಸ್ಕೋಡಾ ರ್ಯಾಪಿಡ್ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿತ್ತು.