ಚಿಕ್ಕ ಎಲೆಕ್ಟ್ರಿಕ್ ಕಾರಿನ ಮಾಹಿತಿಯನ್ನು ಬಹಿರಂಗಪಡಿಸಿದ ಹ್ಯುಂಡೈ

ತನ್ನ 45 ಎಲೆಕ್ಟ್ರಿಕ್ ಕಾರಿನ ಕಾನ್ಸೆಪ್ಟ್ ಮೇಲೆ ಆಧಾರಿತವಾಗಿರುವ ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಹ್ಯುಂಡೈ ಕಂಪನಿಯು ಬಹಿರಂಗಪಡಿಸಿದೆ. ಈ ಸಣ್ಣ ಎಲೆಕ್ಟ್ರಿಕ್ ಕಾರಿಗೆ ಹ್ಯುಂಡೈ ಕಂಪನಿಯು ಇನ್ನೂ ಯಾವುದೇ ಹೆಸರನ್ನಿಟ್ಟಿಲ್ಲ.

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಕಾರು ಹಲವು ಭಾಗಗಳಲ್ಲಿ ರೆಡ್ ಅಸೆಂಟ್ ಗಳನ್ನು ಹೊಂದಿದೆ. ಹ್ಯುಂಡೈ 45 ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರನ್ನು 2019ರಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಮೋಟಾರುಶೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಸಣ್ಣ ಎಲೆಕ್ಟ್ರಿಕ್ ಕಾರಿನ ಹೊರಭಾಗದಲ್ಲಿರುವ ಸಿಗ್ನೆಚರ್ ಕೈನೆಟಿಕ್ ಕ್ಯೂಬ್ ಲ್ಯಾಂಪ್‌ಗಳನ್ನು ಕಾನ್ಸೆಪ್ಟ್ ಕಾರಿನಿಂದ ಪಡೆಯಲಾಗಿದೆ.

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಈ ಚಿಕ್ಕ ಕಾರು ಪರ್ಫಾಮೆನ್ಸ್ ಬ್ಲೂ ಹಾಗೂ ಆರೆಂಜ್ ಅಸೆಂಟ್ ಗಳನ್ನು ಹೊಂದಿದೆ. ಈ ಕಾರಿನಲ್ಲಿರುವ ಸಣ್ಣ ಎಂಜಿನ್‌ನಲ್ಲಿ ಎರಡು ಡಿಸಿ ಮೋಟರ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಈ ಕಾರು ಪ್ರತಿ ಗಂಟೆಗೆ ಕೇವಲ 7 ಕಿ.ಮೀಗಳ ಗರಿಷ್ಠ ವೇಗವನ್ನು ಹೊಂದಿರಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಈ ಕಾರನ್ನು ವಿಶೇಷ ಜನರಿಗೆಂದು ತಯಾರಿಸಲಾಗಿದೆ. ಈ ಕಾರಿನಲ್ಲಿ ಕೇವಲ ಒಂದು ಸೀಟನ್ನು ಮಾತ್ರ ಅಳವಡಿಸಲಾಗಿದೆ. 45 ಇವಿ ಕಾನ್ಸೆಪ್ಟ್ ಕಾರಿನ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಹ್ಯುಂಡೈ ಕಂಪನಿಯು ಈ ಕಾರನ್ನು ಮರದಿಂದ ತಯಾರಿಸಿದೆ.

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಈ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ ಎಷ್ಟು ದೂರ ಚಲಿಸುತ್ತದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈ ಕಾರಿನಲ್ಲಿ ಎಮೋಷನ್ ಅಡಾಪ್ಟಿವ್ ವೆಹಿಕಲ್ ಕಂಟ್ರೋಲ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಈ ಕಾರನ್ನು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದೆ. ಈ ಕಾರಣಕ್ಕೆ ಈ ಕಾರಿಗೆ ಮೋಜಿನ ವಿನ್ಯಾಸವನ್ನು ನೀಡಲಾಗಿದೆ. ಆದರೆ ಕಾರಿನ ವ್ಹೀಲ್ ಗಳನ್ನು ಬಹಳ ಆಕರ್ಷಕವಾಗಿರಿಸಲಾಗಿದೆ. ಈ ಕಾರನ್ನು ನೋಡಿದವರು ಖುಷಿ ಪಡದೇ ಇರಲಾರರು.

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಈ ಕಾರು ಒಪನ್ ರೂಫ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ಎರಡು ಎಲ್ಇಡಿ ಹೆಡ್‌ಲೈಟ್‌ಗಳನ್ನು ನೀಡಲಾಗಿದೆ. ಈ ಕಾರಿನ ಮುಂಭಾಗದ ವಿನ್ಯಾಸವು ತೀಕ್ಷ್ಣವಾಗಿದೆ. ಈ ಚಿಕ್ಕ ಎಲೆಕ್ಟ್ರಿಕ್ ಕಾರು ಮಾರಾಟವಾಗುತ್ತದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಕಂಪನಿಯು ನೀಡಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಈ ಕಾರಣಕ್ಕಾಗಿಯೇ ಹ್ಯುಂಡೈ ಕಂಪನಿಯು ಈ ಸಣ್ಣ ಕಾರಿಗೆ ಇನ್ನೂ ಹೆಸರಿಟ್ಟಿಲ್ಲ. ಮುಂಬರುವ ದಿನಗಳಲ್ಲಿ ಈ ಕಾರಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿಯೂ ಪ್ರದರ್ಶಿಸಬಹುದು. ಹ್ಯುಂಡೈ ಕಂಪನಿಯು ಈ ಕಾರನ್ನು ವಿಶ್ವಾದ್ಯಂತ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಿದೆ.

ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದ ಹ್ಯುಂಡೈ

ಈ ಕಾರನ್ನು ಚಿಕ್ಕ ಮಕ್ಕಳಿಗಾಗಿ ಬಿಡುಗಡೆಗೊಳಿಸಬಹುದು. ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ತನ್ನ ಹೊಸ ಐ 20 ಕಾರನ್ನು ಬಿಡುಗಡೆಗೊಳಿಸಲಿದೆ. ಹ್ಯುಂಡೈ ಕಂಪನಿಯು ಹೊಸ ಐ 20 ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

Most Read Articles

Kannada
English summary
Hyundai company reveals smallest electric car details. Read in Kannada.
Story first published: Sunday, November 1, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X