Just In
- 8 min ago Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- 13 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 14 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 15 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್ಡಬ್ಲ್ಯೂಡಿ
ಲ್ಯಾಂಬೊರ್ಗಿನಿ ಕಂಪನಿಯು ತನ್ನ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್(ಆರ್ಡಬ್ಲ್ಯುಡಿ) ಸೂಪರ್ ಕಾರನ್ನು ಜನವರಿ 29ರಂದು ಬಿಡುಗಡೆಗೊಳಿಸಲಿದೆ. ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಇತ್ತೀಚೆಗೆ ಈ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು.
ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್ಡಬ್ಲ್ಯೂಡಿ ವಿನ್ಯಾಸವು ಹಿಂದಿನ ಮಾದರಿಯಾದ ಆಲ್-ವ್ಹೀಲ್ ಡ್ರೈವ್(ಎಡಬ್ಲ್ಯುಡಿ) ಆವೃತ್ತಿಯನ್ನು ಹೋಲುತ್ತದೆ. ಈ ಕಾರಿನಲ್ಲಿ ಸುಧಾರಿತ ಏರೋಡೈನಾಮಿಕ್ ಸಿಸ್ಟಂ ಅನ್ನು ಹೊಂದಿದೆ. ಇನ್ನೂ ಹೊಸ ಕಾರಿನಲ್ಲಿ ಫ್ರಂಟ್ ಸ್ಪ್ಲಿಟರ್ ಮತ್ತು ದೊಡ್ಡ ಫ್ರಂಟ್ ಏರ್ಟೇಕ್ಗಳನ್ನು ಒಳಗೊಂಡಿದೆ.
ಈ ಸೂಪರ್ಕಾರ್ ವಿನೂತನವಾದ ಡಿಫ್ಯೂಸರ್ ಅನ್ನು ಹೊಂದಿದೆ. ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಕಾರಿನಲ್ಲಿ ಹೆಚ್ಎಂಐ 8.4 ಇಂಚಿನ ಟಚ್ಸ್ಕ್ರೀನ್ ಅನ್ನು ಹೊಂದಿದೆ. ಇದರಲ್ಲಿ ಕಾರಿನ ಹಲವು ಫೀಚರ್ಸ್ಗಳನ್ನು ನಿಯಂತ್ರಿಸಬಹುದಾಗಿದೆ.
ಇದರಲ್ಲಿ ಪೋನ್ ಕನೆಕ್ಟಿವಿಟಿ, ಇಂಟರ್ನೆಟ್ ಎಕ್ಸಸ್ ಮತ್ತು ಆ್ಯಪಲ್ ಕಾರ್ಪ್ಲೇಗಳು ಸೇರಿವೆ. ಹುರಾಕಾನ್ ಇವೊ ಆರ್ಡಬ್ಲ್ಯುಡಿ ಅದೇ ಐಕಾನಿಕ್ ಎಂಜಿನ್ ಅನ್ನು ಹೊಂದಿದೆ. ಇದು 5.2 ಲೀಟರ್ ವಿ10 ಎಂಜಿನ್ 109 ಬಿಹೆಚ್ಪಿ ಪವರ್ ಮತ್ತು 540 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಕಾರು ಎಡಬ್ಲ್ಯೂಡಿ ರೂಪಾಂತರಕ್ಕಿಂತ 33ಕೆಜಿ ಕಡಿಮೆ ತೂಕವನ್ನು ಹೊಂದಿದೆ. ಹೊಸ ಹುರಾಕಾನ್ ಕಾರು ಕೇವಲ 3.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಕ್ರಮಿಸುತ್ತದೆ. ಈ ಸೂಪರ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 325 ಕಿ.ಮೀಗಳಾಗಿದೆ.
ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಉನ್ನತ ಮಟ್ಟದ ಸುರಕ್ಷತಾ ಫೀಚರ್ಸ್ಗಳನ್ನು ಅಳವಡಿಸಲಾಗಿದೆ. ಪವರ್ ಅನ್ನು ನಿಯಂತ್ರಿಸಲು ಕಾರು ಪರ್ಫಾಮೆನ್ಸ್ ಟಾಕ್ಷನ್ ಕಂಟ್ರೋಲ್ (ಪಿ-ಟಿಸಿಎಸ್) ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್, ಏರ್ಬ್ಯಾಗ್, ಇಬಿಡಿ, ಇಎಸ್ಪಿ ಸೇರಿದಂತೆ ಹಲವಾರು ಫೀಚರ್ಸ್ಗಳನ್ನು ಅಳವಡಿಸಲಾಗಿದೆ.
ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಎಡಬ್ಲೂಡಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.73 ಕೋಟಿಗಳಾಗಿದೆ. ಈ ಬೆಲೆಗೆ ಹೋಲಿಸಿದರೆ ಆರ್ಡಬ್ಲೂಡಿ ಮಾದರಿಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬಹುದು.
ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.2.90 ರಿಂದ ರೂ.3 ಕೋಟಿಗಳಿರಬಹುದು. ಇನ್ನೂ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಸ್ಪೈಡರ್ ಕಾರು ಅತಿ ಹೆಚ್ಚು ಬೆಲೆಯನ್ನು ಹೊಂದಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.1 ಕೋಟಿಗಳಾಗಿದೆ.
ಇತ್ತೀಚೆಗೆ ಲ್ಯಾಂಬೊರ್ಗಿನಿ ಕಂಪನಿಯು ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿ ಹೊಸ ಶೋರೂಂ ಅನ್ನು ತೆರೆದಿದೆ. 4,370 ಚ.ಮೀ ವಿಸ್ತೀರ್ಣದ ಈ ಶೋರೂಂ ಅನ್ನು ಮ್ಯಾಟಿಯೊ ಆರ್ಟೆಂಜಿ ಹಾಗೂ ಶರದ್ ಅಗರ್ವಾಲ್ರವರು ಉದ್ಘಾಟಿಸಿದರು. ದುಬಾರಿ ಲ್ಯಾಂಬೊರ್ಗಿನಿ ಕಾರುಗಳನ್ನು ಖರೀದಿಸುವವರಲ್ಲಿ ವಿಶ್ವದಲ್ಲೇ ಬೆಂಗಳೂರಿಗರು ಮೊದಲನೇ ಸ್ಥಾನದಲ್ಲಿದ್ದಾರೆ.
ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್ಡಬ್ಲ್ಯೂಡಿ ಕಾರು ಹಿಂದಿನ ಮಾದರಿಯಾದ ಹುರಾಕಾನ್ ಇವೊ ಎಡಬ್ಲ್ಯೂಡಿ ಕಾರಿಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಟ್ರ್ಯಾಕ್ನಲ್ಲಿ ಉತ್ತಮ ಪಫಾರ್ಮೆನ್ಸ್ ನೀಡುತ್ತದೆ. ಸೂಪರ್ಕಾರು ಪ್ರಿಯರ ಮೆಚ್ಚಿನ ಬ್ರ್ಯಾಂಡ್ ಆದ ಲ್ಯಾಂಬೊರ್ಗಿನಿ ಮತ್ತೊಂದು ಹೊಸ ಕಾರು ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಲು ಸಜ್ಜಾಗಿದೆ.