Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಿಟ್ಸುಬಿಷಿ ಜೊತೆಗೂಡಿ ಹೊಸ ಸರಣಿ ಟ್ರ್ಯಾಕ್ಟರ್ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ
ಆಧುನಿಕ ಕೃಷಿ ಚಟುವಟಿಕೆಗಳಲ್ಲಿ ಟ್ರ್ಯಾಕ್ಟರ್ಗಳ ಬಳಕೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ವಿವಿಧ ಮಾದರಿಗಳ ಟ್ರ್ಯಾಕ್ಟರ್ ಮಾದರಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಫಾರ್ಮಾ ಇಕ್ವಿಪ್ಮೆಂಟ್ ಸೆಕ್ಟರ್ ವಿಭಾಗವು ಕೃಷಿ ಚಟುವಟಿಕೆಗಳಿಗೆ ಪೂರಕವಾದ ಯಂತ್ರೋಪಕರಣ ತಯಾರಿಕೆಯಲ್ಲಿ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಮಹೀಂದ್ರಾ ಫಾರ್ಮಾ ಇಕ್ವಿಪ್ಮೆಂಟ್ ಸೆಕ್ಟರ್ ವಿಭಾಗವು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಮಾರಾಟ ಜಾಲವನ್ನು ಹೊಂದಿದ್ದು, ಆ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಟ್ರ್ಯಾಕ್ಟರ್ ಮಾದರಿಗಳೇ ಪ್ರಮುಖ ಉತ್ಪನ್ನವಾಗಿದ್ದು, ಇದೀಗ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದೆ.

ಜಪಾನ್ ವಾಹನ ತಯಾರಿಕೆ ಕಂಪನಿಯಾದ ಮಿಟ್ಸುಬಿಷಿ ಎಂಜನಿಯರಿಂಗ್ ಜೊತೆಗೂಡಿ ಕೆ2 ಸರಣಿಯ ಟ್ರ್ಯಾಕ್ಟರ್ ಉತ್ಪಾದನೆಗಾಗಿ ಕೈಜೋಡಿಸಿರುವ ಮಹೀಂದ್ರಾ ಫಾರ್ಮಾ ಕಂಪನಿಯು ಹೊಸ ಟ್ರ್ಯಾಕ್ಟರ್ಗಳನ್ನು ತೆಲಂಗಾಣದಲ್ಲಿರುವ ಜಹೀರಾಬಾದ್ ಟ್ರ್ಯಾಕ್ಟರ್ ಉತ್ಪಾದನಾ ಘಟಕದಲ್ಲಿ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಹೊಸ ಯೋಜನೆ ಅಡಿ ನಿರ್ಮಾಣವಾಗಲಿರುವ ಕೆ2 ಸರಣಿ ಟ್ರ್ಯಾಕ್ಟರ್ಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಗಳಲ್ಲಿ ಉತ್ಪಾದನೆಗೊಳ್ಳಲಿದ್ದು, ಆಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಹೊಸ ಟ್ರ್ಯಾಕ್ಟರ್ ಮಾದರಿಗಳು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತುಗೊಳ್ಳಲಿವೆ.

ಕೆ2 ಸರಣಿಯಲ್ಲಿ ಹೈ ರೇಂಜ್, ಮಿಡಲ್ ಮತ್ತು ಲೈಟ್ವೆಟ್ ಟ್ರ್ಯಾಕ್ಟರ್ ಮಾದರಿಗಳನ್ನು ಅಭಿವೃದ್ದಿಪಡಿಸಲಿರುವ ಮಹೀಂದ್ರಾ ಮತ್ತು ಮಿಟ್ಸುಬಿಷಿ ಕಂಪನಿಗಳು ಒಟ್ಟು 37 ಮಾದರಿಗಳನ್ನು ನಿರ್ಮಾಣ ಮಾಡಲಿದ್ದು, ಹೊಸ ಟ್ರ್ಯಾಕ್ಟರ್ ಮಾದರಿಗಳು ಆಯಾ ರಾಷ್ಟ್ರಗಳಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಿದ್ದಪಡಿಸಲಾಗುತ್ತದೆ. ಹೊಸ ಟ್ರ್ಯಾಕ್ಟರ್ ಪ್ರಮುಖವಾಗಿ ಲಾಟಿನ್ ಅಮೆರಿಕ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿವೆ.

ಹೊಸ ಸರಣಿಯಲ್ಲಿರುವ ಕೆ2 ಟ್ರ್ಯಾಕ್ಟರ್ ಮಾದರಿಗಳು ಆರಂಭಿಕವಾಗಿ 30ಬಿಹೆಚ್ಪಿಯಿಂದ ಹೈಎಂಡ್ ಮಾದರಿಗಳು 100ಬಿಹೆಚ್ಪಿ ಸಾಮರ್ಥ್ಯ ಹೊಂದಿದ್ದು, ಹೊಸ ಟ್ರ್ಯಾಕ್ಟರ್ ಮಾದರಿಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್ ಫಾರ್ಮ್ ಬಳಕೆ ಮಾಡಲಾಗುತ್ತಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜಹೀರಾಬಾದ್ ಟ್ರ್ಯಾಕ್ಟರ್ ಉತ್ಪಾದನಾ ಘಟಕದಲ್ಲಿ ಈಗಾಗಲೇ ಮಹೀಂದ್ರಾ ಕಂಪನಿಯ ಯುವೋ, ಜಿವೋ ಮತ್ತು ಪ್ಲಸ್ ಸರಣಿಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಇದೀಗ ಕೆ2 ಸರಣಿಯ ಟ್ರ್ಯಾಕ್ಟರ್ಗಳ ಉತ್ಪಾದನೆ ಮೂಲಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಲಿದೆ.

ಇನ್ನು 2012ರಲ್ಲಿ ಆರಂಭವಾಗಿರುವ ಆಧುನಿಕ ಸೌಲಭ್ಯವುಳ್ಳ ಜಹೀರಾಬಾದ್ ಟ್ರ್ಯಾಕ್ಟರ್ ಉತ್ಪಾದನಾ ಘಟಕವು ವಾರ್ಷಿಕವಾಗಿ 1 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಆರಂಭಿಕವಾಗಿ ಈ ಘಟಕದ ನಿರ್ಮಾಣಕ್ಕಾಗಿ ರೂ.1087 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿತ್ತು.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಎರಡು ಹಂತದ ಉತ್ಪಾದನಾ ವಿಧಾನವನ್ನು ಅಳವಡಿಸಿಕೊಂಡಿರುವ ಜಹೀರಾಬಾದ್ ಟ್ರ್ಯಾಕ್ಟರ್ ಉತ್ಪಾದನಾ ಘಟಕದಲ್ಲಿ ಸುಮಾರು 1,500 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಘಟಕದಲ್ಲಿ ನಿರ್ಮಾಣವಾಗಿ ಶೇ.65 ರಷ್ಟು ಟ್ರ್ಯಾಕ್ಟರ್ ಮಾದರಿಗಳು ವಿದೇಶಿ ಮಾರುಕಟ್ಟೆಗೆ ರಫ್ತುಗೊಳ್ಳುತ್ತವೆ.