Just In
Don't Miss!
- News
ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?
- Movies
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಕ್ಸ್‌ಯುವಿ500 ನಂತರವಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
ಥಾರ್ ನ್ಯೂ ಜನರೇಷನ್ ನಂತರ ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಕಾರುಗಳನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ ಕಾರನ್ನು 2021ರ ಜೂನ್‌ನಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ನ್ಯೂ ಜನರೇಷನ್ ಎಕ್ಸ್‌ಯುವಿ500 ಕಾರು ಬಿಡುಗಡೆಯ ನಂತರವಷ್ಟೇ ಸ್ಕಾರ್ಪಿಯೋ ಹೊಸ ಮಾದರಿಯನ್ನು ಬಿಡುಗಡೆಗೆ ಸಿದ್ದವಾಗಿರುವ ಮಹೀಂದ್ರಾ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಸ್ಕಾರ್ಪಿಯೋ ಮಾದರಿಯ ನ್ಯೂ ಜನರೇಷನ್ ಆವೃತ್ತಿಯೊಂದು ಎಸ್‌ಯುವಿ ಕಾರು ಮಾರಾಟದಲ್ಲಿ ಮತ್ತಷ್ಟು ಹೊಸ ಬದಲಾವಣೆ ಮೂಲಕ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಇದರೊಂದಿಗೆ ಸ್ಕಾರ್ಪಿಯೋ ಎಸ್‌ಯುವಿ ಕಾರು ಹೊಸ ಹೆಸರಿನೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಹೆಸರುವ ನ್ಯೂ ಜನರೇಷನ್ ಮಾದರಿಯೊಂದಿಗೆ ಸ್ಕಾರ್ಪಿಯೊನ್ ಆಗಿ ಬದಲಾಗುವ ಮಾಹಿತಿಯಿದೆ.

ಹೊಸ ಕಾರಿನ ಹೆಸರು ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಸ್ಕಾರ್ಪಿಯೊನ್(ScorpioN) ಎಂದು ನಮೂದಿಸಲಾಗಿದ್ದು, ಹೊಸ ಹೆಸರನ್ನು ಸ್ಕಾರ್ಪಿಯೊನ್ ಎಂದು ಕರೆಯಲಾಗುತ್ತೊ ಅಥವಾ ಸ್ಕಾರ್ಪಿಯೋ ಎನ್ ಎಂದು ಪ್ರತ್ಯೇಕವಾಗಿ ಹೆಸರಿಸಲಾಗುತ್ತದೊ ಎನ್ನುವ ಸ್ಪಷ್ಟತೆಯಿಲ್ಲ.

ನ್ಯೂ ಜನರೇಷನ್ ಸ್ಕಾರ್ಪಿಯೋ ಕಾರು ScorpioN ಹೆಸರಿನೊಂದಿಗೆ ರಸ್ತೆಗಳಿಯಲಿದ್ದು, ಹೊಸ ಕಾರು ವಿನ್ಯಾಸದಲ್ಲಿ ಮಾತ್ರವಲ್ಲ ಎಂಜಿನ್ ಆಯ್ಕೆಯಲ್ಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿರಲಿವೆ. ಹೊಸ ಸ್ಕಾರ್ಪಿಯೋ ಈ ಬಾರಿ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್‌ಗೆ ಪೂರಕವಾದ 2.2-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಮಾದರಿಯಲ್ಲೂ ಮಾದರಿಯಲ್ಲೂ ಖರೀದಿಗೆ ಲಭ್ಯವಾಗುವ ಎಲ್ಲಾ ಸಾಧ್ಯತೆಗಳಿವೆ.

ಥಾರ್ ನ್ಯೂ ಜನರೇಷನ್ ಮಾದರಿಯಲ್ಲೂ ಈಗಾಗಲೇ ಹೊಸದಾಗಿ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡಲಾಗಿದ್ದು, ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ ಮಾದರಿಗಳಲ್ಲೂ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಮಲ್ಟಿ ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಕ್ರೂಸ್ ಕಂಟ್ರೋಲ್, ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್ ಸೌಲಭ್ಯವಿರಲಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇದಲ್ಲದೆ ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಮತ್ತೊಂದು ಪ್ರಮುಖ ಆಕರ್ಷಣೆ ಅಂದರೆ ಮಹೀಂದ್ರಾ ಕಂಪನಿಯು ಹೊಸ ಕಾರುಗಳ ಮೂಲಕ ಕ್ರ್ಯಾಶ್ ಟೆಸ್ಟಿಂಗ್ ಸಾಕಷ್ಟು ಸುಧಾರಣೆ ಕಂಡಿರುವುದು ವಾಹನ ಮಾರಾಟ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಹೊಸ ತಾಂತ್ರಿಕ ಸೌಲಭ್ಯಗಳಿಂದಾಗಿ ವಾಹನಗಳ ಬೆಲೆಯಲ್ಲೂ ತುಸು ಹೆಚ್ಚಳವಾದರೂ ಗುಣಮಟ್ಟದ ಉತ್ಪನ್ನಗಳನ್ನು ಸಿದ್ದಪಡಿಸುವಲ್ಲಿ ಯಶಸ್ವಿಯಾಗುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.44 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.31 ಲಕ್ಷ ಬೆಲೆ ಹೊಂದಿದೆ.