India
YouTube

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಮಾರಾಟದಲ್ಲಿಯು ಪಾರುಪತ್ಯ ಮುಂದುವರೆಸಿದೆ. ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿ ಯಶ್ವಸಿಯಾಗಿದೆ. ಇಂಡೋ-ಜಪಾನೀಸ್ ವಾಹನ ತಯಾರಕರು ಕಳೆದ ತಿಂಗಳು ಮಾರಾಟದ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದರು, ಅದೂ ಸಹ ಎಲ್ಲಾ ಪ್ರತಿಸ್ಪರ್ಧಿ ಕಾರು ತಯಾರಕರಿಗಿಂತ ಆರಾಮದಾಯಕ ಮುನ್ನಡೆ ಸಾಧಿಸಿದೆ. 2022ರ ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಅಗ್ರ ಮೂರು ಮಾರುತಿ ಸುಜುಕಿ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಮಾರುತಿ ಸುಜುಕಿ ವ್ಯಾಗನ್‍ಆರ್

ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

2022ರ ಮೇ ತಿಂಗಳಿನಲ್ಲಿ ವ್ಯಾಗನ್‍ಆರ್ ಮಾದರಿಯ ಮುನ್ನಡೆ ಸಾಧಿಸಿದೆ. ವ್ಯಾಗನ್‍ಆರ್ ಕಳೆದ ತಿಂಗಳು ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಮಾರುತಿ ಸುಜುಕಿ ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 2,086 ಯುನಿಟ್‌ಗಳಿಗೆ ಹೋಲಿಸಿದರೆ ಮೇ 2022 ರಲ್ಲಿ ವ್ಯಾಗನ್ ಆರ್‌ನ 16,814 ಯುನಿಟ್‌ಗಳನ್ನು ಮಾರಾಟ ಮಾಡಿತು, ಆ ಮೂಲಕ ಶೇಕಡಾ 706 ರಷ್ಟು ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು ಅದೇ 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಎಸ್-ಸಿಎನ್‌ಜಿ ಮಾದರಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 58 ಬಿಹೆಚ್‌ಪಿ ಮತ್ತು 78 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಇದರೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ವ್ಯಾಗನ್ಆರ್ ಅನ್ನು ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರಲ್ಲಿ ಸುರಕ್ಷತೆಗಾಗಿ ಡ್ರೈವರ್-ಸೈಡ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹೈಸ್ಪೀಡ್ ಅಲರ್ಟ್, ಸೀಟ್‌ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರ ಪೀಚರ್ ಗಳನ್ನು ಕೂಡ ಒಳಗೊಂಡಿವೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಮಾರುತಿ ಸ್ವಿಫ್ಟ್

ಕಳೆದ ವರ್ಷದ ಇದೇ ಅವಧಿಯಲ್ಲಿ 7,005 ಯುನಿಟ್ ಮಾರಾಟಕ್ಕೆ ಹೋಲಿಸಿದರೆ 2022ರ ಮೇ ತಿಂಗಳಲ್ಲಿ 14,133 ಯುನಿಟ್ ಮಾರಾಟದೊಂದಿಗೆ ಸ್ವಿಫ್ಟ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ 102 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ. ಕುತೂಹಲಕಾರಿಯಾಗಿ, ಸ್ವಿಫ್ಟ್ ಕಳೆದ ತಿಂಗಳು ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಮೂರನೇ ಮಾದರಿಯಾಗಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ದೇಶಿಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಸ್ವಿಫ್ಟ್ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ. ಈ ಮಾರುತಿ ಸ್ವಿಫ್ಟ್ ಕಾರಿನಲ್ಲಿ 1.2 ಎಲ್ ಡ್ಯುಯಲ್‌ಜೆಟ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಈ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಂ(ಹೆಡ್‌ಲೈಟ್‌ಗಳು, ಡಿಆರ್‌ಎಲ್‌ಗಳು, ಟೈಲ್‌ಲೈಟ್‌ಗಳು) ಅನ್ನು ಹೊಂದಿದೆ. ಇನ್ನು 7 ಇಂಚಿನ ಟಚ್‌ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಸಿಸ್ಟಂ ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಮಾರುತಿ ಬಲೆನೊ

ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಬಲೆನೊ ಕಳೆದ ತಿಂಗಳು ಕಂಪನಿಗೆ ಮೂರನೇ ಹೆಚ್ಚು ಮಾರಾಟವಾದ ಮಾದರಿಯಾಗಿ ಹೊರಹೊಮ್ಮಿತು. ಮಾರುತಿ ಸುಜುಕಿಯು ಕಳೆದ ತಿಂಗಳು 13,970 ಯುನಿಟ್ ಮಾರಾಟವನ್ನು ದಾಖಲಿಸಿದೆ ಎಂದು ಹೇಳಿಕೊಂಡಿದೆ, 2021ರ ಮೇ ತಿಂಗಳಿನಲ್ಲಿ 4,803 ಯುನಿಟ್ ಮಾರಾಟಗಳು 191 ಪ್ರತಿಶತದಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಈ ಹೊಸ ಬಲೆನೊ ಮಾದರಿಯು ಪರಿಷ್ಕೃತ ಸ್ಟೈಲಿಂಗ್, ಗಮನಾರ್ಹವಾಗಿ ಪರಿಷ್ಕೃತ ಒಳಾಂಗಣ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಹೊಸ ಮಾರುತಿ ಬಲೆನೊ ಫೇಸ್‌ಲಿಫ್ಟ್ ಮಾದರಿಯ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗೊಂಡಿದ್ದು, ನೆಕ್ಸಾವೆವ್ ಹನಿಕೊಂಬ್ ಗ್ರಿಲ್, ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಜೊತೆಗೆ ದೊಡ್ಡ ಫಾಗ್ ಲ್ಯಾಂಪ್ ಹೌಸಿಂಗ ಅನ್ನು ಹೊಂದಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

2022ರ ಮಾರುತಿ ಬಲೆನೊ ಕಾರಿನಲ್ಲಿ ಸೈಡ್ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಂಡರೂ ಕ್ರೋಮ್ ಸ್ಟ್ರಿಪ್ ಅನ್ನು ಹೊರತುಪಡಿಸಿ ಈಗ ಕೆಳಗಿನ ವಿಂಡೋ ಲೈನ್‌ನಿಂದ ಹಿಂದಿನ ಕ್ವಾರ್ಟರ್ ಗ್ಲಾಸ್‌ಗೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹಿಂಭಾಗದಲ್ಲಿ ಹೊಸ ಬಲೆನೊ ಹೊಸ ಟೈಲ್‌ಗೇಟ್ ವಿನ್ಯಾಸ, ಹೊಸ ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್ ಅನ್ನು ಹೊಂದಿದೆ. ಇನ್ನು ಈ ಬಲೆನೊ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಎನ್ನುವ ಆರು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...

ಈ ಮಾರುತಿ ಬಲೆನೊ ಕಾರಿನಲ್ಲಿ ಲೀಟರ್ 4-ಸಿಲಿಂಡರ್ ಡ್ಯುಯಲ್ ಜೆಟ್ ಯುನಿಟ್ ಒಂದೇ ಪೆಟ್ರೋಲ್ ಎಂಜಿನ್‌ನಲ್ಲಿ ನೀಡಲಾಗಿದೆ. ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಮತ್ತು ಎಎಂಟಿ ಸೇರಿವೆ. ಈ ಕಾರು 22.95 ಕಿ.ಮೀ ಮೈಲೇಜ್ ಒದಗಿಸುತ್ತದೆ.

Most Read Articles

Kannada
English summary
Here is list maruti suzuki top 3 bestselling cars in may 2022 details
Story first published: Sunday, June 26, 2022, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X