ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಕರೋನಾ ವೈರಸ್ ಕಾರಣಕ್ಕೆ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕೆಲವು ತಿಂಗಳವರೆಗೆ ವಿಮಾನ ಸಂಚಾರವನ್ನು ರದ್ದುಪಡಿಸಲಾಗಿತ್ತು. ಈಗಲೂ ಹಲವು ದೇಶಗಳಲ್ಲಿ ವಿಮಾನಯಾನವನ್ನು ನಿರ್ಬಂಧಿಸಲಾಗಿದೆ.

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಭಾರತದಲ್ಲಿ ಕೆಲವೇ ಕೆಲವು ವಿಮಾನಯಾನ ಕಂಪನಿಗಳ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ಈ ವಿಮಾನಗಳು ವಿದೇಶಕ್ಕೂ ಪ್ರಯಾಣ ಬೆಳೆಸುತ್ತಿವೆ. ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಹಲವು ದೇಶಗಳು ಭಾರತದ ವಿಮಾನಗಳಿಗೆ ನಿರ್ಬಂಧ ವಿಧಿಸಿವೆ.

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಏರ್ ಇಂಡಿಯಾ ಭಾರತದ ಜನಪ್ರಿಯ ವಿಮಾನಯಾನ ಕಂಪನಿಗಳಲ್ಲಿ ಒಂದಾಗಿದೆ. ಹಲವಾರು ಭಾರತೀಯರು ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕಳೆದ ವರ್ಷ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್ ಇಂಡಿಯಾ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿತ್ತು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಈಗ ಏರ್ ಇಂಡಿಯಾ ಗ್ರಾಹಕರಿಗೆ ಆಘಾತ ನೀಡುವಂತಹ ಸುದ್ದಿಯೊಂದು ಹೊರ ಬಂದಿದೆ. ಏರ್ ಇಂಡಿಯಾ ಗ್ರಾಹಕರ ವಿವರಗಳು ಜಿನೀವಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಿಟಾದಿಂದ ಸೋರಿಕೆಯಾಗಿವೆ ಎಂದು ವರದಿಗಳಾಗಿವೆ.

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಈ ವಿವರಗಳಲ್ಲಿ ಗ್ರಾಹಕರ ಹೆಸರು, ಕ್ರೆಡಿಟ್ ಕಾರ್ಡ್ ವಿವರ, ಮೊಬೈಲ್ ನಂಬರ್'ಗಳು ಸೇರಿವೆ. 2011ರ ಆಗಸ್ಟ್ 26ರಿಂದ 2021ರ ಫೆಬ್ರವರಿ 3ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮಾಹಿತಿಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಸಿಟಾ, ಏರ್ ಇಂಡಿಯಾ ಸೇರಿದಂತೆ ವಿಶ್ವದ ವಿವಿಧ ವಿಮಾನಯಾನ ಕಂಪನಿಗಳಿಗೆ ದೂರಸಂಪರ್ಕ ಸೇವೆಯನ್ನು ಪೂರೈಸುತ್ತದೆ. ವಿಶ್ವದ 90%ನಷ್ಟು ವಿಮಾನಯಾನ ವ್ಯವಹಾರವನ್ನು ಸಿಟಾ ನೋಡಿಕೊಳ್ಳುತ್ತದೆ.

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯ ಮೂಲಕ ಗ್ರಾಹಕರ ವಿವರಗಳು ಸೋರಿಕೆಯಾಗಿರುವುದು ಗ್ರಾಹಕರಲ್ಲಿ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಏರ್ ಇಂಡಿಯಾ ಕಂಪನಿಯು ಈ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಒಟ್ಟು 45 ಲಕ್ಷ ಪ್ರಯಾಣಿಕರ ಮಾಹಿತಿಗಳು ಸೋರಿಕೆಯಾಗಿರ ಬಹುದು ಎಂದು ತಿಳಿಸಿರುವ ಏರ್ ಇಂಡಿಯಾ ಕಂಪನಿಯು 2011ರ ಆಗಸ್ಟ್ 26ರಿಂದ 2021ರ ಫೆಬ್ರವರಿ 3ರವರೆಗೆ ತನ್ನ ವಿಮಾನಗಳಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಗೆ ಸಲಹೆಯನ್ನು ನೀಡಿದೆ.

ಹ್ಯಾಕ್ ಆಯ್ತು ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ

ಈ ಅವಧಿಯಲ್ಲಿ ಪ್ರಯಾಣ ಮಾಡಿದ್ದವರು ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ತಮ್ಮ ಎಲ್ಲಾ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಿಸಲು ಮನವಿ ಮಾಡಿದೆ.ಮಾಹಿತಿ ಸೋರಿಕೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.

Most Read Articles

Kannada
English summary
Air India passenger data hacked. Read in Kannada.
Story first published: Tuesday, May 25, 2021, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X