ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಟೋಕಿಯೊ ಪ್ಯಾರಾಲಿಂಪಿಕ್ಸ್'ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸುಮಿತ್ ಆಂಟಿಲ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಸುಮಿತ್ ಆಂಟಿಲ್ 68.55 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಸಾಧನೆ ಮಾಡಿದ ಸುಮಿತ್ ಆಂಟಿಲ್'ರವರಿಗೆ Mahindra and Mahindra ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಉಡುಗೊರೆ ಘೋಷಿಸಿದ್ದಾರೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಸುಮಿತ್ ಆಂಟಿಲ್'ರವರಿಗೆ ಸಿಗಲಿದೆ ಹೊಸ XUV 700 ಎಸ್‌ಯು‌ವಿ

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿರುವ ಆನಂದ್ ಮಹೀಂದ್ರಾ, ಪ್ಯಾರಾಲಿಂಪಿಕ್ಸ್ ನಲ್ಲಿ ಸುಮಿತ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈಗ ಭಾರತವು ತನ್ನ ಖಾತೆಯಲ್ಲಿ ಎರಡು ಚಿನ್ನದ ಪದಕಗಳನ್ನು ಹೊಂದಿದೆ. ಈ ಸಾಧನೆ ಮಾಡಿದ ಸುಮಿತ್ ಆಂಟಿಲ್ XUV 700 ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ನಂತರ Mahindra and Mahindra ಲಿಮಿಟೆಡ್‌ನ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ರವರನ್ನು ಟ್ಯಾಗ್ ಮಾಡಿ, ಸುಮಿತ್ ಆಂಟಿಲ್ ರವರಿಗೆ ಉಡುಗೊರೆಯಾಗಿ ನೀಡಲು ವಿಶೇಷ ಆವೃತ್ತಿಯ XUV 700 ಎಸ್‌ಯು‌ವಿಯನ್ನು ಸಿದ್ಧಪಡಿಸುವಂತೆ ಹೇಳಿದ್ದಾರೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

2015ರಲ್ಲಿ ಒಂದು ಕಾಲು ಕಳೆದುಕೊಂಡ ಸುಮಿತ್

23 ವರ್ಷದ ಸುಮಿತ್ ಆಂಟಿಲ್ 2015 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡರು. ಅವರು ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ರವರ ಸಹ ಆಟಗಾರರಾಗಿದ್ದರು. ಅವರಿಬ್ಬರು ಹಲವಾರು ಚಾಂಪಿಯನ್‌ಶಿಪ್‌ಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದರು.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

Mahindra XUV 700

Mahindra ಕಂಪನಿಯು ತನ್ನ ಬಹುನಿರೀಕ್ಷಿತ XUV 700 ಎಸ್‌ಯು‌ವಿಯನ್ನು ಆಗಸ್ಟ್ 15 ರಂದು ಅನಾವರಣಗೊಳಿಸಿತು. Mahindra XUV 700 ಎಸ್‌ಯು‌ವಿಯನ್ನು ಅತ್ಯಂತ ಶಕ್ತಿಶಾಲಿ ಎಂಜಿನ್ ಆಯ್ಕೆ ಹಾಗೂ ಅತ್ಯಾಧುನಿಕ ಫೀಚರ್ ಗಳೊಂದಿಗೆ ಅನಾವರಣಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. Mahindra XUV 700 ಭಾರತೀಯ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಕೇವಲ 5 ಸೆಕೆಂಡುಗಳಲ್ಲಿ ಗಂಟೆಗೆ 0 - 60 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುವ ಮೊದಲ ಎಸ್‌ಯು‌ವಿಯಾಗಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

Mahindra XUV 700 ಎಸ್‌ಯು‌ವಿಯನ್ನು MX ಹಾಗೂ AX ಎಂಬ ಎರಡು ಮಾದರಿಗಳಲ್ಲಿ ಹಾಗೂ ಒಟ್ಟು ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯು‌ವಿಯು 5 ಹಾಗೂ 7 ಸೀಟುಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ. XUV 700 ಎಸ್‌ಯು‌ವಿಯ MX ಹಾಗೂ AX ಮಾದರಿಗಳನ್ನು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಹೊಸ ವಿನ್ಯಾಸದೊಂದಿಗೆ ಈ ಎಸ್‌ಯು‌ವಿಯು ಆಧುನಿಕ ಫೀಚರ್ ಗಳನ್ನು ಹೊಂದಿದೆ. XUV 700 ಈ ಸೆಗ್ ಮೆಂಟಿನಲ್ಲಿ Mercedes Benz ಪ್ರೇರಿತ ಡ್ಯುಯಲ್ ಡಿಸ್ಪ್ಲೇ ಸೆಟಪ್ ಒಳಗೊಂಡಿರುವ ಮೊದಲ ಎಸ್‌ಯು‌ವಿಯಾಗಿದೆ. ಈ ಡಿಸ್ ಪ್ಲೇ ಇನ್ಫೋಟೇನ್‌ಮೆಂಟ್ ಸಿಸ್ಟಂ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

XUV 700 ನಲ್ಲಿರುವ ಇತರ ಫೀಚರ್ ಗಳ ಬಗ್ಗೆ ಹೇಳುವುದಾದರೆ ಈ ಎಸ್‌ಯುವಿಯು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಆಟೋ ಹೋಲ್ಡ್‌ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕೀ ಲೆಸ್ ಎಂಟ್ರಿ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಗಳನ್ನು ಹೊಂದಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಇದರ ಜೊತೆಗೆ ಆಟೋ ಬೂಸ್ಟರ್ ಹೆಡ್ ಲ್ಯಾಂಪ್‌, ಸ್ಮಾರ್ಟ್ ಡೋರ್ ಹ್ಯಾಂಡಲ್‌, ದೊಡ್ಡ ಪನೋರಾಮಿಕ್ ಸನ್ ರೂಫ್, ಪರ್ಸನಲ್ ಅಲರ್ಟ್, ಡ್ರೈವರ್ ಡ್ರೈನೆಸ್ ಅಲರ್ಟ್ ಸಿಸ್ಟಂ ಸಹ ಹೊಂದಿದೆ. Mahindra XUV700 ಈ ಸೆಗ್ ಮೆಂಟಿನಲ್ಲಿ ಸ್ಮಾರ್ಟ್ ಡೋರ್ ಹ್ಯಾಂಡಲ್ ಪಡೆಯುವ ಮೊದಲ ಎಸ್‌ಯುವಿಯಾಗಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಈ ಹ್ಯಾಂಡಲ್ ಹೊರಭಾಗದಲ್ಲಿ ತೆರೆದುಕೊಂಡು, ಕೇವಲ ಟಚ್ ಮಾಡುವುದರಿಂದ ಒಳಭಾಗದಲ್ಲಿ ಮುಚ್ಚುತ್ತದೆ. ಈ ಡೋರ್ ಹ್ಯಾಂಡಲ್‌ಗಳನ್ನು ಸದ್ಯಕ್ಕೆ ಐಷಾರಾಮಿ ಕಾರುಗಳಲ್ಲಿ ಮಾತ್ರ ನೀಡಲಾಗುತ್ತಿದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಪರ್ಸನಲ್ ವಾಯ್ಸ್ ಅಲರ್ಟ್ ಸಿಸ್ಟಂನೊಂದಿಗೆ XUV 700 ಈ ಸೆಗ್ ಮೆಂಟಿನಲ್ಲಿ ಅತಿದೊಡ್ಡ ಸನ್ ರೂಫ್ ಅನ್ನು ಹೊಂದಿದೆ. ಚಾಲನೆ ಮಾಡುವಾಗ ಚಾಲಕನಿಗೆ ನಿದ್ರೆ ಬಂದರೆ ಎಚ್ಚರಿಸಿ ಡ್ರೈವಿಂಗ್ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಲು ಈ ಸಿಸ್ಟಂ ಆಟೋಮ್ಯಾಟಿಕ್ ಆಗಿ ಎಚ್ಚರಿಕೆಯನ್ನು ನೀಡುತ್ತದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

ಇನ್ನು ಈ ಎಸ್‌ಯುವಿಯಲ್ಲಿರುವ ಎಂಜಿನ್ ಬಗ್ಗೆ ಹೇಳುವುದಾದರೆ XUV 700 ಡೀಸೆಲ್ ಹಾಗೂ ಪೆಟ್ರೋಲ್ ಇಂಜಿನ್ ಆಯ್ಕೆಗಳನ್ನು ಹೊಂದಿದೆ. ಇವುಗಳಲ್ಲಿ 2.2 ಲೀಟರ್ ಡೀಸೆಲ್ ಎಂಜಿನ್ 153 ಬಿಹೆಚ್‌ಪಿ ಪವರ್ ಹಾಗೂ 360 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದೆಡೆ, 2.0 ಲೀಟರ್ ಎಂ ಸ್ಟಾಲಿಯನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 188 ಬಿಹೆಚ್‌ಪಿ ಪವರ್ ಹಾಗೂ 380 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಪ್ಯಾರಾಲಿಂಪಿಕ್ಸ್'ನಲ್ಲಿ ಬಂಗಾರ ಗೆದ್ದ ಆಟಗಾರನಿಗೆ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

Mahindra XUV 700 ಎಸ್‌ಯುವಿಯು ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿ Tata Safari, MG Hector Plus, Hyundai Alcazar ನಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ. Mahindra ಸದ್ಯಕ್ಕೆ ಈ ಎಸ್‌ಯುವಿಯ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಎಸ್‌ಯುವಿಯ ಬೆಲೆಯನ್ನು ರೂ. 15 ಲಕ್ಷಗಳಿಂದ ರೂ. 24 ಲಕ್ಷಗಳವರೆಗೆ ನಿಗದಿ ಪಡಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Anand mahindra announces mahindra xuv 700 to sumit antil who won gold medal at paralympics details
Story first published: Tuesday, August 31, 2021, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X