ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

ಭಾರತದಲ್ಲಿ ಸಾಕಷ್ಟು ಜನರು ವಿವಿಧ ರೀತಿಯ ಆವಿಷ್ಕಾರಗಳನ್ನು ಮಾಡುತ್ತಿರುತ್ತಾರೆ. ಅವರ ಕಥೆಗಳು ನಮಗೆ ಸ್ಫೂರ್ತಿ ನೀಡುತ್ತವೆ. ಕೆಲವರು ಮನೆಯಲ್ಲಿಯೇ ಕಾರು ಹಾಗೂ ದ್ವಿಚಕ್ರವಾಹನಗಳನ್ನು ತಯಾರಿಸುತ್ತಾರೆ. ಎಲೆಕ್ಟ್ರಿಕ್ ವಾಹನಗಳನ್ನು ಸಹ ಮನೆಯಲ್ಲಿಯೇ ತಯಾರಿಸುತ್ತಾರೆ.

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

ಈಗ ಸೈಕಲ್ ಬೈಸಿಕಲ್ ರಿಪೇರಿ ಅಂಗಡಿಯ ಮಾಲೀಕರೊಬ್ಬರು ಎಲೆಕ್ಟ್ರಿಕ್ ಬೈಕ್ ತಯಾರಿಸಿರುವ ಸುದ್ಧಿ ಹೊರಬಂದಿದೆ. ಈ ಮಾಲೀಕರು 11 ತಿಂಗಳ ಹಿಂದೆ ಈ ಬೈಕ್ ತಯಾರಿ ಕೆಲಸವನ್ನು ಆರಂಭಿಸಿದರು. ಬೇರೆ ವಾಹನಗಳ ಬಿಡಿಭಾಗಳನ್ನು ಬಳಸಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ತಯಾರಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

ಈ ಎಲೆಕ್ಟ್ರಿಕ್ ಬೈಕಿನಲ್ಲಿ ಬೇರೆ ಬೈಕ್‌ಗಳ ಹಾಗೂ ಸೈಕಲ್‌ಗಳ ಬಿಡಿ ಭಾಗಗಳನ್ನು ಬಳಸಲಾಗಿದೆ. ಇದರ ಜೊತೆಗೆ ಈ ಬೈಕಿಗೆ ಅಗತ್ಯವಿದ್ದ ಬಿಡಿ ಭಾಗಗಳನ್ನು ಸೈಕಲ್ ರಿಪೇರಿ ಅಂಗಡಿ ಮಾಲೀಕರು ತಮ್ಮ ವರ್ಕ್ ಶಾಪ್ ನಲ್ಲಿ ತಯಾರಿಸಿ ಕೊಂಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

ಲೇಥ್ ವರ್ಕ್ ಶಾಪ್ ನಲ್ಲಿ ಈ ಬಿಡಿಭಾಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬೈಕಿನ ಹಿಂಭಾಗದಲ್ಲಿ ಅಳವಡಿಸಲಾಗಿರುವ ಸ್ಪ್ರಾಕೆಟ್ ಅನ್ನು ಅವರು ಹೊರಗಿನಿಂದ ಖರೀದಿಸಿದ್ದಾರೆ. ಈ ಎಲೆಕ್ಟ್ರಿಕ್ ಬೈಕಿನಲ್ಲಿ ಅಳವಡಿಸಿರುವ ಬ್ಯಾಟರಿಯು ಸುಮಾರು 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಬೈಕ್ 20-22 ಕಿ.ಮೀಗಳವರೆಗೆ ಚಲಿಸುತ್ತದೆ. ದೊಡ್ಡ ದೊಡ್ಡ ಕಂಪನಿಯ ಬೈಕುಗಳಿಗೆ ಹೋಲಿಸಿದರೆ ಇದು ಕಡಿಮೆ ದೂರವೆನಿಸಿದರೂ ಬೇರೊಬ್ಬರ ಸಹಾಯವಿಲ್ಲದೆ ಸೈಕಲ್ ಶಾಪ್ ಮಾಲೀಕರೇ ಈ ಎಲೆಕ್ಟ್ರಿಕ್ ಬೈಕ್ ಅನ್ನು ಸ್ವತಃ ರಚಿಸಿದ್ದಾರೆ ಎಂಬುದನ್ನು ಗಮನಿಸಬೇಕು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

170 ಕೆ.ಜಿ ತೂಕವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಬಾಬರ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

ಎತ್ತರದ ಹ್ಯಾಂಡಲ್‌ಬಾರ್‌ಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಬೈಕಿನಲ್ಲಿ ಕೇವಲ ಒಂದು ಸೀಟನ್ನು ನೀಡಲಾಗಿದೆ. ಈ ಎಲೆಕ್ಟ್ರಿಕ್ ಬೈಕಿನ ಮುಂಭಾಗದಲ್ಲಿರುವ ಸರ್ಕ್ಯುಲರ್ ಹೆಡ್‌ಲ್ಯಾಂಪ್ ಈ ಬೈಕಿಗೆ ರೆಟ್ರೊ ಲುಕ್ ನೀಡುತ್ತದೆ. ಈ ವೀಡಿಯೊವನ್ನು ಇಬಾಡು ರಹಮಾನ್ ಟೆಕ್ ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ವೀಡಿಯೊ ಬಹುತೇಕ ಜನರ ಗಮನ ಸೆಳೆದಿದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಯಾತ್ಮಕ ಚಿಂತನೆಗಳನ್ನು ಹೊಂದಿರುವ ಜನರಿದ್ದು, ಈ ರೀತಿಯ ವಾಹನಗಳನ್ನು ತಯಾರಿಸುತ್ತಲೇ ಇರುತ್ತಾರೆ. ಪ್ರತಿಭಾವಂತ ವ್ಯಕ್ತಿಗಳು ತಮ್ಮ ಮನೆಯಲ್ಲಿಯೇ ಈ ರೀತಿಯ ಬೈಕ್ ಗಳನ್ನು ತಯಾರಿಸುತ್ತಿರುವುದು ಇದೇ ಮೊದಲಲ್ಲ.

ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಸೈಕಲ್ ಶಾಪ್ ಮಾಲೀಕ

ಅವರ ಸಾಧನೆಗಳು, ಆವಿಷ್ಕಾರಗಳು ನಮಗೆ ಸ್ಫೂರ್ತಿ ನೀಡಬಹುದಾದರೂ, ಹೀಗೆ ತಯಾರಿಸಲಾದ ವಾಹನಗಳು ಕಾನೂನಿಗೆ ವಿರುದ್ಧವಾಗಿವೆ.ಈ ರೀತಿ ತಯಾರಾದ ವಾಹನಗಳ ಸಂಚಾರಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಅನುಮತಿ ನೀಡುವುದಿಲ್ಲ. ಈ ವಾಹನಗಳನ್ನು ಸಾರ್ವಜನಿಕ ರಸ್ತೆಗಳ ಬದಲು ಖಾಸಗಿ ಸ್ಥಳಗಳಲ್ಲಿ ಚಾಲನೆ ಮಾಡಬೇಕಾಗುತ್ತದೆ.

Most Read Articles

Kannada
English summary
Bicycle repair shop owner develops electric bike. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X