ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಧರಿಸುವ ಬಗ್ಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಬಹುತೇಕ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದೇ ಇಲ್ಲ. ಹೆಲ್ಮೆಟ್ ನಿಯಮವಿರುವುದು ನಮಗಲ್ಲ ಎಂಬ ಉದಾಸೀನ ಮನೋಭಾವವನ್ನು ಹೊಂದಿರುತ್ತಾರೆ.

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಇದರಿಂದಾಗಿ ದಂಡ ತೆರಬೇಕಾಗುತ್ತದೆ. ದ್ವಿಚಕ್ರ ವಾಹನ ಸವಾರರ ಸುರಕ್ಷತೆಯಲ್ಲಿ ಹೆಲ್ಮೆಟ್‌ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣಕ್ಕಾಗಿಯೇ ಭಾರತೀಯ ಮೋಟಾರು ವಾಹನ ಕಾಯ್ದೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಸವಾರರಿಗೆ ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಕೆಲವು ದ್ವಿಚಕ್ರ ವಾಹನ ಸವಾರರು ಮಾತ್ರ ಹೆಲ್ಮೆಟ್ ಧರಿಸುತ್ತಾರೆ. ಈಗ ಹೆಲ್ಮೆಟ್'ನ ಅಗತ್ಯವನ್ನು ಒತ್ತಿ ಹೇಳುವ ವೀಡಿಯೊವೊಂದನ್ನು ಯೂಟ್ಯೂಬ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ರೋಡ್ ಅಡಿಕ್ಟ್ ಎಂಬ ಯೂಟ್ಯೂಬ್ ಚಾನೆಲ್ ಈ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ವೀಡಿಯೊದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ಸುಜುಕಿ ಎರ್ಟಿಗಾ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲಿ ನಿಂತಿದೆ. ಇದರಿಂದಾಗಿ ಹಿಂದಿನಿಂದ ಬಂದ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಎರ್ಟಿಗಾ ಕಾರಿಗೆ ಗುದ್ದಿದ್ದಾನೆ.

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಕಾರಿಗೆ ಗುದಿಯುವ ಬೈಕ್ ಸವಾರ ಕೆಳಕ್ಕೆ ಬೀಳುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಘಟನೆಗೆ ಪ್ರಮುಖ ಕಾರಣ ಎರ್ಟಿಗಾ ಕಾರು ರಸ್ತೆ ಮಧ್ಯದಲ್ಲಿ ಇದ್ದಕ್ಕಿದ್ದಂತೆ ನಿಂತಿರುವುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ತುಸು ಎಚ್ಚರಿಕೆ ವಹಿಸಿ ಎರ್ಟಿಗಾ ಕಾರ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದರೆ ಅಪಘಾತ ಸಂಭವಿಸುವುದನ್ನು ತಪ್ಪಿಸಬಹುದಿತ್ತು. ಬೈಕ್ ಸವಾರನು ಕಾರಿನ ಹಿಂಬದಿಯ ವಿಂಡೋಗೆ ಡಿಕ್ಕಿ ಹೊಡೆಯುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಅಪಘಾತದಿಂದಾಗಿ ಬೈಕ್ ಸವಾರನ ಬಾಯಿಗೆ ಪೆಟ್ಟು ಬಿದ್ದು ರಕ್ತ ಸೋರುತ್ತಿರುವುದನ್ನು ಗಮನಿಸಬಹುದು. ಅಪಘಾತವಾದಾಗ ಯುವಕ ಹೆಲ್ಮೆಟ್ ಧರಿಸದೇ ಹೋಗಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಗಳಿದ್ದವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಅಪಘಾತದಲ್ಲಿ ಬೈಕಿನ ಮುಂಭಾಗಕ್ಕೆ ಹಾನಿಯಾಗಿದೆ. ಹೆಲ್ಮೆಟ್ ಧರಿಸಿದ್ದ ಕಾರಣಕ್ಕೆ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ರಸ್ತೆಯಲ್ಲಿ ಹಾದುಹೋಗುತ್ತಿದ್ದ ಬೈಕ್ ಸವಾರ ಧರಿಸಿದ್ದ ಹೆಲ್ಮೆಟ್ ಕ್ಯಾಮೆರಾದಲ್ಲಿ ಈ ಘಟನೆಯನ್ನು ರೆಕಾರ್ಡ್ ಮಾಡಲಾಗಿದೆ.

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊ ಪೋಸ್ಟ್ ಮಾಡಿರುವವರು ಹೆಲ್ಮೆಟ್‌ ಧರಿಸುವುದರಿಂದ ಆಗುವ ಪ್ರಯೋಜಗಳ ಬಗ್ಗೆ ಹೇಳಿದ್ದಾರೆ. ಚಿತ್ರಕೃಪೆ: ರೋಡ್ ಅಡಿಕ್ಟ್

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಮತ್ತೊಂದು ಬೈಕ್ ಸವಾರನು ತನ್ನ ಕೆಟಿಎಂ ಬೈಕಿನಲ್ಲಿ ಸಾಗುತ್ತಿದ್ದಾಗ ಈ ಎಲ್ಲಾ ಘಟನೆ ಆಕಸ್ಮಿಕವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಪ್ರಯಾಣಿಸುವಾಗ ಸುರಕ್ಷತೆ ಅತ್ಯಗತ್ಯ. ಈ ಕಾರಣಕ್ಕೆ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಕಾರಿನಲ್ಲಿ ಪ್ರಯಾಣಿಸುವವರ ಸುರಕ್ಷತೆಗಾಗಿ ಕಾರುಗಳ ಮುಂಭಾಗದಲ್ಲಿ ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ವಾಹನ ತಯಾರಕ ಕಂಪನಿಗಳಿಗೆ ಆದೇಶ ನೀಡಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಮಾರಾಟವಾಗುವ ಎಲ್ಲಾ ಹೊಸ ಕಾರುಗಳಲ್ಲಿ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ಕೇಂದ್ರ ಸರ್ಕಾರವು ಈ ಹಿಂದೆ ಎಬಿಎಸ್ ಹಾಗೂ ಸಿಬಿಎಸ್ ಬ್ರೇಕಿಂಗ್'ಗಳನ್ನು ಕಡ್ಡಾಯಗೊಳಿಸಿತ್ತು.

Most Read Articles

Kannada
English summary
Helmet saves bike rider's life. Read in Kannada.
Story first published: Monday, March 8, 2021, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X