ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಟೀಂ ಇಂಡಿಯಾದ ಯುವ ವೇಗದ ಬೌಲರ್ ನವದೀಪ್ ಸೈನಿ ಕಳೆದ ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ ಗಮನಸೆಳೆದಿದ್ದರು. ಇದೀಗ ಮತ್ತೆ ನವದೀಪ್ ಸೈನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಆದರೆ ಈ ಬಾರಿ ಕ್ರಿಕೆಟ್ ನಿಂದ ಅಲ್ಲ ಬದಲಾಗಿ ವಾಹನಗಳನ್ನು ರೈಡ್ ಮಾಡಿ ಸದ್ದು ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮಹೀಂದ್ರಾ ಥಾರ್ ಎಸ್‍ಯುವಿಯ ಮೂಲಕ ನವದೀಪ್ ಸೈನಿ ಆಫ್-ರೋಡ್ ಮಾಡಿದ್ದರು. ಈ ಬಾರಿ ಅವರು ಐಷಾರಾಮಿ ಹಾರ್ಲೆ ಡೇವಿಡ್‌ಸನ್‌ ಬೈಕ್‌ನೊಂದಿಗೆ ಶರ್ಟ್​ಲೆಸ್ ಆಗಿ ಪೋಸ್‌ ಕೊಟ್ಟಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಈ ವಿಡಿಯೋವನ್ನು ಹಾರ್ಲೆ ಡೇವಿಡ್‌ಸನ್‌ ಬ್ರ್ಯಾಂಡ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ್ದಾರೆ . ವಿಡಿಯೋದಲ್ಲಿ ಅವರು ಗದ್ದೆ ಪ್ರದೇಶದಲ್ಲಿ ಹಾರ್ಲೆ ಡೇವಿಡ್‌ಸನ್‌ ಬೈಕಿನಲ್ಲಿ ಕುಳಿತುಕೊಂಡು ಆಕ್ಸಿಲೇಟರ್ ರೈಸ್ ಮಾಡತ್ತ ಧೂಳೆಬ್ಬಿಸಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದ್ದು, 1,400 ಕ್ಕೂ ಹೆಚ್ಚು ರಿಟ್ವೀಟ್‌ಗಳು ಮತ್ತು 3.60 ಲಕ್ಷ ವಿವ್ಯೂ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ನವದೀಪ್ ಸೈನಿ ಕಾಲೆಳೆದಿದ್ದಾರೆ. ಇನ್ನು ಕೆಲವರು ಇವರನ್ನು ಟ್ರೋಲ್ ಮಾಡಿದ್ದಾರೆ.

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಆಟದತ್ತ ಗಮನ ಹರಿಸಿ, ಬರೀ ಹವಾ ಮಾಡುತ್ತಾ ಇದ್ದರೆ, ಗಾಳಿಯಲ್ಲೇ ಮರೆಯಾಗಿ ಹೋಗುತ್ತೀರ ಎಂದು ಕೆಲವರು ಕಾಲೆಳೆದಿದ್ದಾರೆ. ಕೆಲವರು ಇವರು ವಾಯುಮಾಲಿನ್ಯ ಉಂಟುಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಶೋಕಿ ಬಿಟ್ಟು ಆಟದತ್ತ ಗಮನ ಹರಿಸು ಎಂದು ಹೇಳಿದ್ದಾರೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಹಾರ್ಲೆ-ಡೇವಿಡ್ಸನ್ ಪ್ರೀಮಿಯಂ ಮತ್ತು ಐಕಾನಿಕ್ ಬೈಕ್ ತಯಾರಕರಲ್ಲಿ ಒಬ್ಬರು, ಹಾರ್ಲೆ-ಡೇವಿಡ್ಸನ್ ಬೈಕ್‌ಗಳಿಗೆ ಪ್ರಪಂಚಾದ್ಯಂತ ದೊಡ್ಡ ಅಭಿಮಾನಿ ವರ್ಗವಿದೆ. ಈ ಹಾರ್ಲೆ-ಡೇವಿಡ್ಸನ್ ಬೈಕ್‌ಗಳಿಗೆ ಹೆಚ್ಚಾಗಿ ಚಲನಚಿತ್ರ ಸೆಲೆಬ್ರಿಟಿಗಳು ಅಭಿಮಾನಿಗಳಿದ್ದಾರೆ.

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಕ್ರಿಕೆಟಿಗರೂ ಭಿನ್ನವಾಗಿಲ್ಲ, ಮಹೇಂದ್ರ ಸಿಂಗ್ ಧೋನಿ ಅವರು ಕೂಡ ಹಾರ್ಲೆ-ಡೇವಿಡ್ಸನ್ ಬೈಕ್ ಅಭಿಮಾನಿಯಾಗಿದ್ದಾರೆ, ಮಹೇಂದ್ರ ಸಿಂಗ್ ಧೋನಿ ಅವರು ಬೈಕ್ ಗಳ ದೊಡ್ಡ ಅಭಿಮಾನಿಯಾಗಿದ್ದು, ಅವರ ಬಳಿ ಐಷಾರಾಮಿ ಬೈಕ್‌ಗಳ ಸಂಗ್ರಹವಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ಇನ್ನು ಇತ್ತೀಚೆಗೆ ನವದೀಪ್ ಸೈನಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಗಿಫ್ಟ್ ಪಡೆದ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಆಫ್-ರೋಡ್ ರೈಡ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಂಡೆಯಾದರೂ ಡೋಂಟ್ ಕೇರ್, ಗುಂಡಿಯಾದ್ರೂ ಭಯವಿಲ್ಲದಂತೆ ಮೈನವಿರೇಳಿಸುವಂತೆ ಕ್ರಿಕಿಟಿಗ ನವದೀಪ್ ಸೈನಿ ಅವರು ಆಪ್-ರೋಡ್ ರೈಡ್ ಮಾಡಿದ್ದರು

4x4 ಸಿಸ್ಟಂ ಒಳಗೊಂಡ ಥಾರ್ ಎಸ್‍ಯುವಿಯಲ್ಲಿ ನವದೀಪ್ ಅವರ ಫನ್ ರೈಡ್ ಎದೆ ಝಲ್ ಎನಿಸುವಂತಿದೆ. ನವದೀಪ್ ಕಳೆದ ತಿಂಗಳು ಥಾರ್ ಎಸ್‍ಯುವಿಯನ್ನು ಪಡೆದುಕೊಂಡರು. ಅವರ ಥಾರ್ ಎಸ್‍ಯುವಿಯು ಕಪ್ಪು ಬಣ್ಣದಲ್ಲಿದೆ. ಅವರ ಕುಟುಂಬದ ಸದಸ್ಯರು ತೆರಳಿ ಎಸ್‍ಯುವಿಯ ವಿತರಣೆಯನ್ನು ಪಡೆದುಕೊಂಡಿದ್ದರು.

ಹಾರ್ಲೆ ಡೇವಿಡ್‌ಸನ್‌ ಬೈಕ್ ಮೂಲಕ ಧೂಳೆಬ್ಬಿಸಿದ ಕ್ರಿಕೆಟಿಗನ ಕಾಲೆಳೆದ ನೆಟ್ಟಿಗರು

ನವದೀಪ್ ಸೈನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಅದರೆ ಕರೋನಾ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಲ್ಲಿಸಿದ್ದ 2021ರ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.

Most Read Articles

Kannada
English summary
India Pacer Navdeep Saini Kicks Up Dirt In Harley-Davidson Bike. Read In Kannada.
Story first published: Monday, May 31, 2021, 15:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X