ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ನಡೆದ ಟಿ 20 ಕ್ರಿಕೆಟ್ ಸರಣಿಯನ್ನು ಗೆದ್ದುಕೊಂಡಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿಯವರಿಗೆ ಕೆಂಪು ಬಣ್ಣದ ಹ್ಯುಂಡೈ ಐ 20 ಟರ್ಬೊ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.ವಿರಾಟ್ ಕೊಹ್ಲಿಯವರು ಪಡೆದ ಹ್ಯುಂಡೈ ಐ 20 ಟರ್ಬೊ ಕಾರು ಹ್ಯುಂಡೈ ಐ 20 ಕಾರಿನ ಟಾಪ್ ಎಂಡ್ ಮಾದರಿಯಾಗಿದೆ.

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಹ್ಯುಂಡೈ ಐ 20 ದೇಶಿಯ ಮಾರುಕಟ್ಟೆಯಲ್ಲಿರುವ ದುಬಾರಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ಒಂದಾಗಿದೆ. ಹ್ಯುಂಡೈ ಐ 20 ಮೂಲ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.6.79 ಲಕ್ಷಗಳಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಇನ್ನು ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.32 ಲಕ್ಷಗಳಾಗಿದೆ. ಹ್ಯುಂಡೈ ಐ 20 ಕಾರ್ ಅನ್ನು ಮ್ಯಾಗ್ನಾ, ಸ್ಪೋರ್ಟ್ಸ್, ಆಸ್ತಾ ಹಾಗೂ ಆಸ್ತಾ (ಆಪ್ಶನಲ್) ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಹ್ಯುಂಡೈ ಐ 20 ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಜಾ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ಹೋಂಡಾ ಜಾಝ್ ಸೇರಿದಂತೆ ಹಲವು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳಿಗೆ ಪೈಪೋಟಿ ನೀಡುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಹ್ಯುಂಡೈ ಐ 20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಅನ್ನು 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.5 ಲೀಟರ್ ಡೀಸೆಲ್ ಎಂಜಿನ್ ಹಾಗೂ 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸೇರಿದಂತೆ ಒಟ್ಟು 3 ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಹ್ಯುಂಡೈನ ಐ 20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಹಲವಾರು ಅತ್ಯಾಧುನಿಕ ಫೀಚರ್'ಗಳನ್ನು ಹೊಂದಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರು ಕಾರುಗಳ ಬಗ್ಗೆ ವಿಪರೀತ ಕ್ರೇಜ್ ಹೊಂದಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ಇದಕ್ಕೆ ಅವರ ಕಾರು ಸಂಗ್ರಹದಲ್ಲಿರುವ ಕಾರುಗಳೇ ಸಾಕ್ಷಿಯಾಗಿವೆ. ವಿರಾಟ್ ಕೊಹ್ಲಿಯವರು ಆಡಿ ಆರ್ 8 ಎಲ್ಎಂಎಕ್ಸ್, ಆರ್‌ಎಸ್ 5, ಎ 8 ಎಲ್, ಎಸ್ 5 ಹಾಗೂ ಆರ್‌ಎಸ್ 6 ಸೇರಿದಂತೆ ಹಲವು ಆಡಿ ಕಾರುಗಳನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ವಿರಾಟ್ ಕೊಹ್ಲಿ ಆಡಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಎಂಬುದು ಗಮನಾರ್ಹ. ಈ ಕಾರಣಕ್ಕೆ ವಿರಾಟ್ ಕೊಹ್ಲಿ ಸಾಕಷ್ಟು ಸಂಖ್ಯೆಯ ಆಡಿ ಕಾರುಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿಯವರು ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಹಾಗೂ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರುಗಳನ್ನು ಸಹ ಹೊಂದಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ವಿರಾಟ್ ಕೊಹ್ಲಿಯವರು ಏಕಾಂಗಿಯಾಗಿ ಅಥವಾ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಪ್ರಯಾಣಿಸುವಾಗ ಈ ಕಾರುಗಳನ್ನು ಬಳಸುತ್ತಾರೆ. ವಿರಾಟ್ ಕೊಹ್ಲಿಯವರು ಲ್ಯಾಂಡ್ ರೋವರ್ ವೋಗ್ ಕಾರನ್ನು ಸಹ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಕಾರು ಸಂಗ್ರಹಕ್ಕೆ ಸೇರ್ಪಡೆಯಾಯ್ತು ಮತ್ತೊಂದು ಕಾರು

ವಿರಾಟ್ ಕೊಹ್ಲಿ ದೆಹಲಿಯಲ್ಲಿದ್ದಾಗ ಈ ಕಾರನ್ನು ಬಳಸುವ ಕಾರಣಕ್ಕೆ ಈ ಕಾರನ್ನು ದೆಹಲಿಯಲ್ಲಿ ಇರಿಸಲಾಗಿದೆ. ಈಗ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯ ಜೊತೆಗೆ ಪಡೆದಿರುವ ಹ್ಯುಂಡೈ ಐ 20 ಟರ್ಬೊ ಕಾರು ಅವರ ಕಾರು ಸಂಗ್ರಹಕ್ಕೆ ಹೊಸ ಸೇರ್ಪಡೆಯಾಗಿದೆ.

Most Read Articles

Kannada
English summary
Team India cricket captain Virat Kohli gets Hyundai i20 Turbo. Read in Kannada.
Story first published: Monday, March 22, 2021, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X