ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್‌ ತನ್ನ ಹೊಸ ಹಯಾಬುಸಾ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಸುಜುಕಿ ಹಯಾಬುಸಾ ಜಾಗತಿಕವಾಗಿ ಜನಪ್ರಿಯ ಸೂಪರ್ ಬೈಕ್‌ಗಳಲ್ಲಿ ಒಂದಾಗಿದೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಭಾರತದಲ್ಲಿ ಸುಜುಕಿ ಹಯಾಬುಸಾ ಸೂಪರ್ ಬೈಕ್ ಅಪಾರ ಅಭಿಮಾನಿಗಳನ್ನು ಹೊಂದಿದೆ. ಧೂಮ್ ಚಿತ್ರದಲ್ಲಿ ಹಯಾಬುಸಾ ಬೈಕಿನ ಖದರ್ ನೋಡಿ ಇದರ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿತ್ತು. ಹಲವರಿಗೆ ಹಯಾಬುಸಾ ಕನಸಿನ ಬೈಕ್ ಆಗಿದೆ. ಈ ಹಯಾಬೂಸಾ ಸೂಪರ್ ಬೈಕನ್ನು ಮಹಿಳೆಯೊಬ್ಬರು ತಮ್ಮ ಪತಿಗೆ ಬರ್ತ್‌ಡೇ ಗಿಫ್ಟ್ ಆಗಿ ನೀಡಿದ್ದಾರೆ. ಯೂಟ್ಯೂಬ್‌ನಲ್ಲಿ ಡಿನೋಸ್ ವಾಲ್ಟ್‌ನಲ್ಲಿ ಹಾಕಿರುವ ವಿಡಿಯೋದಲ್ಲಿ, ಇವರು ಮೊದಲಿಗೆ ಹೊಸ ಹಯಾಬುಸಾ ವಿತರಣೆಯನ್ನು ಸ್ವೀಕರಿಸಲು ಸುಜುಕಿ ಶೋ ರೂಂಗೆ ಹೋಗುತ್ತಿರುವುದನ್ನು ಮಾಡುತ್ತಿರುವುದನ್ನು ತೋರಿಸಿದ್ದಾರೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ನಂತರ ಮೆಕ್ಯಾನಿಕ್ ಹೊಚ್ಚಹೊಸ ಸುಜುಕಿ ಹಯಾಬುಸಾವನ್ನು ಹೇಗೆ ಒಟ್ಟಿಗೆ ಸೇರಿಸುತ್ತಾರೆ. ಈ ಬೈಕ್ ಗಿಫ್ಟ್ ಪಡೆದ ಗಗನ್ ಶೋ ರೂಂಗೆ ತಲುಪುವುದನ್ನು ವೀಡಿಯೊ ತೋರಿಸಲಾಗಿದೆ. ತನ್ನ ಬರ್ತ್‌ಡೇಗೆ ಹೆಂಡತಿ ಉಡುಗೊರೆಯಾಗಿ ನೀಡಿದ್ದಾಳೆ ಹೇಳಿದಾಗ ಆಶ್ಚರ್ಯಚಕಿತರಾಗುತ್ತಾರೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಸುಂದರವಾದ ಸಿಲ್ವರ್ ಮ್ಯಾಟ್ ಫಿನಿಶಿಂಗ್ ಹೊಂದಿರುವ ಹಯಾಬುಸಾವನ್ನು ವಿಡಿಯೋದಲ್ಲಿ ಕಾಣಬಹುದು. ಹೆಂಡತಿ ಶೋರೂಂ ಸಿಬ್ಬಂದಿಯಿಂದ ಬೈಕ್ ಕೀ ಪಡೆದು ನಂತರ ತಮ್ಮ ಪತಿ ಗಗನ್ ಅವರಿಗೆ ಹಸ್ತಾಂತರಿಸಿದರು. ಗಗನ್ ಅವರು 50ನೇ ಬರ್ತ್‌ಡೇಗೆ ತಮ್ಮ ಮೆಚ್ಚಿನ ಹಯಾಬುಸಾ ಸೂಪರ್ ಬೈಕಿನ ವಿತರಣೆಯನ್ನು ಪಡೆದರು.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಇನ್ನು ಕರೋನಾ ಸಂಕಷ್ಟದ ನಡುವೆಯೂ ಭಾರತದಲ್ಲಿ ಐಷಾರಾಮಿ 2021ರ ಸುಜುಕಿ ಹಯಾಬುಸಾ ಬೈಕಿಗೆ ಸಖತ್ ಡಿಮ್ಯಾಂಡ್ ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸೂಪರ್ ಬೈಕ್ ವಿಭಾಗದಲ್ಲಿ ಸುಜುಕಿ ಹಯಾಬುಸಾ ಮಾದರಿಯು ಹೊಸ ಸಂಚಲನವನ್ನು ಸೃಷ್ಟಿಸಿದೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಸುಜುಕಿ ಕಂಪನಿಯು ಹೊಸ ಹಯಾಬುಸಾದ ಬೈಕಿನ ಮೊದಲ ಬ್ಯಾಚ್ ಆಗಿ 101 ಯುನಿಟ್ ಗಳನ್ನು ಬಿಡುಗಡೆಗೊಳಿಸಿತ್ತು. ಈ ಎಲ್ಲಾ ಯುನಿಟ್‌ಗಳು ಒಂದೆರಡು ಗಂಟೆಗಳಲ್ಲಿ ಮಾರಾಟವಾದವು. ನಂತರ ಸುಜುಕಿ ಹಯಾಬುಸಾ ಬೈಕಿನ ಎರಡನೇ ಬ್ಯಾಚ್ ಅನ್ನು ಜುಲೈ 1 ರಿಂದ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು.

ಎರಡನೇ ಬ್ಯಾಚ್​​ನಲ್ಲಿ ಹಯಾಬುಸಾ ಬೈಕಿನ 100 ಯುನಿಟ್ ಗಳಿತ್ತು. ಈ ಎಲ್ಲಾ ಯುನಿಟ್ ಗಳು ಕೇವಲ ಒಂದು ಗಂಟೆಯಲ್ಲಿ ಮಾರಾಟ ಮಾಡಲಾಯಿತು. ನಿಸ್ಸಂಶಯವಾಗಿ ಹೇಳಬಹುದು, ಭಾರತದ ಅತ್ಯಂತ ಜನಪ್ರಿಯ ಸೂಪರ್‌ಬೈಕ್‌ಗಳಲ್ಲಿ ಒಂದಾಗಿದೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

2021ರ ಸುಜುಕಿ ಹಯಾಬುಸಾ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ. ಕಂಪನಿಯ ಪ್ರಕಾರ, ಈ ಹೊಸ ಹಯಾಬುಸಾ ಸೂಪರ್‌ಬೈಕ್ ಕೇವಲ 3.2 ಸೆಕೆಂಡುಗಳಲ್ಲಿ 0 ದಿಂದ 100 ಕಿ,ವೀ ವೇಗವನ್ನು ಪಡೆದುಕೊಳ್ಳುತ್ತದೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಇನ್ನು ಈ ಸುಜುಕಿ ಹಯಾಬುಸಾ ಸೂಪರ್ ಬೈಕ್ 299 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಬೈಕ್ 265 ಕೆಜಿ ತೂಕವನ್ನು ಹೊಂದಿದ್ದು, ಇದರಲ್ಲಿ 20-ಲೀಟರ್ ಸಾಮರ್ಥ್ಯವನ್ನು ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಪತಿಯ 50ನೇ ವರ್ಷದ ಬರ್ತ್‌ಡೇಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಗಿಫ್ಟ್ ನೀಡಿದ ಪತ್ನಿ

ಹಯಾಬುಸಾ ಸೂಪರ್ ಬೈಕಿನಲ್ಲಿ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ಹೊಂದಿದ್ದು, ಇನ್ನು ಹೊಸ ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕೂಡ ಹೊಂದಿದೆ.

Image Courtesy: Dino's Vault

Most Read Articles

Kannada
English summary
Wife Gifts Husband An 2021 Suzuki Hayabusa Superbike On His Birthday. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X