ಮೈಯೆಲ್ಲ ಹೊಸ ಬಣ್ಣ ಹಚ್ಚಲಿರುವ ಬಜಾಜ್ ವಿ15

By Nagaraja

ಐಕಾನಿಕ್ ಯುದ್ಧ ವಿಮಾನ ವಾಹನ ನೌಕೆ ಐಎನ್ ಎಸ್ ವಿಕ್ರಾಂತ್ ಹಡಗಿನ ಲೋಹದಿಂದ ತಯಾರಿಸಿರುವ ಬಜಾಜ್ ವಿ15 ಈಗಾಗಲೇ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಬಿಡುಗಡೆಯಾದ ಮೊದಲ ತಿಂಗಳಲ್ಲೇ ಟಾಪ್ 10 ಗರಿಷ್ಠ ಮಾರಾಟವಾಗುವ ಬೈಕ್ ಗಳ ಸಾಲಿಗೆ ಸೇರಿಕೊಂಡಿರುವ ಬಜಾಜ್ ವಿ15 ಮತ್ತಷ್ಟು ಮಾರಾಟವನ್ನು ಸಂಸ್ಥೆಯು ಗುರಿಯಾಗಿರಿಸಿಕೊಂಡಿದೆ.

ಈ ನಿಟ್ಟಿನಲ್ಲಿ ಬಜಾಜ್ ವಿ15 ಬೈಕ್‌ಗೆ ಹೊಸತಾದ ಬಣ್ಣ ಹಚ್ಚಲು ಸಂಸ್ಥೆ ನಿರ್ಧರಿಸಿದೆ. ನೂತನ ಬಜಾಜ್ ವಿ15 ಅತಿ ಶೀಘ್ರದಲ್ಲೇ ವೈನ್ ರೆಡ್ ಬಣ್ಣದಲ್ಲೂ ಲಭ್ಯವಾಗಲಿದ್ದು, ಒಟ್ಟು ಬಣ್ಣಗಳ ಸಂಖ್ಯೆಯು ಮೂರಕ್ಕೆ ಏರಿಕೆಯಾಗಲಿದೆ.

ಮೈಯೆಲ್ಲ ಹೊಸ ಬಣ್ಣ ಹಚ್ಚಲಿರುವ ಬಜಾಜ್ ವಿ15

ಎಬೋನಿ ಬ್ಲ್ಯಾಕ್ ಮತ್ತು ಪಿಯರ್ಲ್ ವೈಟ್ ಗಳೆಂಬ ಬಣ್ಣಗಳು ಈಗಾಗಲೇ ಮಾರುಕಟ್ಟೆಯಲ್ಲಿದೆ. ಇದಕ್ಕೀಗ ಹೊಸತಾದ ವೈನ್ ರೆಡ್ ಸೇರ್ಪಡೆಯಾಗಲಿದೆ.

ಮೈಯೆಲ್ಲ ಹೊಸ ಬಣ್ಣ ಹಚ್ಚಲಿರುವ ಬಜಾಜ್ ವಿ15

ಬಜಾಜ್ ವಿ15 ದೇಹದ್ಯಾಂತ ಕೆಂಪು ಜೊತೆಗೆ ಕಪ್ಪು ವರ್ಣದ ಮಿಶ್ರಣವನ್ನು ಕಾಣಬಹುದಾಗಿದೆ. ಇದಲ್ಲದೆ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

ಮೈಯೆಲ್ಲ ಹೊಸ ಬಣ್ಣ ಹಚ್ಚಲಿರುವ ಬಜಾಜ್ ವಿ15

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಿರ್ಮಾಣಕ ಪಾತ್ರ ವಹಿಸಿರುವ ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆ 'ವಿಕ್ರಾಂತ್' ಯುದ್ಧ ವಿಮಾನದ ಉಕ್ಕಿನ ಲೋಹದಿಂದ ಅತ್ಯಾಧುನಿಕ ವಿ15 ನಿರ್ಮಿಸಲಾಗಿದೆ.

ಎಂಜಿನ್

ಎಂಜಿನ್

ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಎಸ್‌ಒಎಚ್‌ಸಿ 3 ವಾಲ್ವ್, ಏರ್ ಕೂಲ್ಡ್, ಡಿಟಿಎಸ್-ಐ

ಸಾಮರ್ಥ್ಯ (ಸಿಸಿ): 149.5

ಗರಿಷ್ಠ ಶಕ್ತಿ: 12 @ 7500 (PS @ RPM)

ಗರಿಷ್ಠ ತಿರುಗುಬಲ: 13 @ 5500 (Nm @RPM)

ಸಸ್ಪೆನ್ಷನ್

ಸಸ್ಪೆನ್ಷನ್

ಫ್ರಂಟ್: ಟೆಲಿಸ್ಕಾಪಿಕ್

ರಿಯರ್: ಟ್ವಿನ್ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ವಿಧ

ಬ್ರೇಕ್

ಬ್ರೇಕ್

ಮುಂಭಾಗ: 240 ಡಿಸ್ಕ್

ಹಿಂಭಾಗ: 130 ಡ್ರಮ್

ಇಂಧನ ಟ್ಯಾಂಕ್

ಇಂಧನ ಟ್ಯಾಂಕ್

ಲೀಟರ್: 13

ರಿಸರ್ವ್: 1.7

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 2044

ಅಗಲ: 780

ಎತ್ತರ: 1070

ಗ್ರೌಂಡ್ ಕ್ಲಿಯರನ್ಸ್: 165

ಚಕ್ರಾಂತರ: 1315

ಭಾರ: 135.5 ಕೆ.ಜಿ

ಸೀಟು ಎತ್ತರ: 780

ವಿಶಿಷ್ಟತೆಗಳು

ವಿಶಿಷ್ಟತೆಗಳು

  • ಎತ್ತರದ ಸಾನಿಧ್ಯ,
  • 13 ಲೀಟರ್ ಇಂಧನ ಟ್ಯಾಂಕ್,
  • ಸ್ಪೋರ್ಟಿ ಗ್ರಾಫಿಕ್ಸ್ ,
  • ಕೆಫೆ ರೇಸರ್ ಸ್ಪೂರ್ತಿ,
  • 60ವಾಟ್ ಹೆಡ್ ಲ್ಯಾಂಪ್ ಹಾಗೂ
  • ಎಲ್‌ಇಡಿ ಹೆಡ್ ಲ್ಯಾಂಪ್,
  • ಟ್ವಿನ್ ಸ್ಪೋಕ್ ಅಲಾಯ್ ವೀಲ್,
  • ಎಲ್‌ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್

ಚಿತ್ರಕೃಪೆ: Bharathautos

Most Read Articles

Kannada
English summary
Bajaj V15 Motorcycle Spotted In New Wine Red Colour Option
Story first published: Thursday, June 2, 2016, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X