ಎಲೆಕ್ಟ್ರಿಕ್ ಬೈಕ್ ಆವೃತ್ತಿಗಾಗಿ ಆರ್15 ಆಯ್ಕೆ ಮಾಡುತ್ತಾ ಯಮಹಾ?

ಯಮಹಾ ಸಂಸ್ಥೆಯು ಸದ್ಯದಲ್ಲೇ ಹೊಸ ಮಾದರಿಯೊಂದನ್ನು ನಿರ್ಮಾಣ ಮಾಡಲಿದ್ದು, ತನ್ನ ಜನಪ್ರಿಯ ಆರ್15 ಮಾದರಿಯನ್ನೇ ಎಲೆಕ್ಟ್ರಿಕ್ ಆವೃತ್ತಿಗಾಗಿ ಆಯ್ಕೆ ಮಾಡಬಹುದಾದ ಸಾಧ್ಯತೆಗಳಿವೆ.

By Praveen

ಭಾರತೀಯ ಮಾರುಕಟ್ಟೆಗಾಗಿ ಎಲೆಕ್ಟ್ರಿಕ್ ಬೈಕ್ ಪರಿಚಯಿಸಲು ಎದುರು ನೋಡುತ್ತಿರುವ ಯಮಹಾ ಸಂಸ್ಥೆಯು ಸದ್ಯದಲ್ಲೇ ಹೊಸ ಮಾದರಿಯೊಂದನ್ನು ನಿರ್ಮಾಣ ಮಾಡಲಿದ್ದು, ತನ್ನ ಜನಪ್ರಿಯ ಆರ್15 ಮಾದರಿಯನ್ನೇ ಎಲೆಕ್ಟ್ರಿಕ್ ಆವೃತ್ತಿಗಾಗಿ ಆಯ್ಕೆ ಮಾಡಬಹುದಾದ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್ ಬೈಕ್ ಆವೃತ್ತಿಗಾಗಿ ಆರ್15 ಆಯ್ಕೆ ಮಾಡುತ್ತಾ ಯಮಹಾ?

ಸದ್ಯ ಭಾರತದಲ್ಲಿ ದ್ವಿಚಕ್ರ ವಾಹನಗಳ ಅಭಿವೃದ್ಧಿ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಯಮಹಾ ಸಂಸ್ಥೆಯು ಎಲೆಕ್ಟ್ರಿಕ್ ಬೈಕ್‌ಗಳನ್ನು ಪರಿಚಯಿಸಲು ಉತ್ಸುಕವಾಗಿದ್ದು, ಹೊಸ ಯೋಜನೆಗಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ.

Recommended Video

Yamaha Considering Electric Two-Wheelers For India - DriveSpark
ಎಲೆಕ್ಟ್ರಿಕ್ ಬೈಕ್ ಆವೃತ್ತಿಗಾಗಿ ಆರ್15 ಆಯ್ಕೆ ಮಾಡುತ್ತಾ ಯಮಹಾ?

ಹೀಗಾಗಿ ಭವಿಷ್ಯದ ವಾಹನಗಳ ಮೇಲೆ ಭಾರೀ ನೀರಿಕ್ಷೆ ಹೊಂದಿರುವ ಯಮಹಾ ಸಂಸ್ಥೆಯು ಮಧ್ಯಮ ಹಾಗೂ ಉನ್ನತ ವರ್ಗದ ಗ್ರಾಹಕರನ್ನು ಒಟ್ಟಿಗೆ ಸೆಳೆಯಬಲ್ಲ ವಿನೂತನ ಬೈಕ್ ಉತ್ಪನ್ನಗಳನ್ನು ನಿರ್ಮಾಣ ಮಾಡುವ ತವಕದಲ್ಲಿದೆ.

ಎಲೆಕ್ಟ್ರಿಕ್ ಬೈಕ್ ಆವೃತ್ತಿಗಾಗಿ ಆರ್15 ಆಯ್ಕೆ ಮಾಡುತ್ತಾ ಯಮಹಾ?

ಇನ್ನು ವರದಿಗಳ ಪ್ರಕಾರ ಮಾರುಕಟ್ಟೆಯಲ್ಲಿ ಲಭ್ಯವಿರುವ ಆರ್ 15 ಆವೃತ್ತಿಯನ್ನೇ ಎಲೆಕ್ಟ್ರಿಕ್ ಮಾದರಿಗಳಿಗಾಗಿ ಆಯ್ಕೆ ಮಾಡಬಹುದಾದ ಸಾಧ್ಯತೆಗಳಿದ್ದರು ಈ ಬಗ್ಗೆ ಯಮಹಾ ಸಂಸ್ಥೆಯು ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಎಲೆಕ್ಟ್ರಿಕ್ ಬೈಕ್ ಆವೃತ್ತಿಗಾಗಿ ಆರ್15 ಆಯ್ಕೆ ಮಾಡುತ್ತಾ ಯಮಹಾ?

ಇದಕ್ಕೆ ಕಾರಣ ಈ ಹಿಂದಿನ ಟೊಕಿಯೊ ಆಟೋ ಮೇಳದಲ್ಲಿ ಪಿಇಎಸ್1 ಸಂಖ್ಯೆಯ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಪ್ರದರ್ಶನ ಮಾಡಿದ್ದ ಯಮಹಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಬೈಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲು ಅಧ್ಯಯನ ನಡೆಸಿದೆ.

ಎಲೆಕ್ಟ್ರಿಕ್ ಬೈಕ್ ಆವೃತ್ತಿಗಾಗಿ ಆರ್15 ಆಯ್ಕೆ ಮಾಡುತ್ತಾ ಯಮಹಾ?

ಈ ಬಗ್ಗೆ ಮಾತನಾಡಿರುವ ಯಮಹಾ ಇಂಡಿಯಾ ವಿಭಾಗದ ರಿಸರ್ಚ್ ಆ್ಯಂಡ್ ಡೆವಲ್‌ಮೆಂಟ್ ವಿಭಾಗದ ಎಂಡಿ ಯಶೌ ಈಷಿಹಾರ್ "ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಆವೃತ್ತಿಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಇದೇ ಉದ್ದೇಶದಿಂದ ನಾವು ಮುಂಬರುವ ದಿನಗಳಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದ್ದೇವೆ" ಎಂದಿದ್ದಾರೆ.

ಎಲೆಕ್ಟ್ರಿಕ್ ಬೈಕ್ ಆವೃತ್ತಿಗಾಗಿ ಆರ್15 ಆಯ್ಕೆ ಮಾಡುತ್ತಾ ಯಮಹಾ?

ಒಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಎಲ್ಲ ಆಟೋ ಉತ್ಪಾದಕರು ವಿಶೇಷ ಗಮನಹರಿಸುತ್ತಿದ್ದು, ಇದೀಗ ದ್ವಿಚಕ್ರ ವಾಹನಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಯಮಹಾ ಸಂಸ್ಥೆ ಕೂಡಾ ಎಲೆಕ್ಟ್ರಿಕ್ ಬೈಕ್ ನಿರ್ಮಾಣ ಮಾಡುವ ಯೋಜನೆ ಬಗ್ಗೆ ಉತ್ಸುಕವಾಗಿದೆ.

Most Read Articles

Kannada
English summary
Read in Kannada about Yamaha Considering Electric Two Wheelers For India.
Story first published: Monday, December 18, 2017, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X