ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಜೈಪುರ ಮೂಲದ ಸ್ಟಾರ್ಟ್ ಅಪ್ ಕಂಪನಿ, ಬ್ಯಾಟ್‍‍ರಿ ಎಲೆಕ್ಟ್ರಿಕ್ ಮೊಬಿಲಿಟಿ, ದೇಶಿಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಕೂಟರ್ ಬೆಲೆಯನ್ನು ಎಕ್ಸ್ ಶೋ ರೂಂ ದರದಂತೆ ರೂ.63,555 ಗಳೆಂದು ನಿಗದಿಪಡಿಸಲಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಒಂದು ಬಾರಿ ಚಾರ್ಜ್ ಮಾಡಿದ ನಂತರ ಈ ಸ್ಕೂಟರ್ ಅನ್ನು 90 ಕಿ.ಮೀ ದೂರದವರೆಗೆ ಚಲಾಯಿಸಬಹುದು. ಈ ಸ್ಕೂಟರ್ ಸದ್ಯಕ್ಕೆ ನಾಗ್ಪುರ್, ಹೈದರಾಬಾದ್, ಅನಂತ್‍‍ಪುರ್ ಹಾಗೂ ಕರ್ನೂಲ್‍‍ಗಳಲ್ಲಿ ಲಭ್ಯವಿದೆ. ಡೀಲರ್‍‍ಶಿಪ್ ಹಾಗೂ ಸರ್ವಿಸ್ ಸೆಂಟರ್‍‍ಗಳನ್ನು ಜೂನ್ ಕೊನೆಯ ವೇಳೆಗೆ ಪುಣೆ, ವಿಶಾಖಪಟ್ಟಣ ಹಾಗೂ ವಾರಂಗಲ್‍‍ಗಳಲ್ಲಿ ತೆರೆಯಲಾಗುವುದು. ಕಂಪನಿಯು 2019ರ ಕೊನೆಗೆ 50 ಕ್ಕೂ ಹೆಚ್ಚು ನಗರಗಳಲ್ಲಿ ಡೀಲರ್‍‍ಶಿಪ್‍‍ಗಳನ್ನು ತೆರೆಯುವ ಗುರಿಯನ್ನಿಟ್ಟುಕೊಂಡಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಐದು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಸ್ಕೂಟರಿನ ಮುಂಭಾಗದಲ್ಲಿ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಹಿಂಭಾಗದಲ್ಲಿ ಎಲ್‍‍ಇ‍‍ಡಿ ಟೇಲ್ ಲ್ಯಾಂಪ್ ಹಾಗೂ ಬ್ಲಿಂಕರ್‍‍ಗಳಿವೆ. ರೇರ್ ವೀವ್ ಮಿರರ್‍‍‍ಗಳು ಈ ಸ್ಕೂಟರಿಗೆ ರೆಟ್ರೊ ಶೈಲಿಯನ್ನು ನೀಡುತ್ತವೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟ್‍‍ರಿ ಸ್ಕೂಟರ್‍‍ನ ಹ್ಯಾಂಡಲ್‍‍ಬಾರ್‍‍ಗಳ ಮೇಲೆ ಬ್ಲಾಕ್ ಕಲರಿನ ಫ್ಲೈ ಸ್ಕ್ರೀನ್‍‍ಗಳಿವೆ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್, ಕೀ ಲೆಸ್ ಇಗ್ನಿಷನ್, ಯಾಂಟಿ ಥೆಫ್ಟ್ ಅಲಾರಂ ಸಿಸ್ಟಂ ಹಾಗೂ ಯು‍ಎಸ್‍‍ಬಿ ಚಾರ್ಜರ್‍‍ಗಳಿವೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಎಲ್‍‍ಸಿ‍‍ಡಿ ಇನ್ಸ್ ಟ್ರೂಮೆಂಟ್ ಕಂಸೋಲ್ ಬ್ಯಾಟರಿ ಬಳಕೆಯ ಬಗ್ಗೆ, ಸ್ಪೀಡಿನ ಬಗ್ಗೆ, ಟೆಂಪರೆಚರ್ ಬಗ್ಗೆ, ಒಡೋ ಮೀಟರ್ ಬಗ್ಗೆ ಹಾಗೂ ಸ್ಕೂಟರ್‍‍ನಲ್ಲಿರುವ ಫಾಲ್ಟ್ ಗಳ ಬಗೆಗಿನ ಮಾಹಿತಿಯನ್ನು ತೋರಿಸುತ್ತದೆ. ಸ್ಕೂಟರಿನ ಮುಂಭಾಗದಲ್ಲಿ ಬಾಟಲ್‍‍ಗಾಗಿ ಸ್ಥಳ ನೀಡಲಾಗಿದೆ. ಹೊಸ ವಿನ್ಯಾಸದ ಗ್ರಾಬ್ ರೇಲ್ ಹೊಂದಿದ್ದು, ಸೀಟಿನ ಕೆಳಗೆ ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ. ಈ ಸ್ಕೂಟರಿನಲ್ಲಿರುವ 10 ಇಂಚಿನ ಅಲಾಯ್ ವ್ಹೀಲ್‍‍ಗಳಿಗೆ 90/100-10 ಟ್ಯೂಬ್‍‍ಲೆಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್ 150 ಎಂಎಂ ನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‍‍ನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 25 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ. ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ 48 ವೊಲ್ಟಿನ 30 ಎ‍‍ಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗಿದ್ದು, ಒಂದು ಬಾರಿಯ ಚಾರ್ಜ್‍‍ನಿಂದ 90 ಕಿ.ಮೀ ದೂರದವರೆಗೆ ಚಲಿಸುತ್ತದೆ. 64 ಕೆ.ಜಿ ತೂಕವನ್ನು ಹೊಂದಿರುವ ಈ ಸ್ಕೂಟರಿನಲ್ಲಿ, 12 ಕೆ.ಜಿಯ ಬ್ಯಾಟರಿಯನ್ನು ಅಳವಡಿಸಲಾಗಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಆಟೋಮ್ಯಾಟಿಕ್ ಆಗಿ ಪವರ್ ಕಟ್ ಆಗುವಂತಹ ಮೆಕಾನಿಕಲ್ ಅಂಶವನ್ನು ಈ ಸ್ಕೂಟರಿನಲ್ಲಿ ಅಳವಡಿಸಲಾಗಿದೆ. ಬ್ಯಾಟರಿಯನ್ನು ಸುಮಾರು 2,000 ಬಾರಿ ಚಾರ್ಜ್ ಮಾಡಬಹುದಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟ್‍‍ರಿ ಎಲೆಕ್ಟ್ರಿಕ್ ಮೊಬಿಲಿಟಿಯ ಸ್ಥಾಪಕರಾದ ನಿಶ್ಚಲ್ ಚೌಧರಿರವರು ಮಾತನಾಡಿ, ವಿಶ್ವದ ಇ ಮೊಬಿಲಿಟಿ ಮಾರುಕಟ್ಟೆಯು ಎಲೆಕ್ಟ್ರಿಕ್ ವಾಹನಗಳ ನಿಯಮಗಳಲ್ಲಿನ ಬದಲಾವಣೆಯಿಂದ ಹಾಗೂ ಹೊಸ ವಾಹನಗಳ ಅನ್ವೇಷಣೆಗಳಿಂದಾಗಿ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸುತ್ತಿದೆ. ನಾವು ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಬೆಳವಣೆಗೆಯನ್ನು ನಿರೀಕ್ಷಿಸುತ್ತಿದ್ದೇವೆ.

MOST READ: ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ನಮ್ಮ ಗುರಿಯು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರಾಟ ಮಾಡುವುದು ಮಾತ್ರವಲ್ಲದೇ, ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಿಸಿ, ಗ್ರಾಹಕರಿಗೆ ಪೂರ್ಣವಾದ ಇ ಮೊಬಿಲಿಟಿಯನ್ನು ಅನುಭವವನ್ನು ನೀಡುವುದಾಗಿದೆ. ನಾವು ವಿಶ್ವ ದರ್ಜೆಯ ಡೀಲರ್‍‍ಶಿಪ್ ಹಾಗೂ ಮಾರಾಟದ ನಂತರದ ಸರ್ವಿಸ್ ನೀಡಲು ಬದ್ದರಾಗಿದ್ದೇವೆ ಎಂದು ತಿಳಿಸಿದರು.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಕಂಪನಿಯು ಪ್ರತ್ಯೇಕವಾದ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಎಲ್ಲಿಯೂ ನಿರ್ಮಿಸಿಲ್ಲ. ಬ್ಯಾಟರಿ ಪ್ಯಾಕ್ ಅನ್ನು ಹೊರತೆಗೆದು, ವಾಲ್ ಚಾರ್ಜರ್‍‍ನಿಂದ ಚಾರ್ಜ್ ಮಾಡಬಹುದು. ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ. ಎರಡೂ ಕಡೆ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಈ ಫೀಚರ್‍‍ಗಳನ್ನು ಹೊಂದಿರುವ ಬ್ಯಾಟ್‍‍‍ರಿ ಸ್ಕೂಟರ್‍‍ಗೆ ಸರ್ಕಾರದಿಂದ ಯಾವುದೇ ಸಬ್ಸಿಡಿ ದೊರೆಯುತ್ತಿಲ್ಲ.

MOST READ: ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟ್‍‍ರಿ ಎಲೆಕ್ಟ್ರಿಕ್ ಸ್ಕೂಟರ್ ಈ ಸೆಗ್‍‍ಮೆಂಟಿನಲ್ಲಿರುವ ಫ್ಲಾಶ್ ಎಲ್‍ಐ, ಆಪ್ಟಿಮಾ ಎಲ್‍ಐ, ಆಂಪೀರ್ ವಾಹನದ ರಿಯೊ ಹಾಗೂ ವಿ48 ವಾಹನಗಳಿಗೆ ಪೈಪೋಟಿ ನೀಡಲಿದೆ. ಈ ಸ್ಕೂಟರ್ ಅನ್ನು ಹೆಚ್ಚಾಗಿ ಝೊಮಾಟೊ, ಸ್ವಿಗ್ಗಿ ಹಾಗೂ ಉಬರ್ ಈಟ್ಸ್ ಸೇವೆಗಳನ್ನು ನೀಡಲು ಬಳಸಿ ಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
BattRE electric scooter launched in India - Read in kannada
Story first published: Saturday, June 8, 2019, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X