ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ಇಂದಿಗೂ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿವೆ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳು. ರಾಯಲ್ ಎನ್‍ಫೀಲ್ಡ್ ಯುವಕರ ಕನಸಿನ ಬೈಕ್ ಆಗಿದೆ. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ರಾಯಲ್ ಎನ್‍ಫೀಲ್ಡ್ ಕಂಪನಿಯು ಹಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಿದ್ದಾರೆ. ರಾಯಲ್ ಎನ್‍ಫೀಲ್ಡ್ 350 ಸಿಸಿ ವಿಭಾಗದಲ್ಲಿ ಹಲವು ಮಾದರಿಗಳನ್ನು ಪರಿಚಯಿಸುತ್ತಿದೆ. ಈಗಾಗಲೇ ಈ ವಿಭಾಗದಲ್ಲಿ ಕ್ಲಾಸಿಕ್, ಬುಲೆಟ್ ಮತ್ತು ಮಹಿಳೆಯರಿಗಾಗಿ ವಿಶೇಷ ಬೈಕುಗಳನ್ನು ಪರಿಚಯಿಸಿದೆ. ಹೊಸದಾಗಿ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫಿಲ್ಡ್ 350 ಸಿಸಿ ವಿಭಾಗದಲ್ಲಿ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ಇದರೊಂದಿಗೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಿರುವುದರಿಂದ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಸೆಗ್‍‍ಮೆಂಟ್‍ನ ಬೈಕ್‍ಗಳನ್ನು ಸ್ಥಗಿತಗೊಳಿಸಲಾಗಿದೆ. ರಾಯಲ್ ಎನ್‍‍‍ಫೀಲ್ಡ್ ಕಂಪನಿಯು ತನ್ನ 500 ಸಿಸಿ ಯು‍ಸಿಇ (ಯುನಿಟ್ ಕನ್‌ಸ್ಟ್ರಕ್ಷನ್ ಎಂಜಿನ್) ಸೆಗ್‍‍ಮೆಂಟ್‍‍ನ ಬೈ‍ಕುಗಳ ಉತ್ಪಾದನೆಯನ್ನು ನಿಲ್ಲಿಸಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ಆದರೆ ಈ ಸಂದರ್ಭದಲ್ಲಿ 500ಸಿಸಿ ಸೆಗ್‍‍ಮೆಂಟ್‍ ಬೈಕು‍ಗಳ ನೆನಪಿಗಾಗಿ ತಯಾರಕ ಕಂಪನಿಯು ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಲಿಮೆಟೆಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ರಾಯಲ್ ಎನ್‍ಫೀಲ್ಡ್ ಕಂಪನಿಯು 350 ಸಿಸಿ ಸೆಗ್‍‍ಮೆಂಟ್‍ ಗೆ ಹೆಚ್ಚು ಪ್ರಾಮುಖ್ಯತೆಯನ್ನು ನಿಡುತ್ತಿದ್ದಾರೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ರಾಯಲ್ ಎನ್‍‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಬಿಡುಗಡೆ ಮಾಡುವುದರ ಜೊತೆಗೆ ಹೊಸ ಬೈಕನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ವರದಿಗಳನ್ನು ರಶ್ಲೇನ್ ಪ್ರಕಟಿಸಿದೆ. ಈ ಮಾದರಿಯಲ್ಲಿ ‘ಹಂಟರ್' ಎಂಬ ಟ್ರೇಡ್‌ಮಾರ್ಕ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ಈ ಹೊಸ ಬೈಕಿನಲ್ಲಿ ದೊಡ್ಡ ಹೆಡ್‌ಲ್ಯಾಂಪ್ ಮತ್ತು ಕ್ರ್ಯಾಶ್ ಗಾರ್ಡ್‌ಗಳಿಂದ ಒಳಗೊಂಡ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನ ವ್ಹೀಲ್ ಗಳು ಹೊಸ 5-ಸ್ಪೀಕ್ ವಿನ್ಯಾಸವನ್ನು ಹೊಂದಿದೆ. ಬೈಕಿನ ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲ್ಯಾಂಪ್ ಅನ್ನು ಹ್ಯಾಲೊಜೆನ್ ಟರ್ನ್ ಸಿಗ್ನಲ್ಗಳಿಂದ ಸುತ್ತುವರೆದಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ಇದರೊಂದಿಗೆ ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಹೊಸ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಮುಂದಿನ ತಿಂಗಳು ತಿಂಗಳು ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಅಲ್ಲದೇ ಮುಂದಿನ ತಿಂಗಳು ಶೋರೂಂಗಳಿಗೆ ಈ ಹೊಸ ಬೈಕ್ ತಲುಪಲಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಲಿದೆ. ಹೊಸ ಫೀಚರ್ಸ್‍ಗಳನ್ನು ಹೊರತುಪಡಿಸಿ ಈ ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಕೂಡ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಬೈಕಿನಲ್ಲಿ 346 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ರಿ ಕ್ಯಾಟಲಿಕ್ ಕರ್ನವಾಟರ್ ಅನ್ನು ಎಕ್ಸಾಸ್ಟ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ ಬೈಕ್

ಹೊಸ ಬೈಕಿನಲ್ಲಿ ಅಳವಡಿಸಲಾಗುವ ಎಂಜಿನ್ ಹೊಸ ಟೆಕ್ನಾಲಜಿಯನ್ನು ಹೊಂದಿರಲಿದ್ದು, ವೈಬ್ರೆಷನ್ ಸಮಸ್ಯೆಯನ್ನು ಹೋಗಲಾಡಿಸಲಿದೆ. ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕ್ ಥಂಡರ್‌ಬರ್ಡ್ ಎಕ್ಸ್ 350 ಮಾದರಿಯ ರೆಟ್ರೂ-ಅರ್ಬನ್ ಕ್ರೂಸರ್ ವಿನ್ಯಾಸವನ್ನು ಹೊಂದಿದೆ.

Most Read Articles

Kannada
English summary
Royal Enfield Hunter spied again. Read in Kannada.
Story first published: Friday, May 22, 2020, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X