ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಹೆಚ್ಚಿಸುವತ್ತ ಹೊಸ ಯೋಜನೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯ ತಿದ್ದುಪಡಿಯ ಮೂಲಕ ಇವಿ ದ್ವಿಚಕ್ರ ವಾಹನಗಳಿಗೆ ಭರ್ಜರಿ ಸಬ್ಸಡಿ ನೀಡುತ್ತಿದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಕೇಂದ್ರ ಸರ್ಕಾರದ ಫೇಮ್ 2 ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ರೂ. 10 ಸಾವಿರದಿಂದ ರೂ.30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿದ್ದು, ಹೊಸ ಸಬ್ಸಡಿ ತಿದ್ದುಪಡಿ ಘೋಷಣೆ ಮಾಡುತ್ತಿದ್ದಂತೆ ಪ್ರಮುಖ ವಾಹನ ಕಂಪನಿಗಳು ತಮ್ಮ ಇವಿ ಸ್ಕೂಟರ್‌ಗಳ ಬೆಲೆ ಕಡಿತ ಮಾಡಿದ್ದು, ರಿವೋಲ್ಟ್ ಕಂಪನಿಯು ತನ್ನ ಆರ್‌ವಿ400 ಬೆಲೆಯಲ್ಲಿ ಶೇ.20ರಷ್ಟು ಇಳಿಕೆ ಮಾಡಿದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಹೊಸ ಸಬ್ಸಡಿ ಅನುಮೋದನೆಗೆ ಮೊದಲು ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1,18,999 ಬೆಲೆ ಹೊಂದಿತ್ತು. ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಹೊಸ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 90,799 ಕ್ಕೆ ಇಳಿಕೆಯಾಗಿದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಪುಣೆ ಮೂಲದ ರಿವೋಲ್ಟ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಮ ಎನ್ನುವ ಎರಡು ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆಯೆಂತೆ ಸದ್ಯಕ್ಕೆ ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಬೆಲೆಯಲ್ಲಿ ರೂ. 28,200 ಇಳಿಕೆ ಮಾಡಿದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಕೇಂದ್ರ ಸರ್ಕಾರ ಹೊಸ ಸಬ್ಸಡಿ ಮಾನ್ಯತೆಯ ಮಾನದಂಡಗಳಿಗೆ ಅನುಗುಣವಾಗಿ ರಿವೋಲ್ಟ್ ಎರಡು ಬೈಕ್ ಮಾದರಿಗಳು ಅರ್ಹವಾಗಿದ್ದು, ಶೀಘ್ರದಲ್ಲೇ ಕಂಪನಿಯ ಆರ್‌ವಿ 300 ಮಾದರಿಯ ಬೆಲೆಯಲ್ಲೂ ಕಡಿತ ಮಾಡುವ ನೀರಿಕ್ಷೆಯಿದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಫೇಮ್ 2 ಸಬ್ಸಡಿ ತಿದ್ದುಪಡಿಯಲ್ಲಿ ಹೆಚ್ಚುವರಿ ಸಬ್ಸಡಿ ಪಡೆದುಕೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್‌ ಅಥವಾ ಬೈಕ್ ಕಡ್ಡಾಯವಾಗಿ ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ ಟಾಪ್ ಸ್ಪೀಡ್ ಜೊತೆಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬೇಕೆಂಬ ಮಾನದಂಡವನ್ನು ಜಾರಿಗೆ ತಂದಿದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ರಿವೋಲ್ಟ್ ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಹಾಗೆಯೇ ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡುತ್ತದೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ಹೀಗಾಗಿ ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಆರ್‌ವಿ400 ಮಾದರಿಯೆಂತೆ ಆರ್‌ವಿ300 ಮಾದರಿಯು ಸಹ ಹೊಸ ಸಬ್ಸಡಿ ಯೋಜನಗೆ ಅರ್ಹವಾಗುವ ಸಾಧ್ಯತೆಗಳಿದ್ದು, ಎರಡು ಇವಿ ಬೈಕ್‌ಗಳು ಉತ್ತಮ ಮೈಲೇಜ್‌ನೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿವೆ.

ರಿವೋಲ್ಟ್ ಇವಿ ಬೈಕ್ ಬೆಲೆಯಲ್ಲಿ ರೂ.28 ಸಾವಿರ ಇಳಿಕೆ

ರಿವೋಲ್ಟ್ ಆರ್‌ವಿ 300 ಎಲೆಕ್ಟ್ರಿಕ್ ಬೈಕ್ ಮಾದರಿಯು ರೂ.95 ಸಾವಿರ ಬೆಲೆ ಹೊಂದಿದ್ದು, ಹೊಸ ಸಬ್ಸಡಿ ಯೋಜನೆ ಅಡಿಯಲ್ಲಿ ಆಯ್ಕೆಗೊಂಡಲ್ಲಿ ಈ ಬೈಕಿನ ಬೆಲೆಯು ಸಹ ಕನಿಷ್ಠ ರೂ.10 ಸಾವಿರ ಇಳಿಕೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Revolt Intellicorp drops the RV400 price by Rs 28,200 after the FAME II Incentive revision. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X