ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

By Rahul Ts

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತನ್ನ ಇಕೊಸ್ಪೋರ್ಟ್ ಕಾರಿನ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಎಂಜಿನ್ ಮತ್ತು ವಿನ್ಯಾಸವನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಫೋರ್ಡ್ ಸಂಸ್ಥೆಯ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಕಾರುಗಳು ಟೈಟಾನಿಯಂ ಟ್ರಿಮ್ ಮಾಡಲ್‍‍ಗಳನ್ನು ಆಧರಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಇದೀಗ ಖರೀದಿಗೆ ಲಭ್ಯವಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಹೊಸ ಕಾರಿನ ಬೆಲೆಗಳು

ಕಾರು ಮಾದರಿ ಪೆಟ್ರೋಲ್ ಆವೃತ್ತಿ ಡೀಸೆಲ್ ಆವೃತ್ತಿ
ಇಕೊಸ್ಫೋರ್ಟ್ ಸಿಗ್ನೇಚರ್ ರೂ. 10.4 ಲಕ್ಷ ರೂ. 10.99 ಲಕ್ಷ
ಇಕೊಸ್ಫೋರ್ಟ್ ಎಸ್ ರೂ. 11.37 ಲಕ್ಷ ರೂ. 11.89 ಲಕ್ಷ
ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಹೊಸ ಫೋರ್ಡ್ ಇಕೋಬೂಸ್ಟ್ ಕಾರುಗಳು 1 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಫೋರ್ಡ್ ಇಕೊಬೂಸ್ಟ್ ಕಾರುಗಳು ಪ್ರತೀ ಲೀಟರ್‍‍ಗೆ 18.1 ಕಿಲೋಮೀಟರ್ ಮೈಲೇಜ್ ಕೂಡ ನೀಡಲಿದೆ. ಇಕೊಸ್ಪೋರ್ಟ್ ಎಸ್ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಎನ್ನು ಕೂಡಾ ಪಡೆದುಕೊಂಡಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಮತ್ತೊಂದು ಕಡೆ ಫೋರ್ಡ್ ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಶನ್ ಕಾರುಗಳು 1.5 ಲೀಟರ್ ಡ್ರ್ಯಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, 121 ಬಿಹೆಚ್‍ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಮತ್ತು ಫೋರ್ಡ್ ಇಕೊಸ್ಪೋರ್ಟ್ ಸಿಗ್ನೇಚರ್ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 98.6 ಬಿಹೆಚ್‍‍ಪಿ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಫೋರ್ಡ್ ಇಕೊಸ್ಪೋರ್ಟ್ ಕಾರಿನ ಟೈಟಾನಿಯಂ ಎಸ್ ವೇರಿಯಂಟ್ ಕಾರುಗಳು ಎಲೆಕ್ಟ್ರಿಕ್ ಸನ್‍‍ರೂಫ್ ಅಥವ ಫನ್ ರೂಫ್ ಅನ್ನು ಪಡೆದುಕೊಂಡಿರಲಿದೆ. ಇದಲ್ಲದೆ ಟೈಟಾನಿಯಂ ಎಸ್ ಟ್ರಿಮ್ ಇಕೊಸ್ಪೋರ್ಟ್ ಕಾರುಗಳು 17 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಜೊತೆಗೆ ರೀವ್ಯಾಂಪ್ಡ್ ಕ್ಲಸ್ಟರ್ 4.2 ಇಂಚಿನ ಎಮ್‍‍ಐಡಿ ಮತ್ತು ಟೈರ್ ಪ್ರೆಶ್ಶುರ್ ಮಾನಿಟರಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಇಕೋಸ್ಪೋರ್ಟ್ ಎಸ್ ವೇರಿಯಂಟ್ ಕಾರುಗಳು ಕೂಡ ಸ್ಟಿಫ್ಫರ್ ಸಸ್ಪೆಂಷನ್ ಮತ್ತು ರೆಸ್ಪಾನ್ಸಿವ್ ಸ್ಟೀರಿಂಗ್ ಅನ್ನು ಪಡೆದುಕೊಂಡಿವೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಇನ್ನು ಇಕೊ ಸ್ಪೋರ್ಟ್ಸ್ ಎಸ್ ಕಾರಿನ ಹೊರಭಾಗದಲ್ಲಿ ಬ್ಲೇಕ್ಡ್ ಔಟ್ ರೂಫ್, ಸ್ಮೋಕ್ಡ್ ಹೆಡ್‍‍ಲ್ಯಾಂಪ್ಸ್ ಫಾಗ್ ಲ್ಯಾಂಪ್‍‍ನ ಸುತ್ತ ಬ್ಲಾಕ್ ಬೆಜೆಲ್ ಅನ್ನು ಪಡೆದಿದ್ದು, ಟೈಟಾನಿಯಂ ಎಸ್ ಕಾರುಗಳು ಹೊಸ ಸ್ಯಿನ್ ಆರೆಂಜ್ ಬಣ್ಣದಲ್ಲಿ ದೊರೆಯುತ್ತಿವೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಫೋರ್ಡ್ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ಕಾರಿನ ಒಳಭಾಗದ ಸೆಂಟರ್ ಕಂಸೋಲ್‍‍ನಲ್ಲಿ ಸ್ಪೋರ್ಟ್ ಆರೆಂಜ್ ಆಕ್ಸೆಂಟ್‍‍ಗಳು, ಸೀಟ್ ಮತ್ತು ಡೋರ್ ಟ್ರಿಮ್ಸ್ ಅನ್ನು ಅಳವಡಿಸಲಾಗಿದ್ದು, ಎಸ್ ಟ್ರಿಮ್ ವೇರಿಯಂಟ್ ಕಾರುಗಳಲ್ಲಿ ಸುರಕ್ಷತೆಗಾಗಿ 6 ಏರ್‍‍ಬ್ಯಾಗ್‍‍ಗಳು ಮತ್ತು 8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಫೋರ್ಡ್ ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಶನ್ ಕಾರುಗಳು 17 ಇಂಚಿನ ಅಲಾಯ್ ವೀಲ್‍‍ಗಳನ್ನು ಪಡೆದುಕೊಂಡಿದ್ದು, ಜೊತೆಗೆ ಸನ್‍ರೂಫ್, ಗ್ರೀಲ್‍‍ನ ಸುತ್ತಾ ಕ್ರೋಮ್, ಹೊಸ ಗ್ರಾಫಿಕ್ಸ್ ಮತ್ತು ರಿಯರ್ ಸ್ಪಾಯ್ಲರ್ ಅನ್ನು ಪಡೆದುಕೊಂಡಿವೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಇನ್ನು ಇಕೊಸ್ಪೋರ್ಟ್ ಸಿಗ್ನೆಚರ್ ಎಡಿಷನ್ ಕಾರುಗಳು ಹೊಸ ಅನೊಡೈಸ್ಡ್ ಬ್ಲೂ ಪೇಯಿಂಟ್ ಸ್ಕೀಮ್‍‍ನಲ್ಲಿ ದೊರೆಯುತಿದ್ದು, ಕಾರಿನ ಒಳಭಾಗದಲ್ಲಿ ಸೀಟ್‍, ಸೆಂಟರ್ ಕಂಸೋಲ್ ಸಿಸ್ಟಂ ಮತ್ತು ಇನ್ಸ್ಟ್ರೂಮೆಂಟ್ ಪ್ಯಾನೆಲ್‍‍ಗಳ ಮೇಲೆ ಬ್ಲೂ ಆಕ್ಸೆಂಟ್‍‍ನಿಂದ ಸಜ್ಜುಕೊಂಡಿದ್ದು, ಸಿಗ್ನೇಚರ್ ಎಡಿಶನ್ ಕಾರುಗಳು ಟೈಟಾನಿಯಂ ಟ್ರಿಮ್ ಆಯ್ಕೆಯಲ್ಲಿಯು ಲಭ್ಯವಿದೆ.

ಬಿಡುಗಡೆಗೊಂಡ ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳು..

ಫೋರ್ಡ್ ಸಂಸ್ಥೆಯು ಇಕೊಸ್ಪೋರ್ಟ್ ಕಾರಿನ ಎರಡು ಹೊಸ ವೇರಿಯಂಟ್‍‍ಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಎಂಜಿನ್ ಮತ್ತು ಹೊಸ ವಿನ್ಯಾಸವನ್ನು ಪಡೆದುಕೊಂಡಿವೆ. ಇನ್ನು ಮಾರುಕಟ್ಟೇಗೆ ಹೊಸದಾಗಿ ಕಾಲಿಟ್ಟ ಈ ಕಾರುಗಳು ಮಾರುತಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ford ecosport compact suv
English summary
Ford EcoSport S And Signature Edition Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X