ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಮಾರುತಿ ಸುಜುಕಿ ನಿರ್ಮಾಣದ ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯು ಕಾರು ಮಾರಾಟ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಕಳೆದ 10 ವರ್ಷಗಳಲ್ಲಿ ಬರೋಬ್ಬರಿ 20 ಲಕ್ಷ ಯುನಿಟ್ ಮಾರಾಟವಾಗುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ.

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

2009ರ ಮಧ್ಯಂತರದಲ್ಲಿ ಬಿಡುಗಡೆಗೊಂಡಿದ್ದ ಡಿಜೈರ್ ಕಾರು ಇದುವರೆಗೂ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದಲ್ಲಿ ಇದುವರೆಗೂ ಮಾರಾಟಗೊಂಡಿರುವ ಕಂಪ್ಯಾಕ್ಟ್ ಸೆಡಾನ್ ಕಾರುಗಳ ಪೈಕಿ ಡಿಜೈರ್ ಮಾದರಿಯೊಂದೆ ಬರೋಬ್ಬರಿ ಶೇ.60 ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ಅದರಲ್ಲೂ ಕಳೆದ ವರ್ಷ ಬಿಡುಗಡೆಗೊಂಡ ಹೊಸ ತಲೆಮಾರಿನ ಡಿಜೈರ್ ಆವೃತ್ತಿಯು ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ್ದು, 2019-20ರ ಹಣಕಾಸು ವರ್ಷದಲ್ಲಿ(ಏಪ್ರಿಲ್‌ನಿಂದ ನವೆಂಬರ್) 1.20 ಲಕ್ಷ ಯುನಿಟ್ ಮಾರಾಟಗೊಂಡಿದೆ.

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಗ್ರಾಹಕರ ಬೇಡಿಕೆಯೆಂತೆ ಕೈಗೆಟುಕುವ ಬೆಲೆಗಳಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಡಿಜೈರ್ ಕಾರು ವ್ಯಯಕ್ತಿಕ ಕಾರು ಬಳಕೆದಾರರಿಗೆ ಮಾತ್ರವಲ್ಲದೇ ಕ್ಯಾಬ್ ಸೇವಾ ಬಳಕೆದಾರರ ಆಯ್ಕೆಯಲ್ಲೂ ಮುಂಚೂಣಿ ಸಾಧಿಸಿದೆ.

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಡಿಜೈರ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 14 ವೆರಿಯೆಂಟ್‌ಗಳನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯು 82-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಮಾದರಿಯು 74-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಗರಿಷ್ಠ ಮೈಲೇಜ್ ಹಿಂದಿರುಗಿಸುತ್ತದೆ.

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಈ ಮೂಲಕ ಕಂಪ್ಯಾಕ್ಟ್ ಸೆಡಾನ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಡಿಜೈರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.83 ಲಕ್ಷದಿಂದ ರೂ.9.53 ಲಕ್ಷ ಬೆಲೆ ಹೊಂದಿದೆ. ಆದರೆ ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಿಂದಾಗಿ ಡಿಜೈರ್ ಕಾರಿನ ಮಾರಾಟದಲ್ಲಿ ಭಾರೀ ಬದಲಾವಣೆಗಳನ್ನು ನೀರಿಕ್ಷಿಸಲಾಗಿದ್ದು, ಹೊಸ ಎಂಜಿನ್ ಆಯ್ಕೆಯೊಂದಿಗೆ ದುಬಾರಿ ಬೆಲೆ ಪಡೆದುಕೊಳ್ಳಲಿದೆ.

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಜಾರಿಗೂ ಮುನ್ನವೇ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಕಾರು ಮಾದರಿಗಳ ಪೆಟ್ರೋಲ್ ಎಂಜಿನ್ ಆವೃತ್ತಿಗಳನ್ನು ಹೊಸ ನಿಯಮ ಅನುಸಾರ ಉನ್ನತೀಕರಿಸಿದೆ.

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಆದರೆ ಡೀಸೆಲ್ ಎಂಜಿನ್‌ಗಳನ್ನು ಮಾತ್ರವೇ ಬಿಎಸ್-4 ನಿಯಮದಂತೆಯೇ ಮಾರಾಟ ಮಾಡುತ್ತಿದ್ದು, ಡೀಸೆಲ್ ಕಾರುಗಳನ್ನು ಸಹ 2020ರ ಏಪ್ರಿಲ್ ಒಳಗಾಗಿ ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಲು ಸಿದ್ದತೆ ನಡೆಸಿದೆ.

MOST READ: 2019ರಲ್ಲಿ ಬಿಡುಗಡೆಗೊಂಡು ಜನಪ್ರಿಯವಾಗಿರುವ ಟಾಪ್ 10 ಕಾರುಗಳಿವು..!

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಸದ್ಯ ಮಾರುಕಟ್ಟೆಯಲ್ಲಿ ಬಲೆನೊ, ಆಲ್ಟೋ 800, ವ್ಯಾಗನ್‌ಆರ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಎಕ್ಸ್ಎಲ್ 6 ಮತ್ತು ಎಸ್-ಪ್ರೆಸ್ಸೊ ಕಾರುಗಳ ಪೆಟ್ರೋಲ್ ಕಾರುಗಳನ್ನು ಬಿಎಸ್-6 ನಿಯಮದಂತೆ ಉನ್ನತೀಕರಿಸಲಾಗಿದ್ದು, ಬಿಎಸ್-4 ಕಾರುಗಳಿಂತೂ ತುಸು ಭಿನ್ನವಾಗಿರುವ ಹೊಸ ಕಾರುಗಳು ಮಾಲಿನ್ಯ ಹೊರಸೂಸುವಿಕೆ ಮತ್ತು ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

MOST READ: ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಇದೀಗ ಡೀಸೆಲ್ ಕಾರುಗಳ ಉನ್ನತೀಕರಣವು ತುಸು ಸವಾಲಾಗಿದ್ದು, ಬಿಎಸ್-6 ಡೀಸೆಲ್ ಎಂಜಿನ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆಯೊಂದಿಗೆ ಮಾಲಿನ್ಯ ಹೊರಸೂಸುವಿಕೆಯಲ್ಲಿ ಮಹತ್ವದ ಬದಲಾವಣೆ ಪಡೆದುಕೊಳ್ಳುತ್ತಿವೆ.

MOST READ: ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಬುಕ್ಕಿಂಗ್ ಶುರು

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಬಿಎಸ್-6 ಪೆಟ್ರೋಲ್ ಕಾರುಗಳು ಬಿಎಸ್-4 ಕಾರುಗಳಿಂತಲೂ ರೂ.15 ಸಾವಿರದಿಂದ ರೂ.20 ಸಾವಿರದಷ್ಟು ದುಬಾರಿಯಾಗಿದ್ದರೆ ಡೀಸೆಲ್ ಎಂಜಿನ್ ಮಾತ್ರ ಪ್ರಸ್ತುತ ಮಾರುಕಟ್ಟೆಯಲ್ಲಿನ ಬಿಎಸ್-4 ಕಾರುಗಳಿಂತಲೂ ರೂ.90 ಸಾವಿರದಿಂದ ರೂ.2 ಲಕ್ಷದಷ್ಟು ದುಬಾರಿಯಾಗಲಿವೆ.

ಕಳೆದ 10 ವರ್ಷಗಳಲ್ಲಿ 20 ಲಕ್ಷ ಮಾರುತಿ ಸುಜುಕಿ ಡಿಜೈರ್ ಕಾರು ಮಾರಾಟ..!

ಇದೇ ಕಾರಣಕ್ಕೆ ಮಾರುತಿ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಯ ಕಾರುಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಉನ್ನತೀಕರಿಸುವ ಯೋಜನೆಯನ್ನು ಕೈಬಿಡಲು ನಿರ್ಧರಿಸಿದ್ದು, ಕೇವಲ ಪೆಟ್ರೋಲ್, ಹೈಬ್ರಿಡ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚು ಒತ್ತುನೀಡಲು ನಿರ್ಧರಿಸಿದೆ.

Most Read Articles

Kannada
English summary
Maruti Suzuki has sold more than 1.2 lakh units of its Dzire compact sedan in the first eight months (April-November) of FY20, claims the automaker in a release. The sedan claims to have crossed 2 million units sales mark recently.
Story first published: Tuesday, December 24, 2019, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X