ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಇತ್ತೀಚೆಗೆ ಆಂಧ್ರಪ್ರದೇಶದ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ವೈಸಿಪಿ ಪಕ್ಷದ ನಾಯಕಿ ಆರ್‌.ಕೆ ರೋಜಾ ಅವರು ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್-400ಡಿ ಮ್ಯಾಟಿಕ್ ಕಾರುನ್ನು ಖರೀದಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿರೋಧ ಪಕ್ಷವಾದ ಟಿಡಿಪಿ ಅವರು ವಿಡಿಯೋಗೆ ವ್ಯಂಗ್ಯ ಕಂಮೆಂಟ್‌ಗಳನ್ನು ಮಾಡಿದ್ದಾರೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ರೋಜಾ ಅವರ ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ಟಿಡಿಪಿ, ಒಂದೂವರೆ ಕೋಟಿ ರೂ. ಮೌಲ್ಯದ ಕಾರನ್ನು ಖರೀದಿ ಮಾಡಿದ್ದಾರೆಂದರೆ ಸಚಿವರಿಗೆ ನೇಮಕಾತಿಗಳಿಂದ ಹಣ ಹರಿದುಬರುತ್ತಿದ್ದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ ಈ ಕಾರನ್ನು ತನ್ನ ಮಗನಿಗಾಗಿ ಖರೀದಿಸಿದ್ದಾರೆ ಎನ್ನಲಾಗಿದೆ. ಇನ್ನು ವೈಸಿಪಿಯ ಮತ್ತೊಬ್ಬ ಮಹಿಳಾ ಮಂತ್ರಿಯಾಗಿರುವ ವಿಡುದಲ ರಜನೀ ಅವರನ್ನು ಕಲೆಕ್ಷನ್ ಕ್ವೀನ್ ಎಂದು ಹೆಸರಿಸುವ ಒಂದು ಲೋಗೋವನ್ನು ವೀಡಿಯೊಗೆ ಟ್ಯಾಗ್ ಮಾಡಲಾಗಿದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಇನ್ನು ಕಾರಿನ ವಿಷಯಕ್ಕೆ ಬಂದರೆ ರೋಜಾ ಖರೀದಿಸಿರುವ ಜಿಎಲ್‌ಎಸ್-400ಡಿ ಮ್ಯಾಟಿಕ್ ಬೆಂಜ್ ಕಾರಿನ ಮೌಲ್ಯ 1.5 ಕೋಟಿ ರೂ. ಇದೆ. ಈ ಜಿಎಲ್ಎಸ್ ಎಂಬುದು ಮರ್ಸಿಡಿಸ್ ಬೆಂಝ್‌ನ ಪ್ರಮುಖ ಎಸ್‍ಯುವಿಯಗಿದೆ. ಜಿಎಲ್ಎಸ್ ಮತ್ತೊಂದು ರೂಪಾಂತರವನ್ನು 450 4MATIC ಎಂದು ಕರೆಯುತ್ತಾರೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂಗೆ ಹೊಂದಿಕೆಯಾಗುತ್ತದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಈ ಎಂಜಿನ್ 367 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರವು 3.0 ಲೀಟರ್ ಇನ್-ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯುಯಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್ ಲೈಟ್, ಕ್ರೋಮ್ ಅಡ್ಡಲಾಗಿರುವ ಸ್ಲ್ಯಾಟ್‌ಗಳೊಂದಿಗೆ ಫ್ರಂಟ್ ಗ್ರಿಲ್ ಮತ್ತು ಮಧ್ಯದಲ್ಲಿ ಮರ್ಸಿಡಿಸ್ ಬೆಂಝ್ ಲೋಗೊವನ್ನು ಅಳವಡಿಸಲಾಗಿದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಈ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, 21 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್, ಕ್ರೋಮ್ ಬೆಜೆಲ್‌ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್‌ಗಳು ಮತ್ತು ಹಲವಾರು ಸೂಕ್ಷ್ಮ ನವೀಕರಣಗಳನ್ನು ಮಾಡಲಾಗಿದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಈ ಹೊಸ ಎಸ್‍ಯುವಿಯ ಇಂಟೀರಿಯರ್ ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬ್ರ್ಯಾಂಡ್‌ನ ಎಂಬಿಎಕ್ಸ್ ತಂತ್ರಜ್ಞಾನ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಪನೋರಮಿಕ್ ಸನ್‌ರೂಫ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು 5 ಹಂತದ ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ. ಈ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವನ್ನು ಹೊಂದಿದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಹೊಸ ಜಿಎಲ್ಎಸ್ ಕಾರು 60 ಎಂಎಂನಷ್ಟು ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿ ಐಷಾರಾಮಿ ಆರು ಸೀಟುಗಳ ಕ್ಯಾಬಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಮಾದರಿಯಾಗಿದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಹೊಸ ಜಿಎಲ್ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ. ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು 5ನೇ ಜನರೇಷನ್ ಸಿ-ಕ್ಲಾಸ್ ಕಾರನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೆ ಮಾಡಿದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಹೊಸ ತಲೆಮಾರಿನ ಬಹುನಿರೀಕ್ಷಿತ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಮೇ 10, 2022 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಿದೆ. ಇದು ತನ್ನ ಫ್ರ್ಯಾಂಚೈಸ್ ಪಾಲುದಾರ ನೆಟ್ವರ್ಕ್‌ನಲ್ಲಿ ಮತ್ತು ಮರ್ಸಿಡಿಸ್-ಬೆಂಝ್ ಇಂಡಿಯಾ ಆನ್ಲೈನ್ ಸ್ಟೋರ್‌ನಲ್ಲಿ ಡಿಜಿಟಲ್ ಆಗಿ ಲಭ್ಯವಾಗುತ್ತಿದೆ. ಈ ಹೊಸ ತಲೆಮಾರಿನ ಸಿ-ಕ್ಲಾಸ್ ಸೆಡಾನ್ ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗಿದೆ.

ಒಂದೂವರೆ ಕೋಟಿ ರೂ. ಮೌಲ್ಯದ ಕಾರು ಖರೀದಿಸಿ ಟ್ರೋಲ್‌ಗೆ ಗುರಿಯಾದ ಆಂಧ್ರಪ್ರದೇಶದ ಸಚಿವೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಆಂಧ್ರ ಪ್ರದೇಶದಲ್ಲಿ ಆಡಳಿತ ಸರ್ಕಾರವಾದ ವೈಸಿಪಿಯನ್ನು ಮುನ್ನಡೆಸುತ್ತಿರುವ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಇತ್ತೀಚೆಗೆ ರೋಜಾ ಅವರಿಗೆ ಪ್ರವಾಸೋದ್ಯಮ ಸಚಿವೆಯನ್ನಾಗಿ ಮಾಡಿದ್ದರು. ಈ ಬೆನ್ನಲ್ಲೇ ಬೆಂಝ್ ಕಾರನ್ನು ಖರೀದಿಸಿರುವುದು ಅಲ್ಲಿನ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಕಾರಿನ ವಿಷಯಕ್ಕೆ ಬಂದರೆ ಜಿಎಲ್ಎಸ್ 400 ಡಿ ಮ್ಯಾಟಿಕ್ ಉತ್ತಮ ಫೀಚರ್ಸ್, ವಿನ್ಯಾಸವನ್ನು ಹೊಂದಿದೆ. ಭಾರತದಲ್ಲಿ ಹಲವರು ಸೆಲಬ್ರಿಟಿಗಳ ನೆಚ್ಚಿನ ಕಾರಾಗಿದೆ.

Most Read Articles

Kannada
English summary
Andhra Pradesh minister trolled by TDP for buying expensive car
Story first published: Saturday, July 16, 2022, 11:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X