ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಭಾರತದ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಈ ವಾತಾವರಣದಲ್ಲಿ ಹಲವಾರು ಜನರು ದೂರದ ಊರುಗಳಿಗೆ ಪ್ರಯಾಣ ಮಾಡಲು ಬಯಸುತ್ತಾರೆ. ಮಳೆಗಾಲದಲ್ಲಿ ಪ್ರಯಾಣ ಬೆಳೆಸುವುದು ಮನಸ್ಸಿಗೆ ಮುದ ನೀಡುತ್ತದೆ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಆದರೆ ವಾಸ್ತವವಾಗಿ ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವುದು ಸಾಮಾನ್ಯ ದಿನಗಳಲ್ಲಿ ವಾಹನ ಚಾಲನೆ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಮಳೆಗಾಲದಲ್ಲಿ ತೇವ ಹಾಗೂ ಜಾರುವ ರಸ್ತೆಯಲ್ಲಿ ವಾಹನಗಳು ಚಲಿಸ ಬೇಕಾಗುತ್ತದೆ. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಮಳೆಗಾಲದಲ್ಲಿ ವಾಹನಗಳನ್ನು ಚಾಲನೆ ಮಾಡುವಾಗ ಹಲವು ಸಂಗತಿಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ಮೊದಲನೆಯದಾಗಿ ಒದ್ದೆಯಾದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ನಿಧಾನವಾಗಿ ಚಲಿಸುವುದು ತಪ್ಪಲ್ಲ. ಈ ಲೇಖನದಲ್ಲಿ ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳು ಯಾವುವು ಎಂಬುದನ್ನು ನೋಡೋಣ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಟಯರ್‌ಗಳ ಕಡ್ಡಾಯ ನಿರ್ವಹಣೆ

ಮಳೆಗಾಲದಲ್ಲಿ ರಸ್ತೆಗಳು ಜಾರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತಹ ಸಂದರ್ಭಗಳಲ್ಲಿ ಹಾಳಾಗಿರುವ ಟಯರ್‌ಗಳನ್ನು ಹೊಂದಿರುವ ವಾಹನಗಳನ್ನು ಚಾಲನೆ ಮಾಡಿದರೆ ಅಪಾಯಕ್ಕೆ ಸಿಲುಕುವುದು ಖಚಿತ. ಕೆಲವೊಮ್ಮೆ ಅಪಘಾತಗಳ ಸಾಧ್ಯತೆ ಕೂಡ ಇರುತ್ತದೆ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಈ ಕಾರಣಕ್ಕೆ ಟಯರ್‌ಗಳು ಹಾಳಾಗಿದ್ದರೆ ಅಥವಾ ಹಳೆಯದಾಗಿದ್ದರೆ ತಕ್ಷಣವೇ ಅವುಗಳನ್ನು ಬದಲಾಯಿಸಿ. ನೀವು ವಾಸಿಸುತ್ತಿರುವ ಪ್ರದೇಶದಲ್ಲಿ ಮಳೆಗಾಲ ಆರಂಭವಾಗಿದ್ದರೆ ವಾಹನದ ಟಯರ್‌ಗಳು ಹಾಳಾಗಿವೆಯೇ ಅಥವಾ ಹಳೆಯದಾಗಿವೆಯೇ ಎಂಬುದನ್ನು ಪರಿಶೀಲಿಸಿ ತಕ್ಷಣವೇ ಅವುಗಳನ್ನು ಬದಲಿಸಿ, ಅಪಾಯ ಸಂಭವಿಸುವುದನ್ನು ತಪ್ಪಿಸಿ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಬ್ರೇಕ್‌ಗಳನ್ನು ಪರೀಕ್ಷಿಸಿ

ಕೆಲವೊಮ್ಮೆ ಮಳೆಗಾಲದಲ್ಲಿ ಬ್ರೇಕ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಈ ಕಾರಣಕ್ಕಾಗಿಯೇ ಮಳೆಗಾಲದಲ್ಲಿ ವಾಹನಗಳನ್ನು ವೇಗವಾಗಿ ಚಾಲನೆ ಮಾಡಬೇಡಿ ಎಂದು ಸಲಹೆ ನೀಡಲಾಗುತ್ತದೆ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಮಳೆ ಬೀಳುವಾಗ ವೇಗವಾಗಿ ವಾಹನ ಚಾಲನೆ ಮಾಡಿದರೆ ವಾಹನದ ಬ್ರೇಕ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರಬಹುದು. ಹೊಸ ಬ್ರೇಕ್ ಸಿಸ್ಟಂ ಅಳವಡಿಸಿದ್ದರೂ ಸಹ ಹಠಾತ್ ಆಗಿ ಬ್ರೇಕ್ ಹಾಕುವ ಸಂದರ್ಭ ಎದುರಾಗುವುದನ್ನು ತಪ್ಪಿಸಿ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಮಳೆಯಲ್ಲಿ ವಾಹನ ಚಲಾಯಿಸದಿರಿ

ನೀವು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಇದ್ದಕ್ಕಿದ್ದಂತೆ ಮಳೆ ಬಂದರೆ ಹತ್ತಿರದಲ್ಲಿರುವ ಯಾವುದಾದರೂ ಅಂಗಡಿ ಅಥವಾ ತಂಗುದಾಣಗಳಿದ್ದರೆ ಅಲ್ಲಿ ನಿಲ್ಲಿ. ಮಳೆ ಬೀಳುವಾಗ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ರಸ್ತೆಗಳು ಸ್ಪಷ್ಟವಾಗಿ ಕಾಣುವುದಿಲ್ಲ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ರಸ್ತೆಗಳು ಸ್ಪಷ್ಟವಾಗಿ ಕಾಣದೇ ಇದ್ದರೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಕಾರುಗಳು ಮಳೆಯಲ್ಲಿ ಸಂಪೂರ್ಣವಾಗಿ ತೇವವಾದರೆ ವೈಪರ್'ಗಳನ್ನು ಆನ್ ಮಾಡಿ ವಿಂಡ್ ಶೀಲ್ಡ್ ಸ್ಪಷ್ಟವಾಗಿ ಕಾಣಿಸಿದ ನಂತರವೇ ಮುಂದೆ ಚಲಿಸಿ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಒಂದು ವೇಳೆ ನೀವು ಮಳೆಯಲ್ಲಿ ಸಂಪೂರ್ಣವಾಗಿ ನೆನೆದಿದ್ದರೆ ತಕ್ಷಣವೇ ಕಾರಿನಲ್ಲಿ ಕುಳಿತು ಕೊಳ್ಳದಿರಿ. ಮಳೆಯಲ್ಲಿ ನೆನೆದು ಕಾರಿನಲ್ಲಿ ಕುಳಿತು ಕೊಳ್ಳುವುದರಿಂದ ಕಾರಿನ ಕ್ಯಾಬಿನ್ ಒದ್ದೆಯಾಗಿ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಈ ಕೆಟ್ಟ ವಾಸನೆಯನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ.

ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳಿವು

ಸರ್ವೀಸ್ ಮಾಡಿಸಿ

ಮಳೆಗಾಲದಲ್ಲಿ ನಿಮ್ಮ ವಾಹನವನ್ನು ಒಮ್ಮೆಯಾದರೂ ಸರ್ವೀಸ್ ಮಾಡಿಸಿ. ಮಳೆಗಾಲದಲ್ಲಿ ವಾಹನಗಳು ವಿವಿಧ ಸಮಸ್ಯೆಗಳಿಗೆ ಸಿಲುಕುತ್ತವೆ. ಒಂದು ವೇಳೆ ವಾಹನದಲ್ಲಿ ಬೇರೆ ಸಣ್ಣ ಸಮಸ್ಯೆ ಇದ್ದರೆ ಅದರಿಂದ ದೊಡ್ಡ ಸಮಸ್ಯೆಗಳು ಉಂಟಾಗಬಹುದು. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಂದ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳು ಬಳಸಲಾಗದಷ್ಟು ರೀತಿಯಲ್ಲಿ ಹದಗೆಡುತ್ತವೆ. ಹದಗೆಟ್ಟ ರಸ್ತೆಗಳು ಸಹ ರಸ್ತೆ ಅಪಘಾತಳಿಗೆ ಕಾರಣವಾಗುತ್ತಿವೆ.

Most Read Articles

Kannada
English summary
Tips to drive vehicles during rainy season details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X