ಲಾಕ್‌ಡೌನ್ ನಡುವೆಯೂ ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ಕರೋನಾ ವೈರಸ್ ಕಾರಣಕ್ಕೆ ದೇಶಾದ್ಯಂತ ಮೇ 3ರವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಎಲ್ಲಾ ರೀತಿಯ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ.

ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ಕರೋನಾ ವೈರಸ್ ಹರಡದೇ ಇರುವ ವಲಯಗಳಲ್ಲಿ ಷರತ್ತುಗಳೊಂದಿಗೆ ಕೆಲ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಹಲವಾರು ಜನರು ಕೆಲಸಕ್ಕೆ ಮರಳಿದ್ದಾರೆ. ಸೂಕ್ತ ರೀತಿಯ ತಪಾಸಣೆ ನಡೆಸಿದ ನಂತರ ಪೊಲೀಸರು ವಾಹನಗಳ ಓಡಾಟಕ್ಕೆ ಅನುಮತಿ ನೀಡುತ್ತಿದ್ದಾರೆ.

ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ಅಧ್ಯಯನದಲ್ಲಿ ತೊಡಗಿದ್ದ ಸರ್ಕಾರಿ ಅಧಿಕಾರಿಯೊಬ್ಬರು ತಪಾಸಣೆಯಲ್ಲಿ ತೊಡಗಿದ್ದ ಗಾರ್ಡ್‌ಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಧಿಕಾರಿಯ ಈ ಅಧಿಕಾರದ ಮದ ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಈ ಘಟನೆ ನಡೆದಿರುವುದು ಬಿಹಾರದ ಅರೇರಿಯಾದಲ್ಲಿ. ಅರೇರಿಯಾ ಪ್ರದೇಶದ ಹಿರಿಯ ಕೃಷಿ ಅಧಿಕಾರಿ ಮನೋಜ್ ಕುಮಾರ್‌ರವರೇ ಈ ಘನಂದಾರಿ ಕೆಲಸ ಮಾಡಿದವರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ದೇಶಾದ್ಯಂತ, ಕರೋನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ತಮ್ಮ ಕುಟುಂಬಗಳಿಂದಲೂ ದೂರವುಳಿದಿದ್ದಾರೆ. ಪೊಲೀಸ್ ಸಿಬ್ಬಂದಿಯ ಕೊರತೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ಅವರು ಸಹ ಖಾಕಿ ಸಮವಸ್ತ್ರ ಧರಿಸಿ ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದಾರೆ. ವಾಹನ ಪರಿಶೀಲನೆಯಂತಹ ಕೆಲಸದಲ್ಲಿ ತೊಡಗಿ ಪೊಲೀಸರಿಗೆ ನೆರವಾಗುತ್ತಿದ್ದಾರೆ. ಈ ಘಟನೆಯಲ್ಲಿ ಕಾರಿನಲ್ಲಿ ಕುಳಿತಿದ್ದ ಮನೋಜ್ ಕುಮಾರ್‌ರವರನ್ನು ಗಣೇಶ್ ಎಂಬ ಗಾರ್ಡ್ ಪರಿಶೀಲಿಸಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ಪರಿಶೀಲನೆಗೆ ಸಹಕರಿಸುವ ಬದಲು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಗಾರ್ಡ್ ಗಣೇಶ್ ಅವರನ್ನು ಅಡ್ಡಗಟ್ಟಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಮನೋಜ್ ಕುಮಾರ್ ಕಾರಿನಿಂದ ಕೆಳಕ್ಕಿಳಿದು ಗಣೇಶ್‌ರವರಿಗೆ ಉಳಿದ ಗಾರ್ಡ್‌ಗಳ ಎದುರಿನಲ್ಲಿಯೇ ಹೊಡೆದಿದ್ದಾರೆ.

ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ಇದರ ಜೊತೆಗೆ 50 ಬಸ್ಕಿ ಹೊಡೆಯಲು ಹೇಳಿದ್ದಾರೆ. ಗಣೇಶ್ ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡರೂ ಬಿಡದೇ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ಕೃಷಿ ಅಧಿಕಾರಿಯ ಈ ಕೃತ್ಯವು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ವೀಡಿಯೊದಲ್ಲಿ ಕೃಷಿ ಅಧಿಕಾರಿಯ ಮುಂದೆ ಗಾರ್ಡ್ ಬಸ್ಕಿ ಹೊಡೆಯುತ್ತಿರುವುದನ್ನು ಕಾಣಬಹುದು. ಸರ್ಕಾರಿ ಅಧಿಕಾರಿಯ ಕಾರನ್ನು ಹೇಗೆ ನಿಲ್ಲಿಸುತ್ತೀರಿ ಎಂದು ಕೇಳುತ್ತಿರುವುದನ್ನು ಕಾಣಬಹುದು.

ಕೃಷಿ ಅಧಿಕಾರಿಯ ಅಂಧ ದರ್ಬಾರ್..!

ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆರವರು ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಕೃಷಿ ಇಲಾಖೆಯು ಮನೋಜ್ ಕುಮಾರ್‌ರವರಿಗೆ ನೋಟಿಸ್ ಜಾರಿ ಮಾಡಿದೆ.

Most Read Articles

Kannada
English summary
Bihar senior Agricultural Officer punished Home Guard with sit ups. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X