ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ನೀವು ಎಂದಿಗೂ ಸಹ ನಿಮ್ಮ ವಾಹನ ಇಂತಹ ಪ್ರತ್ಯೇಕವಾದ ಜಾಗಗಳಿಗೆ ತೆಗೆದುಕೊಂಡು ಹೋಗದಿದ್ದಾಗ, ಅಂತಹ ಪ್ರದೇಶದಲ್ಲಿ ನೀವು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದೀರಿ ಎಂದು ಚಲನ್ ಪಡೆದರೆ ನೀವೇನು ಮಾಡುತ್ತೀರಿ.? ಅದರಲ್ಲಿಯೂ ನೀವೊಬ್ಬ ಕಾರು ಮಾಲೀಕರಾಗಿದ್ದು, ಕಾರು ಚಾಲನೆಯ ವೇಳೆ ನೀವು ಹೆಲ್ಮೆಟ್ ಹಾಕಿಲ್ಲವೆಂದು ಚಲನ್ ಬಂದರೆ ಅಂತಹ ಸಮಯದಲ್ಲಿ ಏನು ಮಾಡುತ್ತೀರಿ.?

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಇಂತಹ ವಿಚಾರದ ಬಗ್ಗೆ ನಿಮಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತೇವೆ ಓದಿ. ನವನೀತ್ ಭಾರದ್ವಾಜ್ ಎಂಬಾತ ಹ್ಯುಂಡೈ ಆಕ್ಸೆಂಟ್ ಕಾರು ಮಾಲೀಕನಾಗಿದ್ದು, ಈತನು ಕಾರು ಚಾಲನೆ ವೇಳೆ ಹೆಲ್ಮೆಟ್ ಹಾಕಿಲ್ಲವೆಂದು ರೂ. 500ರ ಚಲನ್ ಪಡೆದಿದ್ದಾರೆ. ಅರೆ ನಾನು ನಾನೊಬ್ಬ ಕಾರು ಮಾಲೀಕನಾಗಿದ್ದು, ಜೊತೆಗೆ ನನ್ನ ಬಳಿ ಯಾವುದೇ ದ್ವಿಚಕ್ರ ವಾಹನ ಇಲ್ಲದಿರುವಾಗ ನಾನೆಂದು ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದೇನೆ ಎಂದು ಆಶ್ಚರ್ಯ ಪಟ್ಟರು.

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಕೇವಲ ಹೆಲ್ಮೆಟ್ ಮಾತ್ರವಲ್ಲವಂತೆ ಪರಿಶೀಲಿಸಿದಾಗ ಅವರು ಫುಟ್‍‍ಪಾತ್‍ನ ಮೇಲೆ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿದ ಕಾರಣ ಅದಕ್ಕೂ ಸಹ ರೂ. 200ರ ಚಲನ್ ಪಡೆದಿದ್ದಾರೆ. ಇವೆಲ್ಲವನ್ನು ಕಂಡ ನವನೀತ್ ಮೊದಲಿಗೆ ಟ್ರಾಫಿಕ್ ಪೊಲೀಸರು ಭೇಟಿಯಾಗಿ ತಾನು ತಪ್ಪಾಗಿ ಚಲನ್ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಆದರೆ ಪರಿಶೀಲಿಸಿದ ನಂತರ ನವನೀತ್ ಮತ್ತು ಅಲ್ಲಿನ ಟ್ರಾಫಿಕ್ ಪೊಲಿಸರಿಗೆ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ ನವನೀತ್‍‍ರವರ ಹ್ಯುಂಡೈ ಆಕ್ಸೆಂಟ್ ಕಾರಿಗೆ ನೀಡಲಾದ ನಂಬರ್ ಪ್ಲೇಟ್ ಅನ್ನು ಮುಂಬೈನ ಬಾಂದ್ರಾ ಪ್ರದೇಶದ್ಲಲಿರುವ ಒಂದು ಹೋಂಡಾ ಆಕ್ಟೀವಾ ಸ್ಕೂಟರ್ ಬಳಸುತ್ತಿರುವುದಾಗಿ ತಿಳಿದು ಬಂದಿದೆ.

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಇವೆಲ್ಲವನ್ನು ತಿಳಿದ ನಂತರ ನಾನೊಬ್ಬ ಪಂಜಾಬಿ ಬ್ರಾಹ್ಮಣನಾಗಿದ್ದು, ನಾನ ತಲೆಯ ಮೇಲೆ ಟರ್ಬನ್ (ಪೇಟ) ಹಾಕಿಕೊಳ್ಳುವ ಕಾರಣ ನಾನು ಹೆಲ್ಮೆಟ್ ಧರಿಸುವುದಿಲ್ಲ. ಹೀಗಾಗಿ ನಾನು ಯಾವುದೇ ದ್ವಿಚಕ್ರ ವಾಹನವನ್ನು ಬಳಸುವುದಿಲ್ಲ. ಅಲ್ಲದೇ ನಾನು ಬಾಂದ್ರಾ ಸ್ಥಳಕ್ಕೆ ನನ್ನ ಜೀವನದಲ್ಲಿ ನಾನು ಹೋಗಲಿಲ್ಲ ಮತ್ತು ನನ್ನ ಬಳಿ ಇರುವ ಏಕೈಕ ವಾಹನ ಹ್ಯುಂಡೈ ಆಕ್ಸೆಂಟ್ ಕಾರು. ಇದನ್ನು ನಾನು ಸ್ವಂತ ಬಳಕೆಗೆ ಬಳಸುತ್ತೇನೆ ಎಂದು ಹೇಳಿಕೊಂಡರು.

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಈ ವಿಚಾರದ ಕುರಿತಾಗಿ ನವನೀತ್‍‍ರವರು ಸ್ಥಳೀಯ ಟ್ರಾಫಿಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಚಲನ್‍‍ಗಳನ್ನು ಮತ್ತು ತನ್ನ ವಾಹನದ ನಂಬರ್ ಪ್ಲೇಟ್ ಅನ್ನು ಅಂಟಿಸಿಕೊಂಡು ತಿರುಗುತ್ತಿರುವ ಆ ಸ್ಕೂಟರ್‍‍ನ ಚಿತ್ರಗಾನ್ನು ತೋರಿಸಿ ನನಗೆ ಸಹಾಯ ಮಾಡಿ ಎಂದು ನವನೀಟ್ ಕೇಳಿದಾಗ, ಯಾರು ಸಹಾಯ ಮಾಡಲಿಲ್ಲವಂತೆ.

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಒಂದೇ ರೀತಿಯ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ನಗರದಲ್ಲಿದ್ದರೆ ಅದು ನನ್ನ ತಪ್ಪು ಹೇಗಾಗುತ್ತದೆ.? ಎಂದು ಭಾರದ್ವಾಜ್ ಪೊಲೀಸರನ್ನು ಪ್ರಶಿಸಿದ್ದಾರೆ. ಜಾನೂನು ಉಲ್ಲಂಘಿಸುವವನಿಗೆ ಶಿಕ್ಷೆಯಾಗಲೇಬೇಕು. ಇದು ನನ್ನಂತಹ ಮುಗ್ಧ ಜನರನ್ನು ಅನಾನುಕೂಲಗೊಳಿಸುವ ಸಂಚಾರ ಇಲಾಖೆಯ ಒಂದು ಕೊರತೆಯಾಗಿದೆ" ಎಂದು ನವನೀತ್ ಹೇಳಿದರು. ಟ್ರಾಫಿಕ್ ಡಿಸಿಪಿ ಸಂದೀಪ್ ಭಾಜಿಭಾಕ್ರೆ (ಪಶ್ಚಿಮ ಉಪನಗರ) ಅವರು "ಈ ಆಘಾತಕಾರಿ ವಿಷಯವನ್ನು ಪರಿಶೀಲಿಸುತ್ತೇವೆ ಮತ್ತು ಅದನ್ನು ಬೇಗನೆ ಪರಿಹರಿಸಲು ಪ್ರಯತ್ನಿಸುತ್ತೇವೆ" ಎಂದು ಹೇಳಿದರು.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಇನ್ನು ಬೆಂಗಳೂರಿನಂತಹ ಮಹಾನಗರದಲ್ಲಿ ನಕಲಿ ನಂಬರ್ ಪ್ಲೇಟ್ ಸೃಷ್ಠಿಸಿ ಕದ್ದ ವಾಹನಗಳನ್ನು ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಮಾರಾಟ ಮಾಡುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗಾಗಿ ಎದುರು ನೋಡುತ್ತಿರುವ ಗ್ರಾಹಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಹೊಸ ವಾಹನ ಖರೀದಿ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನವನ್ನಾದರೂ ಖರೀದಿ ಮಾಡಬೇಕೆಂಬ ಯೋಜನೆಯಲ್ಲಿರುವ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಬಳಸಿದ ವಾಹನಗಳನ್ನು ಮಾರಾಟ ಮಾಡುವ ಖದೀಮರ ತಂಡವು ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕುತ್ತಿವೆ.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ದೊಡ್ಡ ದೊಡ್ಡ ವಾಹನ ತಯಾರಕ ಸಂಸ್ಥೆಗಳ ಡೀಲರ್‍‍ಗಳು ಸಹ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟದ ಹೆಸರಿನಲ್ಲಿ ಗ್ರಾಹಕರಿಗೆ ಯಾವೆಲ್ಲಾ ರೀತಿ ಮೋಸ ಮಾಡುತ್ತಿದ್ದಾರೆ ಎಂಬುವುದರ ಬಗ್ಗೆ ನಾವೀಗಾಗಲೇ ನಿಮಗೆ ಮಾಹಿತಿಯನ್ನು ನೀಡಿದ್ದೇವೆ. ಆದ್ರೆ ಬೆಂಗಳೂರಿನಲ್ಲಿ ಶುರುವಾಗಿರುವ ಹೊಸ ಮಾಫಿಯಾ ಒಂದು ನಿಮ್ಮನ್ನು ಬೆಚ್ಚಿಬಿಳಿಸುತ್ತೆ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುವಾಗ ಸರಿಯಾದ ದಾಖಲೆಗಳು ಇದೆಯೆ ಇಲ್ಲವೇ ಎಂದು ಪರಿಶೀಲಿಸಿದರೆ ಮಾತ್ರ ಸಾಲದು. ಇದೀಗ ನೀಡಲಾದ ನಂಬರ್ ಪ್ಲೇಟ್ ಬೇರೊಂದು ವಾಹನಕ್ಕೂ ನೀಡಲಾಗಿದೆಯೇ ಎಂಬ ಪರಿಸ್ಥಿತಿ ಎದುರಾಗಿದೆ.

ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದ್ದ ಕಾರು ಮಾಲೀಕನಿಗೆ ಕಾದಿತ್ತು ಶಾಕ್.!

ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಮಾಫಿಯಾ ಇರುವುದನ್ನು ಪೊಲೀಸರ ಗಮನಕ್ಕೆ ಬಂದಿದ್ದು, ಬೇರಾವುದೋ ದೂರದ ಊರಿನಲ್ಲಿ ಕದ್ದ ವಾಹನಗಳನ್ನು ತೆಗೆದುಕೊಂಡು ಬಂದು ಅವುಗಳಿಗೆ ಈಗಾಗಲೇ ನೋಂದಣಿಯಾಗಿರುವ ನಂಬರ್‍‍ಗಳನ್ನು ನೀಡಿ ಮರು ಮಾರಾಟ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿದೆ.

Source: Mid Day

Most Read Articles

Kannada
English summary
Fake Number Plate Case Car Owner Fined For Not Wearing Helmet. Read In Kannada
Story first published: Tuesday, August 13, 2019, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X