ಎಲೆಕ್ಟ್ರಿಕ್ ರೇಸಿಂಗ್ ಕಾರು ತಯಾರಿಸಿ ಭಾರೀ ಪ್ರಶಂಸೆಗೆ ಪಾತ್ರವಾದ IITವಿದ್ಯಾರ್ಥಿಗಳು

ಭಾರತದ ವಿದ್ಯಾರ್ಥಿಗಳು ಒಂದಿಲ್ಲೊಂದು ಆವಿಷ್ಕಾರಿಕ ಕೆಲಸಗಳನ್ನು ಮಾಡಿ ವಿಶ್ವಾದ್ಯಂತ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ತನ್ನ ಮೊದಲ ಎಲೆಕ್ಟ್ರಿಕ್ ರೇಸಿಂಗ್ ಕಾರನ್ನು ಅನಾವರಣ ಮಾಡಿದೆ. ಐಐಟಿಯ ವಿವಿಧ 10 ವಿಭಾಗಗಳ 45 ವಿದ್ಯಾರ್ಥಿಗಳ ತಂಡವು ಈ ರೇಸ್ ಕಾರನ್ನು ಅಭಿವೃದ್ಧಿಪಡಿಸಿದೆ.

ಈ ಎಲೆಕ್ಟ್ರಿಕ್ ರೇಸಿಂಗ್ ಕಾರು, ಮುಂದಿನ ವರ್ಷ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲಿದೆ. ನಾಲ್ಕು ಸೆಕೆಂಡುಗಳಲ್ಲಿ ಗಂಟೆಗೆ 0-100 kmph ತಲುಪುವ ಸಾಮರ್ಥ್ಯವನ್ನು ಹೊಂದಿದ್ದು, ಗರಿಷ್ಠ 160 ಕಿ.ಮೀ ಟಾಪ್ ಸ್ಟೀಡ್ ವೇಗವನ್ನು ತಲುಪಬಲ್ಲದು. 'RFR23' ರೈಸಿಂಗ್ ಕಾರ್, ಜನವರಿ 2023ರಲ್ಲಿ ಕೊಯಮತ್ತೂರಿನ 'ಕರಿ ಮೋಟಾರ್ ಸ್ಪೀಡ್‌ವೇ'ಯಲ್ಲಿ ನಡೆಯಲಿರುವ ಫಾರ್ಮುಲಾ ಭಾರತ್ ನಲ್ಲಿಯೂ ಭಾಗವಹಿಸಲಿದೆ. ಮುಂದಿನ ವರ್ಷ ಆಗಸ್ಟ್‌ನಲ್ಲಿ ನಡೆಯಲಿರುವ 'ಫಾರ್ಮುಲಾ ಸ್ಟೂಡೆಂಟ್ ಜರ್ಮನಿ'ಗೂ ತಮ್ಮ ಕಾರನ್ನು ಕೊಂಡೊಯ್ಯುವ ಗುರಿಯನ್ನು ಇಲ್ಲಿನ ವಿದ್ಯಾರ್ಥಿಗಳು ಹೊಂದಿದ್ದಾರೆ.

ಎಲೆಕ್ಟ್ರಿಕ್ ರೇಸಿಂಗ್ ಕಾರು ತಯಾರಿಸಿ ಭಾರೀ ಪ್ರಶಂಸೆಗೆ ಪಾತ್ರವಾದ IITವಿದ್ಯಾರ್ಥಿಗಳು

ಮಹಾಮಾರಿ ಕೋವಿಡ್-19 ಅವಧಿಯಲ್ಲಿ ವಿದ್ಯಾರ್ಥಿಗಳು, ಸಿಮ್ಯುಲೇಶನ್ ಮೂಲಕ ಮೊದಲಿಗೆ ಕಾರನ್ನು ಅಭಿವೃದ್ಧಿಪಡಿಸಲು ಶುರು ಮಾಡಿದರು. ಆ ನಂತರ ಅದನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಹೊಂದಿಸಿಕೊಂಡು ಭೌತಿಕವಾಗಿ ತಯಾರಿಸಲು ಪ್ರಾರಂಭಿಸಿದರು ಎಂದು ಕಾರನ್ನು ಅನಾವರಣಗೊಳಿಸಿದ ಐಐಟಿಯ ನಿರ್ದೇಶಕ ವಿ.ಕಾಮಕೋಟಿ ಮಾಹಿತಿ ನೀಡಿದ್ದಾರೆ. ಈ ಕಾರ್ ಹಿಂದೆ ರೆಡಿ ಮಾಡಿದ ಆವೃತ್ತಿಗಳಿಗಿಂತ ತುಂಬಾ ಸುಧಾರಣೆಯಾಗಿದೆ ಇದನ್ನು ತಯಾರಿಸಲು ವಿದ್ಯಾರ್ಥಿಗಳು ಬರೋಬ್ಬರಿ ಒಂದು ವರ್ಷ ತೆಗೆದುಕೊಂಡರು ಎಂದು ಅವರು ಹೇಳಿದ್ದಾರೆ.

ಮುಂಬರುವ ಪೀಳಿಗೆಯ ವಾಹನಗಳನ್ನು ಹೇಗೆ ಸುಧಾರಿಸಬೇಕೆಂಬುದನ್ನು ಅರ್ಥ ಮಾಡಿಕೊಳ್ಳುವುದು ಈ ಕಾರ್ ತಯಾರಿಕೆ ಹಿಂದಿನ ಪ್ರಮುಖ ಉದ್ದೇಶವಾಗಿದೆ ಎಂದು ಕಾಮಕೋಟಿ ವಿವರಿಸಿದ್ದು, 'ಯಾವುದೇ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದಾಗ ಅದನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಿ, ಅದರ ಸಾಧಕ-ಭಾದಕದ ಬಗ್ಗೆ ತಿಳಿಯಬೇಕು. ಇತರೆ ವಾಹನಗಳು ಹೊಂದಿರುವ ಬ್ಯಾಟರಿ ದಕ್ಷತೆಯಂತೆ ಈ ರೇಸಿಂಗ್ ಕಾರಿಗಾಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಯಾಟರಿ ಎಲ್ಲಾ ಆಯಾಮಗಳಲ್ಲಿಯೂ ಪರೀಕ್ಷೆ ಮಾಡುತ್ತಿದ್ದೇವೆ' ಎಂದು ನಿರ್ದೇಶಕರು ಹೇಳಿದ್ದಾರೆ.

ಪೆಟ್ರೋಲ್, ಡಿಸೇಲ್ ಎಂಜಿನ್ ಚಾಲಿತ ವಾಹನಗಳಿಗೆ ಎಲೆಕ್ಟ್ರಿಕ್ ವಾಹನಗಳು ಪರ್ಯಾಯವಾಗಿವೆ. ಇದಕ್ಕೆ ಬದಲಾಗುವುದು ಎಷ್ಟು ಅಗತ್ಯವೋ ಅಷ್ಟೇ ವೇಗವಾಗಬೇಕು. ಜಾಗತಿಕ EV ಉದ್ಯಮವು ಇನ್ನೂ ತನ್ನ ಆರಂಭಿಕ ಹಂತದಲ್ಲಿದೆ. ಈ ಕ್ಷೇತ್ರದಲ್ಲಿ ಬೆಳವಣಿಗೆ ಹಾಗೂ ತಾಂತ್ರಿಕ ಪ್ರಗತಿಯ ಸಾಮರ್ಥ್ಯವು ದೊಡ್ಡದಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಎಂದು ಅವರು ಹೇಳಿದ್ದು, ಮುಂದಿನ ಹಂತದಲ್ಲಿ ಚಾಲಕ ರಹಿತ ವಾಹನಗಳನ್ನು ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಪಯತ್ನ ಮಾಡಲಾಗುತ್ತದೆ ಎಂದಿದ್ದಾರೆ.

ಇಷ್ಟೇ ಅಲ್ಲದೆ, ವಿದ್ಯಾರ್ಥಿಗಳು 2025ರ ವೇಳೆಗೆ ಚಾಲಕ ರಹಿತ ಕಾರ್ ರೇಸ್ ವಿಭಾಗದಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ. ಈ ರೇಸಿಂಗ್ ಕಾರಿನ 'ಶಕ್ತಿ ಮೈಕ್ರೊಪ್ರೊಸೆಸರ್' ಅನ್ನು ಉಪಯೋಗ ಮಾಡಲಾಗಿದೆ. ಇದನ್ನು ಕಾಮಕೋಟಿ ಮತ್ತು ಅವರ ತಂಡವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ. ಮೈಕ್ರೊಪ್ರೊಸೆಸರ್ ಕಾರಿನಲ್ಲಿರುವ ಪ್ರತಿಯೊಂದು ವಿಭಾಗವನ್ನು ನಿಯಂತ್ರಿಸುತ್ತದೆ. ವಿದ್ಯಾರ್ಥಿಗಳು ಮಾಡಿರುವ ಈ ಕಾರಿನ ಆವಿಷ್ಕಾರವನ್ನು ಕಾಲೇಜಿನ ಉಪನ್ಯಾಸಕರು ಶ್ಲಾಘಿಸಿದ್ದು, ಅವರ ಸಂಶೋಧನೆ ಭವಿಷ್ಯದ ಪೀಳಿಗೆಯ ವಾಹನ ತಯಾರಿಕೆಗೆ ತುಂಬಾ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಕಾರ್ ಅಭಿವೃದ್ಧಿ ಮಾಡಿರುವ ವಿದ್ಯಾರ್ಥಿ ತಂಡದ ನಾಯಕ ಕಾರ್ತಿಕ್ ಕರುಮಂಚಿ ಮಾತನಾಡಿ, ಸುರಕ್ಷಿತ, ಸುಸ್ಥಿರ ಮತ್ತು ಎಲ್ಲರ ವಿಶ್ವಾಸಾರ್ಹ ಇವಿ ನಿರ್ಮಿಸಲು ನಮ್ಮ ಗಮನವನ್ನು ಹರಿಸಲಾಗಿದೆ. ಇವಿ ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳಿಗೆ ನವೀನ ಪರಿಹಾರ ನೀಡಲು ತಂಡವು ಪ್ರಯತ್ನಿಸಿತು. ಬ್ಯಾಟರಿಯ ಥರ್ಮಲ್ ಮ್ಯಾನೇಜ್ಮೆಂಟ್, ಡೇಟಾ ಲಾಗಿಂಗ್, ಇಂಟರ್ಫೇಸ್ ಮತ್ತು ಬ್ಯಾಟರಿ ಪ್ಯಾಕ್‌ಗಾಗಿ ನಿಖರವಾದ ಸ್ಟೇಟ್-ಆಫ್-ಚಾರ್ಜ್ ಎಸ್ಟಿಮೇಟರ್ ಮೇಲೆ ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಹೇಳಿದ್ದಾರೆ.

ಐಐಟಿ ಮದ್ರಾಸ್ ಮಾತ್ರವಲ್ಲದೇ ಕರ್ನಾಟಕದ ವಿದ್ಯಾರ್ಥಿಗಳು ಸಹ ಇಂತಹ ಪ್ರಯತ್ನವನ್ನು ಮಾಡಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಶಿವಮೊಗ್ಗದ ಜೆಎನ್​ಎನ್​ಸಿಸಿ ಎಂಜಿನಿಯರಿಂಗ್​ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸಿತ್ತು. ಹಳೆಯ ಮಾರುತಿ 800 ಕಾರನ್ನು ವಿದ್ಯುತ್ ಚಾಲಿತ ವಾಹನವಾಗಿ ಬದಲಾವಣೆ ಮಾಡಿತ್ತು. ಇದು ಪೂರ್ತಿ ಚಾರ್ಜ್ ಮಾಡಿದರೆ 80 ಕಿಲೋ ಮೀಟರ್ ತನಕ ಚಲಿಸುವ ಸಾಮರ್ಥ್ಯ ಹೊಂದಿತ್ತು. ಏನೇ ಆಗಲಿ ವಿದ್ಯಾರ್ಥಿಗಳು ಇಂತಹ ಹೊಸ ಪ್ರಯತ್ನ ಮಾಡುವುದನ್ನು ಮುಂದುವರಿಸಲಿ.

Most Read Articles

Kannada
English summary
Iit students who built an electric racing car
Story first published: Tuesday, November 29, 2022, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X