ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

ಭಾರತದ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರ ಬಳಕೆಗಾಗಿ ಹೊಸ ಹೊಸ ಕಾರುಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಇತ್ತೀಚಿಗೆ ಮರ್ಸಿಡಿಸ್ ಬೆಂಝ್ ಎಎಂಜಿ ಜಿ 63 ಐಷಾರಾಮಿ ಕಾರುಗಳನ್ನು ಖರೀದಿಸಲಾಗಿತ್ತು.

ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

ಕಳೆದ ವರ್ಷ ಅವರ ಕುಟುಂಬದವರ ಬಳಕೆಗಾಗಿ ಕೆಲವು ದುಬಾರಿ ಕಾರುಗಳನ್ನು ಖರೀದಿಸಲಾಗಿತ್ತು. ಈಗ ಮುಕೇಶ್ ಅಂಬಾನಿಯವರ ಕುಟುಂಬಕ್ಕಾಗಿ ಸಾಲು ಸಾಲು ವಾಹನಗಳನ್ನು ಖರೀದಿಸಲಾಗುತ್ತಿದೆ. ಮುಖೇಶ್ ಅಂಬಾನಿಯವರಿಗಾಗಿ ಖರೀದಿಸಲಾದ ಹೊಸ ಐಷಾರಾಮಿ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

ರೋಲ್ಸ್ ರಾಯ್ಸ್ ಕುಲಿನನ್:

2019ರಲ್ಲಿ ಮುಖೇಶ್ ಅಂಬಾನಿ ಮೊದಲ ಬಾರಿಗೆ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದರು. ಆಗ ಅವರು ಚಾಪೆಲ್ ಬಣ್ಣದ ಕುಲಿನನ್ ಕಾರನ್ನು ಖರೀದಿಸಿದರು. ಅವರ ಕುಟುಂಬವು ಸತತ ಎರಡನೇ ಬಾರಿಗೆ ಹೊಸ ಕುಲಿನನ್ ಕಾರನ್ನು ಖರೀದಿಸಿದೆ. ಈ ಕಾರು ಆರ್ಕ್ಟಿಕ್ ಬಿಳಿ ಬಣ್ಣದಲ್ಲಿರುವುದು ಗಮನಾರ್ಹ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

ಈ ಕಾರು ಮುಖೇಶ್ ಅಂಬಾನಿಯವರ ಮನೆಯಿರುವ ಆಂಟಿಲ್ಲಾ ಪ್ರದೇಶದಲ್ಲಿ ಕಂಡು ಬಂದಿದೆ. ಆಗ ತೆಗೆದ ಫೋಟೋ ಹಾಗೂ ವೀಡಿಯೊ ಈಗಲೂ ಇಂಟರ್ ನೆಟ್'ನಲ್ಲಿ ಲಭ್ಯವಿದೆ. ಈ ಐಷಾರಾಮಿ ಎಸ್‌ಯುವಿಯ ಬೆಲೆ ರೂ.7 ಕೋಟಿಗಳಾಗಿದೆ. ಹೆಚ್ಚುವರಿ ಫೀಚರ್'ಗಳನ್ನು ಸೇರಿಸಿದರೆ ಈ ಕಾರಿನ ಬೆಲೆ ಇನ್ನೂ ಕೆಲವು ಕೋಟಿಗಳನ್ನು ದಾಟುತ್ತದೆ.

ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

ಬೆಂಟ್ಲೆ ಬೆಂಟಾಯ್ಗಾ ಅಪ್ ಡೇಟೆಡ್ ಮಾದರಿ

ರೋಲ್ಸ್ ರಾಯ್ಸ್ ಕುಲಿನನ್ ಎಸ್‌ಯುವಿಯ ನಂತರ ಅಂಬಾನಿಯವರ ಕುಟುಂಬವು ಬೆಂಟ್ಲೆ ಬೆಂಟಾಯ್ಗಾ ಕಾರನ್ನು ಖರೀದಿಸಿತು. ಈ ಕಾರು 2021ರ ಮಾದರಿಯ ಐಷಾರಾಮಿ ಕಾರು. ಕಂಪನಿಯು ಈ ಕಾರ್ ಅನ್ನು ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಿತು. ಅಂಬಾನಿ ಕುಟುಂಬವು ಬೆಂಟ್ಲಿ ಕಂಪನಿಯ ಹಲವು ಕಾರುಗಳನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

2021ರ ಬೆಂಟ್ಲಿ ಬೆಂಟಾಯ್ಗಾ ಕಾರಿನ ಬೆಲೆ ಸುಮಾರು ರೂ.4 ಕೋಟಿಗಳಾಗಿದೆ. ಅಂಬಾನಿ ಕುಟುಂಬವು ಖರೀದಿಸಿರುವ ಕಾರಿನ ನಿಖರವಾದ ಬೆಲೆಯ ಬಗ್ಗೆ ತಿಳಿದು ಬಂದಿಲ್ಲ. ಈ ಕಾರು ವಿ 8 ಡೀಸೆಲ್ ಎಂಜಿನ್ ಹೊಂದಿರುವ ಬೆಂಟ್ಲಿ ಬೆಂಟಾಯ್ಗಾ ಆಗಿರಬಹುದು ಎಂದು ಊಹಿಸಲಾಗಿದೆ.

ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

ಈ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸುವ ಮುನ್ನವೇ ಅಂಬಾನಿ ಕುಟುಂಬವು ಖರೀದಿಸಿತು. ಈ ಕಾರು ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಸೆರಾಟಿ ಲೆವಾಂಟೆ:

ಮಸೆರಾಟಿ ಲೆವಾಂಟೆ ಐಷಾರಾಮಿ ಎಸ್‌ಯುವಿಯಯನ್ನು ಮುಖೇಶ್ ಅಂಬಾನಿ ಕುಟುಂಬವು ಹೊಸದಾಗಿ ಖರೀದಿಸಿದೆ. ಲೆವಾಂಟೆ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಐಷಾರಾಮಿ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯು ಮುಖೇಶ್ ಅಂಬಾನಿಯವರ ಮನೆಯ ಬಳಿ ಕಾಣಿಸಿಕೊಂಡಿದೆ.

ಮತ್ತಷ್ಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಮುಖೇಶ್ ಅಂಬಾನಿ

ಸಾರ್ವಜನಿಕರು ಈ ಕಾರನ್ನು ಮಧ್ಯರಾತ್ರಿಯಲ್ಲಿ ನೋಡಿದ್ದಾರೆ. 2021ರ ಮಸೆರಾಟಿ ಲೆವಾಂಟೆ ಎಸ್‌ಯುವಿಯ ಆರಂಭಿಕ ಬೆಲೆ ರೂ.2 ಕೋಟಿಗಳಾಗಿದೆ.ವರದಿಗಳ ಪ್ರಕಾರ ಈ ಎಸ್‌ಯುವಿಯನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Mukhesh Ambani family buys few more luxury SUVs. Read in Kannada.
Story first published: Thursday, February 4, 2021, 21:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X