ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಮರಗದ ನಾಣ್ಯಂ ಎಂಬ ತಮಿಳು ಚಿತ್ರದಲ್ಲಿ ಐರನ್ ಕಿಂಗ್‌ ರಕ್ಷಣೆಯಲ್ಲಿರುವ ಪಚ್ಚೆ ನಾಣ್ಯವನ್ನು ಮುಟ್ಟುವವರನ್ನು ಚಾಲಕ ರಹಿತ ಟ್ರಕ್‌ ಬೆನ್ನಟ್ಟಿ ಕೊಲ್ಲುತ್ತದೆ. ತುಕ್ಕು ಹಿಡಿದ ಆ ಹಳೆಯ ಟ್ರಕ್‌ನ ಪರದೆಯ ಮೇಲೆ ಬರುವ ದೃಶ್ಯಗಳು ಮೈ ಜುಮ್ ಎನಿಸುವಂತೆ ಮಾಡುತ್ತವೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಆದರೆ ನಿಜ ಜೀವನದಲ್ಲಿ ರಸ್ತೆಯಲ್ಲಿ ಸಂಚರಿಸುವ ಸಾಮಾನ್ಯ ಟ್ರಕ್ ನಮ್ಮನ್ನು ಭಯ ಬೀಳಿಸುವುದಿಲ್ಲ. ಆದರೆ ಕೆಲವರು ರಸ್ತೆಯಲ್ಲಿ ಸಂಚರಿಸುವ ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯಭೀತರಾಗುತ್ತಾರೆ. ಆ ರೀತಿ ಟ್ರಕ್ ನೋಡಿ ಭಯ ಪಟ್ಟರೆ ಅಂತಹವರು ಸೆಮಿಯಾಕೋಫೋಬಿಯಾದಿಂದ ಬಳಲುತ್ತಿದ್ದಾರೆ ಎಂದರ್ಥ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಸೆಮಿಯೊಕೊಫೋಬಿಯಾ ಎಂಬುದು ಹಠಾತ್ ಗ್ರಹಿಸಲಾಗದ ಭಯಕ್ಕೆ ನೀಡಲಾಗುವ ಹೆಸರು. ನಮ್ಮಲ್ಲಿ ಹಲವರು ಸೆಮಿಯಾಕೋಫೋಬಿಯಾದಿಂದ ಬಳಲುತ್ತಿದ್ದಾರೆ. ಟ್ರಕ್ ಅವರ ಬಳಿ ಬಂದಾಗ, ಟ್ರಕ್‌ನ ಮುಂದೆ, ಟ್ರಕ್‌ನ ಹಿಂದೆ ಅವರು ಚಲಿಸಿದಾಗ ಇದ್ದಕ್ಕಿದ್ದಂತೆ ಹೆಚ್ಚು ಉದ್ವೇಗವನ್ನು ಅನುಭವಿಸುತ್ತಾರೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಕೆಲವೊಮ್ಮೆ ಟ್ರಕ್ ಅವರಿಂದ ದೂರದಲ್ಲಿದ್ದರೂ ಭಯಭೀತರಾಗುತ್ತಾರೆ. ಟ್ರಕ್‌ಗಳಿಂದ ಸಂಭವಿಸುವ ಅಪಘಾತಗಳ ಸುದ್ದಿ ಸೆಮಿಯೊಕೊಫೋಬಿಯಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಟ್ರಕ್‌ಗಳ ತೂಕ, ಬೃಹತ್ ಗಾತ್ರ ಕೆಲವು ಜನರಲ್ಲಿ ಸೆಮಿಯಾಕೋಫೋಬಿಯಾವನ್ನುಂಟು ಮಾಡುತ್ತದೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಟ್ರಕ್‌ಗಳಿಗೆ ಹೋಲಿಸಿದರೆ ಕಾರುಗಳು, ದ್ವಿಚಕ್ರ ವಾಹನಗಳು ಕಡಿಮೆ ತೂಕವನ್ನು ಹೊಂದಿರುತ್ತವೆ. ಜೊತೆಗೆ ಚಿಕ್ಕ ಗಾತ್ರವನ್ನು ಹೊಂದಿರುತ್ತವೆ. ಇದರಿಂದ ಕೆಲವು ಕಾರು ಹಾಗೂ ದ್ವಿಚಕ್ರ ವಾಹನಗಳ ಚಾಲಕರಿಗೂ ಟ್ರಕ್‌ಗಳ ಬಳಿ ಚಾಲನೆ ಮಾಡುವಾಗ ಉದ್ವಿಗ್ನತೆ ಉಂಟಾಗುತ್ತದೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಟ್ರಕ್‌ಗಳಿಂದ ಉಂಟಾಗುವ ಅಪಘಾತಗಳಿಗೆ ಹಲವು ಕಾರಣಗಳಿವೆ. ಸಾಮಾನ್ಯವಾಗಿ ಟ್ರಕ್‌ಗಳ ಚಾಲಕರು ಎಲ್ಲ ಸಮಯದಲ್ಲೂ ಇತರ ವಾಹನ ಸವಾರರನ್ನು ಗಮನಿಸುವುದಿಲ್ಲ. ಟ್ರಕ್‌ಗಳಲ್ಲಿರುವ ರೇರ್ ವೀವ್ ಮಿರರ್'ಗಳು ಟ್ರಕ್ ಚಾಲಕರಿಗೆ ಹಿಂದೆ ಬರುತ್ತಿರುವ ವಾಹನಗಳನ್ನು ನೋಡಲು ಸಹಾಯ ಮಾಡುತ್ತವೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಆದರೆ ಈ ರೇರ್ ವೀವ್ ಮಿರರ್'ಗಳು ಕೆಲವು ಭಾಗಗಳನ್ನು ಒಳಗೊಂಡಿರುವುದಿಲ್ಲ. ಹೀಗಾಗಿ ಟ್ರಕ್ ಚಾಲಕರು ಅಂತಹ ಸ್ಥಳಗಳತ್ತ ಹಿಂತಿರುಗಿ ನೋಡಬೇಕಾಗುತ್ತದೆ. ಅಂತಹ ಸ್ಥಳಗಳನ್ನು ಬ್ಲೈಂಡ್ ಸ್ಪಾಟ್ ಎಂದು ಕರೆಯಲಾಗುತ್ತದೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಇದರಿಂದ ಕೆಲವೊಮ್ಮೆ ಟ್ರಕ್ ಚಾಲಕರು ಜನರನ್ನು ಗಮನಿಸದೇ ಟ್ರಕ್ ಅನ್ನು ತಿರುಗಿಸುತ್ತಾರೆ. ಇದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ. ಟ್ರಕ್‌ಗಳಿಂದ ಅಪಘಾತವಾಗಲು ಟ್ರಕ್ ಚಾಲಕರ ನಿದ್ರಾ ಹೀನತೆ, ನಿರ್ಲಕ್ಷ್ಯವೂ ಸಹ ಕಾರಣವಾಗುತ್ತವೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಟ್ರಕ್‌ಗಳೊಂದಿಗೆ ರಸ್ತೆಯನ್ನು ಹಂಚಿಕೊಳ್ಳುವುದು ಹೇಗೆ?

ಟ್ರಕ್‌ಗಳಿಗೆ ಪ್ರತ್ಯೇಕ ರಸ್ತೆ ಇದ್ದರೆ ಚೆನ್ನಾಗಿರುತ್ತದೆ ಎಂಬುದು ಹಲವರ ಅಭಿಪ್ರಾಯ. ಆದರೆ ಅಂತಹ ಯೋಜನೆಗಳು ಭಾರತದಂತಹ ದೇಶಗಳಲ್ಲಿ ಜಾರಿಗೆ ಬರಲು ಹಲವು ಸಮಯ ಬೇಕಾಗುತ್ತದೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಸದ್ಯಕ್ಕೆ ಟ್ರಕ್‌ಗಳೊಂದಿಗೆ ಸುರಕ್ಷಿತವಾಗಿ ರಸ್ತೆ ಹಂಚಿಕೊಳ್ಳುವುದೇ ಸುರಕ್ಷಿತ ಮಾರ್ಗವಾಗಿದೆ. ಟ್ರಕ್‌ಗಳಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸಲು ವಿವಿಧ ಮಾರ್ಗಗಳಿವೆ. ಟ್ರಕ್‌ಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಆದ್ದರಿಂದ ಟ್ರಕ್‌ಗಳು ಚಲಿಸಲು ಹಾಗೂ ಅವುಗಳನ್ನು ನಿಲ್ಲಿಸಲು ಹೆಚ್ಚು ಸ್ಥಳಾವಕಾಶ ಬೇಕಾಗುತ್ತದೆ. ಟ್ರಕ್‌ಗಳನ್ನು ದಾಟಿ ಮುಂದೆ ಹೋಗಲು ಸಮಯ ಬೇಕಾಗುತ್ತದೆ. ಹಾಗೆಯೇ ಟ್ರಕ್‌ಗಳಿಗೆ ಕುರುಡುತನವೂ ಹೆಚ್ಚು.

ಟ್ರಕ್‌ಗಳನ್ನು ನೋಡಿ ಇದ್ದಕ್ಕಿದ್ದಂತೆ ಭಯ ಉಂಟಾಗಲು ಕಾರಣಗಳಿವು

ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಜಾಗರೂಕತೆ ವಹಿಸಬೇಕಾಗುತ್ತದೆ. ಜಾಗರೂಕತೆ ವಹಿಸುವುದರಿಂದ ಟ್ರಕ್‌ಗಳಿಂದಾಗುವ ಅಪಘಾತಗಳನ್ನು ತಪ್ಪಿಸಬಹುದು.

Most Read Articles

Kannada
English summary
Reasons for getting tensed after seeing trucks. Read in Kannada.
Story first published: Wednesday, June 16, 2021, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X