ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಸಿನಿಮಾ ಸೆಲಬ್ರಿಟಿಗಳು ಮಾತ್ರವಲ್ಲದೇ ಕ್ರಿಕೆಟಿಗರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಅದರಲ್ಲಿ ಟೀಂ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಅವರಿಗೂ ಮೊದಲಿಂದಲೂ ಕಾರುಗಳ ಮೇಲೆ ಹೆಚ್ಚು ಕ್ರೇಜ್. ಇವರ ಬಳಿ ಸೂಪರ್‌ಕಾರ್‌ನಿಂದ ದುಬಾರಿ ಐಷಾರಾಮಿ ಎಸ್‍ಯುವಿ ಕಾರುಗಳು ಕೂಡ ಇವೆ.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ವಿರಾಟ್ ಕೊಹ್ಲಿ ಭಾರತದಲ್ಲಿ ಆಡಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ದೀರ್ಘಕಾಲದಿಂದ ಇದ್ದಾರೆ. ಇದರಿಂದ ಅವರು ಈ ಹಿಂದೆ ಟಾಪ್-ಆಫ್-ಲೈನ್ ಆಡಿ ಕಾರುಗಳನ್ನು ಪಡೆದಿದ್ದಾರೆ. ಕೊಹ್ಲಿಯ ಗ್ಯಾರೇಜ್‌ನಲ್ಲಿ ಇತ್ತೀಚಿನ ಸೇರ್ಪಡೆಗಳೆಂದರೆ ಆಡಿ ಇ-ಟ್ರಾನ್ ಮತ್ತು ಇ-ಟ್ರಾನ್ ಜಿಟಿ ಆಗಿದೆ. ಇತ್ತೀಚೆಗೆ ಬಹಿರಂಗಗೊಂಡ ಪ್ರತ್ಯೇಕ ವೀಡಿಯೊಗಳಲ್ಲಿ, ವಿರಾಟ್ ಕೊಹ್ಲಿ ನೀಲಿ ಬಣ್ಣದ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಮತ್ತು ಕೆಂಪು ಬಣ್ಣದ ಆಡಿ ಇ-ಟ್ರಾನ್ ಜಿಟಿ ನಾಲ್ಕು-ಡೋರಿನ ಕೂಪ್‌ನಲ್ಲಿ ಸವಾರಿ ಮಾಡಿರುವುದನ್ನು ಕಾಣಬಹುದು.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಈ ಎರಡೂ ಕಾರುಗಳು ಆಡಿ ಇಂಡಿಯಾದ ಮೂಲ ಕಂಪನಿಯಾಗಿರುವ ಸ್ಕೋಡಾ ಆಡಿ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆಡಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ಕೊಹ್ಲಿ ಅವರ ಸುದೀರ್ಘ ಒಡನಾಟವನ್ನು ಗಮನಿಸಿದರೆ, ಈ ಎರಡೂ ಕಾರುಗಳು ಅವರಿಗೆ ಬಹುಮಾನವನ್ನು ನೀಡಿರಬಹುದು ಎಂದು ವರದಿಗಳಾಗಿದೆ,

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಕೊಹ್ಲಿ ಕಾಣಿಸಿಕೊಂಡಿರುವ ನೀಲಿ-ಬಣ್ಣದ ಆಡಿ ಇ-ಟ್ರಾನ್ ಎಸ್‌ಯುವಿ ಶ್ರೇಣಿಯ ಅಗ್ರಸ್ಥಾನದಲ್ಲಿರುವ ಇ-ಟ್ರಾನ್ 55 ರೂಪಾಂತರವಾಗಿದೆ, ಇದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳ ಸಂಯೋಜನೆಯೊಂದಿಗೆ ಆಲ್-ವೀಲ್-ಡ್ರೈವ್ ವಿನ್ಯಾಸವನ್ನು ಪಡೆಯುತ್ತದೆ. ಇ-ಟ್ರಾನ್ ಎಸ್‍ಯುವಿಯ ಸಂಯೋಜಿತ ಮೋಟಾರ್‌ಗಳು 402 ಬಿಹೆಚ್‍ಪಿ ಪವರ್ ಮತ್ತು 664 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಇ-ಟ್ರಾನ್ 55 ರೂಪಾಂತರವು 95 kWh ಲಿಥಿಯಂ-ಐಯಾನ್ ಬ್ಯಾಟರಿಯು 484 ಕಿ.ಮೀ ಗರಿಷ್ಠ ರೇಂಜ್ ಅನ್ನು ನೀಡುತ್ತದೆ. ಎಸ್‍ಯುವಿಯ ಈ ನಿರ್ದಿಷ್ಟ ರೂಪಾಂತರದ ಬೆಲೆಯು ರೂ,1.18 ಕೋಟಿ ಆಗಿದೆ. ಇನ್ನು ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಮಾರಾಟವಾಗುತ್ತಿದೆ.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಇ-ಟ್ರಾನ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಜೊತೆ ಬ್ರೇಕ್ ಅಸಿಸ್ಟ್, ಲೆನ್ ಡಿಪಾರ್ಚರ್ ವಾರ್ನಿಂಗ್, ಪಾರ್ಕ್ ಅಸಿಸ್ಟ್ ಫಂಕ್ಷನ್, 8 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಸೇರಿದಂತೆ ಹಲವು ಸುರಕ್ಷಾಟ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ವೀಡಿಯೊದಲ್ಲಿ ಕಾಣುವ ಕೆಂಪು ಬಣ್ಣದ ಆಡಿ ಇ-ಟ್ರಾನ್ ಜಿಟಿಯು ಟಾಪ್-ವೆರಿಯೆಂಟ್ ಆಗಿದೆ. ಇ-ಟ್ರಾನ್ ಜಿಟಿ ಆರ್‌ಎಸ್ . ಮುಂಭಾಗ ಮತ್ತು ಹಿಂಭಾಗದ ಎರಡೂ ಆಕ್ಸಲ್‌ಗಳಲ್ಲಿ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ, ಇ-ಟ್ರಾನ್ ಜಿಟಿ ಆರ್‌ಎಸ್ ಆಲ್-ವೀಲ್ ಡ್ರೈವ್ ಅನ್ನು ಪಡೆಯುತ್ತದೆ,

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಸಂಯೋಜಿತವಾಗಿ 637 ಬಿಹೆಚ್‌ಪಿ ಪವರ್ ಮತ್ತು 830 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಅಂಕಿಅಂಶಗಳು ಅದನ್ನು ಸೂಪರ್‌ಕಾರ್ ಪ್ರದೇಶದಲ್ಲಿ ಇರಿಸಿದೆ. ಇನ್ನು ಈ ಕಾರು 84 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಸಹ ಹೊಂದಿದೆ, ಇದು ಗರಿಷ್ಠ 472 ಕಿಮೀ ರೇಂಜ್ ಅನ್ನು ನೀಡುತ್ತದೆ.ಈ ರೂಪಾಂತರದ ಬೆಲೆ ರೂ.2.16 ಕೋಟಿಯಾಗಿದೆ.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಈ ಕಾರ್ ಅನ್ನು ಕಂಪ್ಲೀಟ್ಲಿ ಬಿಲ್ಟ್ ಯುನಿಟ್ (ಸಿಬಿಯು) ಆಗಿ ಮಾರಾಟ ಮಾಡಲಾಗುತ್ತದೆ. ಜರ್ಮನಿಯ ಆಡಿ ಬೊಲಿಂಗರ್ ಹಾಫ್ ಘಟಕದಲ್ಲಿ ಈ ಕಾರನ್ನು ಉತ್ಪಾದಿಸಲಾಗಿದೆ.ಆಡಿ ಇ-ಟ್ರಾನ್ ಜಿಟಿ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಯಿತು. ಈ ಕೂಪೆ ಕಾರ್ ಅನ್ನು ಇ-ಟ್ರಾನ್ ಹಾಗೂ ಆರ್‌ಎಸ್ ಇ-ಟ್ರಾನ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಆಡಿ ಇ-ಟ್ರಾನ್ ಜಿಟಿ ಕಾರು 4,989 ಎಂಎಂ ಉದ್ದ, 1,964 ಎಂಎಂ ಅಗಲ, 1,418 ಎಂಎಂ ಎತ್ತರ ಹಾಗೂ 2,903 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಈ ಕಾರು ಐಬಿಜ್ ವೈಟ್, ಅಜುರೆ ಬ್ಲೂ, ಫ್ಲೋರಿಸ್ಟ್ ಸಿಲ್ವರ್, ಕೆಮೊರಾ ಗ್ರೇ, ಮಿಥೋಸ್ ಬ್ಲಾಕ್, ಸುಜುಕಿ ಗ್ರೇ, ಟ್ಯಾಕ್ಟಿಕಲ್ ಗ್ರೀನ್, ಟ್ಯಾಂಗೋ ರೆಡ್ ಹಾಗೂ ಡೇಟೋನಾ ಗ್ರೇ ಎಂಬ ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ಇನ್ನು ಸೆಲೆಬ್ರಿಟಿ ಪ್ರಚಾರ ಚಟುವಟಿಕೆಗಳ ಭಾಗವಾಗಿ ಆಡಿ ತನ್ನ ಕಾರುಗಳನ್ನು ಸೆಲೆಬ್ರಿಟಿಗಳಿಗೆ ಬಹುಮಾನ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆಡಿ ಕಾರುಗಳ ಶ್ರೇಣಿಯನ್ನು ಹೊಂದಿರುವ ವಿರಾಟ್ ಕೊಹ್ಲಿಯಲ್ಲದೆ, ಒಂದೆರಡು ಬಾಲಿವುಡ್ ಸೆಲೆಬ್ರಿಟಿಗಳಾದ ಕರಣ್ ಜೋಹರ್ ಮತ್ತು ಕಿಯಾರಾ ಅಡ್ವಾಣಿ ಕೂಡ ಜರ್ಮನ್ ಕಾರು ತಯಾರಕರಿಂದ ಆಡಿ ಎ8 ಎಲ್ ಅನ್ನು ಪಡೆದಿದ್ದರು.

ವಿರಾಟ್ ಕೊಹ್ಲಿ ಕಾರು ಕಲೆಕ್ಷನ್​ಗೆ ಸೇರ್ಪಡೆಯಾದ ಐಷಾರಾಮಿ ಆಡಿ ಎಲೆಕ್ಟ್ರಿಕ್ ಕಾರುಗಳು

ವಿರಾಟ್ ಕೊಹ್ಲಿ ಬಳಿ ಆಡಿ R8, R8 LMX, ಆರ್8 V10 Plus, A8 L W12 Quattro, RS5, S6, Q7 ಮತ್ತು Q8 ನಂತಹ ಕಾರುಗಳನ್ನು ಹೊಂದಿದೆ. ಇದರೊಂದಿಗೆ ರೇಂಜ್ ರೋವರ್ ವೋಗ್, ಲ್ಯಾಂಬೂರ್ಗಿನಿ ಗಲ್ಲಾರ್ಡೊ, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮತ್ತು ಬೆಂಟ್ಲಿ ಫ್ಲೈಯಿಂಗ್ ಸ್ಪರ್‌ನಂತಹ ಕೆಲವು ಇತರ ಐಷಾರಾಮಿ ಕೊಡುಗೆಗಳನ್ನು ಹೊಂದಿದ್ದಾರೆ.

Most Read Articles

Kannada
English summary
Virat kohli gets new audi e tron and e tron gt electric cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X