ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಪಶ್ಚಿಮ ಬಂಗಾಳ ಸಾರಿಗೆ ನಿಗಮ ಹಾಗೂ ಬಂಗಾಳ ಅನಿಲ ನಿಗಮ ಲಿಮಿಟೆಡ್ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದಿಂದ ಸಿಎನ್‌ಜಿಯಿಂದ ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಡೀಸೆಲ್ ಬಸ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗಲಿದೆ.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಈ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳ ಸಾರಿಗೆ ಸಚಿವ ಫರ್ಹತ್ ಹಕೀಮ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ, ಸಿಎನ್‌ಜಿ ಇಂಧನಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಿ‌ಎನ್‌ಜಿ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಸಾರಿಗೆ ನಿಗಮವು ನಿಧಾನವಾಗಿ ತನ್ನ ಡೀಸೆಲ್ ಬಸ್ಸುಗಳನ್ನು ಸಿಎನ್‌ಜಿಗೆ ಬದಲಿಸಲಿದೆ.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ನಾವು ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಡಿಪೋಗಳಲ್ಲಿ ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸುತ್ತೇವೆ. ಖಾಸಗಿ ಬಸ್ ಮಾಲೀಕರಿಗೆ ಸಿಎನ್‌ಜಿ ಇಂಧನದ ಮೂಲಕ ಬಸ್‌ಗಳನ್ನು ಚಾಲನೆ ಮಾಡಲು ನಾವು ಪ್ರೋತ್ಸಾಹ ನೀಡುತ್ತೇವೆ ಎಂದು ಫರ್ಹತ್ ಹಕೀಮ್ ಹೇಳಿದರು.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಬಸ್‌ಗಳಿಗಾಗಿ ಇನ್ನು 6 ತಿಂಗಳಲ್ಲಿ ಸಿಎನ್‌ಜಿ ನಿಲ್ದಾಣಗಳನ್ನು ಸ್ಥಾಪಿಸುವ ನಿರೀಕ್ಷೆಗಳಿವೆ. ಈಗ ಈ ಹೊಸ ತಂತ್ರಜ್ಞಾನವನ್ನುಅನ್ವೇಷಿಸಲಾಗುತ್ತಿದೆ.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಬದಲಿಸಲು ರೂ.30 ಸಾವಿರ ವೆಚ್ಚವಾಗುತ್ತದೆ. ಆದರೆ ಡೀಸೆಲ್ ಚಾಲಿತ ಬಸ್‌ಗಳನ್ನು ಸಿಎನ್‌ಜಿ ಚಾಲಿತ ಬಸ್‌ಗಳಾಗಿ ಬದಲಿಸಲು ಇದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಕಡಿಮೆ ವೆಚ್ಚದಲ್ಲಿ ಡೀಸೆಲ್ ಬಸ್‌ಗಳನ್ನು ಸಿಎನ್‌ಜಿಗೆ ಬದಲಿಸುವುದು ಹೇಗೆ ಎಂಬ ಬಗ್ಗೆ ಅನ್ವೇಷಿಸಲಾಗುತ್ತಿದೆ ಎಂದು ಫರ್ಹತ್ ಹಕೀಮ್ ತಿಳಿಸಿದರು. ಈ ಹಿಂದೆ ದೆಹಲಿಯಲ್ಲಿ ಡೀಸೆಲ್ ಬಸ್‌ಗಳನ್ನು ಸಿಎನ್‌ಜಿ ಬಸ್‌ಗಳಾಗಿ ಬದಲಿಸಲಾಗಿದೆ.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಅಂದಿನಿಂದ ದೆಹಲಿಯಲ್ಲಿ ಸಿಎನ್‌ಜಿ ಬಸ್‌ಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಲಾಗುತ್ತಿದೆ. ಈಗ ಪಶ್ಚಿಮ ಬಂಗಾಳ ಸಾರಿಗೆ ನಿಗಮ ಹಾಗೂ ಬಂಗಾಳ ಅನಿಲ ನಿಗಮ ಲಿಮಿಟೆಡ್ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿವೆ.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಈ ಒಪ್ಪಂದದನ್ವಯ ಬಂಗಾಳ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಡಿಪೋಗಳಲ್ಲಿ ಸಿಎನ್‌ಜಿ ನಿಲ್ದಾಣಗಳನ್ನು ಸ್ಥಾಪಿಸಿ ಬಸ್‌ಗಳಿಗೆ ಸಿಎನ್‌ಜಿ ಪೂರೈಸಲಿದೆ. ನಾವು ಮೊದಲಿನಿಂದಲೂ ಎಲೆಕ್ಟ್ರಿಕ್ ಬಸ್ಸುಗಳ ಚಲನೆಯತ್ತ ಗಮನ ಹರಿಸಿದ್ದೇವೆ.

ಸಿ‌ಎನ್‌ಜಿ ಬಸ್‌ಗಳಾಗಿ ಬದಲಾಗಲಿವೆ ಡೀಸೆಲ್ ಬಸ್‌ಗಳು

ಈಗ ಸಿಎನ್‌ಜಿ ಬಸ್‌ಗಳ ಮೇಲೆ ಗಮನ ಹರಿಸಲಾಗಿದೆ. ಈ ಬಸ್ಸುಗಳು ಪಶ್ಚಿಮ ಬಂಗಾಳದ ಪರಿಸರವನ್ನು ರಕ್ಷಿಸುತ್ತವೆ ಎಂದು ಫರ್ಹತ್ ಹಕೀಮ್ ತಿಳಿಸಿದರು. ಡೀಸೆಲ್ ಬಸ್‌ಗಳನ್ನು ಸಿಎನ್‌ಜಿಗೆ ಬದಲಿಸುವುದು ನಿಜಕ್ಕೂ ಉತ್ತಮ ನಿರ್ಧಾರ. ಈ ಬಸ್ಸುಗಳು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ವಾಯು ಮಾಲಿನ್ಯ ಸಮಸ್ಯೆಗೂ ಪರಿಹಾರವಾಗಬಲ್ಲವು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
West Bengal transport corporation to convert diesel buses into CNG buses. Read in Kannada.
Story first published: Wednesday, June 23, 2021, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X