ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಹೊಸ ಬೈಕ್‌ಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ವಿಭಾಗಗಳಲ್ಲಿ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ಸಹಾಯವಾಗುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಮಾದರಿಗಳಲ್ಲಿ ಹಿಮಾಲಯನ್ ಬೈಕಿನ ಹೊಸ ಸ್ಕ್ರ್ಯಾಂಬ್ಲರ್ ವೆರಿಯೆಂಟ್ ಕೂಡ ಒಳಗೊಂಡಿದೆ. ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಪರೀಕ್ಷಿಸುವಾಗ ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಡೀಲರ್‌ಶಿಪ್ ಯಾರ್ಡ್‌ನಲ್ಲಿರುವ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ತಲುಪಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದೀಗ ರಾಯಲ್ ಎನ್‍ಫೀಲ್ಡ್ ಕಂಪನಿಯು ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ಪ್ರಕಾರ, ಹಿಮಾಲಯನ್ ಆಧಾರಿತ ಸ್ಕ್ರ್ಯಾಂಬ್ಲರ್ ಶೈಲಿಯ ಸ್ಕ್ರಾಮ್ 411 ಬೈಕ್ ಅನ್ನು ಈ ವರ್ಷದ ಮಾರ್ಚ್ ತಿಂಗಳ 15 ರಂದು ಬಿಡುಗಡೆಯಾಗಗಲಿದೆ. ರಸ್ತೆ-ಆಧಾರಿತ ಮತ್ತು ಹೆಚ್ಚು ಕೈಗೆಟುಕುವ ಮಾದರಿಯು ವಿನ್ಯಾಸದಂತಹ ಹೆಚ್ಚು ಸ್ಕ್ರ್ಯಾಂಬ್ಲರ್ ಮಾದರಿಯನ್ನು ಹೊಂದಿರುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತದೆ. ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್‌ನ ಬ್ರೋಷರ್ ಸ್ಕ್ಯಾನ್‌ಗಳು ವೆಬ್‌ನಲ್ಲಿ ಕಾಣಿಸಿಕೊಂಡಿವೆ. ಸೋರಿಕೆಯಾದ ಚಿತ್ರಗಳು ಇದು ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಹಿಮಾಲಯನ್‌ನ ಹೆಚ್ಚು ಕೈಗೆಟುಕುವ ರೂಪಾಂತರವಾಗಿದೆ ಎಂದು ಖಚಿತಪಡಿಸುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಸ್ಕ್ರಾಮ್ 411 ಬೈಕ್ ವಿಂಡ್‌ಸ್ಕ್ರೀನ್, ಎತ್ತರಿಸಿದ ಫ್ರಂಟ್ ಫೆಂಡರ್ ಮತ್ತು ಡೆಡಿಕೇಟೆಡ್ ಫ್ರಂಟ್ ಮತ್ತು ರಿಯರ್ ರಾಕ್‌ಗಳಂತಹ ವೈಶಿಷ್ಟ್ಯಗಳನ್ನು ಕಳೆದುಕೊಳ್ಳುತ್ತದೆ. ಹಿಮಾಲಯಕ್ಕೆ ಹೋಲಿಸಿದರೆ, ಇದು ಮುಂಭಾಗದಲ್ಲಿ ಕಾಂಪ್ಯಾಕ್ಟ್ ಟ್ಯಾಂಕ್ ಹೊದಿಕೆಗಳನ್ನು ಒಳಗೊಂಡಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಹೊಸ ಅಡ್ವೆಂಚರ್ ಬೈಕಿನಲ್ಲಿ ಚಿಕ್ಕದಾದ 19-ಇಂಚಿನ ಮುಂಭಾಗದ ವ್ಹೀಲ್ (ಬದಲಿಗೆ 21-ಇಂಚಿನ ಯುನಿಟ್) ಮತ್ತು ವಿಭಿನ್ನವಾಗಿ ವಿನ್ಯಾಸಗೊಳಿಸಲಾದ ಟರ್ನ್ ಇಂಡೀಕೆಟರ್ಸ್ ಗಳನ್ನು ಹೊಂದಿದೆ.ಹೆಚ್ಚಿನ ವಿನ್ಯಾಸದ ಅಂಶಗಳನ್ನು ಹಿಮಾಲಯದಿಂದ ಎರವಲು ಪಡೆಯಲಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ವೃತ್ತಾಕಾರದ ಹೆಡ್‌ಲ್ಯಾಂಪ್ ಮತ್ತು ರಿಯರ್ ವ್ಯೂ ಮಿರರ್‌ಗಳು, ಅಗಲವಾದ ಹ್ಯಾಂಡಲ್‌ಬಾರ್, ಫೋರ್ಕ್ ಗೈಟರ್‌ಗಳು, ಡ್ಯುಯಲ್ ಪರ್ಪಸ್ ಟೈರ್‌ಗಳೊಂದಿಗೆ ವೈರ್-ಸ್ಪೋಕ್ಡ್ ವೀಲ್‌ಗಳು, ಸ್ಪ್ಲಿಟ್ ಸೀಟ್‌ಗಳು, ಸಿಂಗಲ್ ಪೀಸ್ ಗ್ರಾಬ್ ರೈಲ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್‌ನೊಂದಿಗೆ ಅದೇ ರೆಟ್ರೊ ವಿನ್ಯಾಸ ಭಾಷೆಯನ್ನು ಹೊಂದಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬೈಕ್ ತಯಾರಕರು ಹೊಸ ಬಣ್ಣದ ಯೋಜನೆಗಳಲ್ಲಿ ಕೈಗೆಟುಕುವ ರೂಪಾಂತರವನ್ನು ನೀಡಬಹುದು. ವೈಶಿಷ್ಟ್ಯಗಳ ವಿಷಯದಲ್ಲಿ, ಹಿಮಾಲಯನ್ ಸ್ಕ್ರಾಮ್ 411 ನವೀಕರಿಸಿದ ಇನ್ಸ್ ಟ್ರೂಮೆಂಟ್ ಕನ್ಸೋಲ್‌ನೊಂದಿಗೆ ಬರುವ ಸಾಧ್ಯತೆಯಿದೆ. ಆದರೆ ಯುನಿಟ್ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್ ಅನ್ನು ಕಳೆದುಕೊಳ್ಳುತ್ತದೆ. ಇದು ಅಕ್ಸೆಸರೀಸ್ ನೊಂದಿಗೆ ಬರಲಿದೆ.

ಈ ಬದಲಾವಣೆಗಳ ಹೊರತಾಗಿ, ಹೊಸ ಹಿಮಾಲಯದ ಬೈಕಿನ ಅಡ್ವೆಂಚರ್ ಆವೃತ್ತಿಯಿಂದ ತನ್ನ ಮೆಕ್ಯಾನಿಕಲ್ ಮತ್ತು ಇತರ ಟ್ರಿಮ್‌ಗಳನ್ನು ಎರವಲು ಪಡೆಯುತ್ತದೆ. ಇನ್ನು ಆನ್-ರೋಡ್ ಆಧಾರಿತ ಮಾದರಿಯಲ್ಲಿ ಎಕ್ಸಾಸ್ಟ್ ಮತ್ತು ಎತ್ತರ ಹ್ಯಾಂಡಲ್‌ಬಾರ್‌ನೊಂದಿಗೆ ನೇರವಾಗಿ ಕುಳಿತುಕೊಳ್ಳುವಂತಹ ಸೀಟ್ ಪೋಷಿಸನ್ ಅನ್ನು ಒಳಗೊಂಡಿರುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿರುವ ಅದೇ 411ಸಿಸಿ ಸಿಂಗಲ್-ಸಿಲಿಂಡರ್ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್ ಅನ್ನು ಸ್ಕ್ರಾಮ್ 411 ಮಾದರಿಯಲ್ಲಿಯು ಹೊಂದಿರಲಿದೆ. ಈ ಎಂಜಿನ್ 24.3 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಆಗಿ ಸ್ವಿಚ್ ಮಾಡಬಹುದಾದ ಎಬಿಎಸ್ ಅನ್ನು ಹೊಂದಿದೆ. ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ವೆರಿಯೆಂಟ್ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಭಾರತದಲ್ಲಿನ ಅತಿದೊಡ್ಡ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ಈ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್ ರೆಟ್ರೊ-ಶೈಲಿಯ ಸ್ಟ್ರೀಟ್ ಬೈಕ್‌ಗಳಲ್ಲಿ ಪರಿಣತಿ ಹೊಂದಿದ್ದರೂ, ಅದರ ಪೋರ್ಟ್‌ಫೋಲಿಯೊದಲ್ಲಿ ಅಡ್ವೆಂಚರ್ ಹಿಮಾಲಯನ್ ಬೈಕ್ ಅನ್ನು ಹೊಂದಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಭಾರತೀಯ ಮಾರುಕಟ್ಟೆಯ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಅಲ್ಲದೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅತ್ಯಂತ ಅಗ್ಗದ ಅಡ್ವೆಂಚರ್ ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಇದು ಅತ್ಯಂತ ಸಮರ್ಥ ಬೈಕ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಡ್ವೆಂಚರ್ ಬೈಕ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಮಾರಾಟವನ್ನು ಇನ್ನಷ್ಟು ಹೆಚ್ಚಿಸಲು ಈ ಹೊಸ ಸ್ಕ್ರಾಮ್ 411 ನೆರವಾಗುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್, ಕವಾಸಕಿ ವರ್ಸಿಸ್-ಎಕ್ಸ್ 300 ಮತ್ತು ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಮುಂದಿನ ವಾರ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Most Read Articles

Kannada
English summary
New royal enfield scram 411 teased launch date revealed details
Story first published: Tuesday, March 8, 2022, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X