RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಹಲವು ತಿಂಗಳುಗಳಿಂದ ಸೋರಿಕೆಯಾದ ಚಿತ್ರಗಳು ಮತ್ತು ಕಂಪನಿಯ ಟೀಸರ್‌ಗಳಿಂದಲೇ ನಿರೀಕ್ಷೆಗಳನ್ನು ಹೇಚ್ಚಿಸಿದ್ದ ರಾಯಲ್ ಎನ್‌ಫೀಲ್ಡ್ ಅಂತಿಮವಾಗಿ ಕಳೆದ ತಿಂಗಳು ಭಾರತದಲ್ಲಿ ತನ್ನ ಹೊಸ ಹಂಟರ್ 350 ಅನ್ನು ಬಿಡುಗಡೆ ಮಾಡಿತು. ಹಂಟರ್ 350ಗೆ ಯಾವ ಮಟ್ಟಿಗೆ ಕ್ರೇಜ್ ಇದೆ ಎಂಬುದು ಆಗಸ್ಟ್ ತಿಂಗಳ ಮಾರಾಟದಲ್ಲಿ ತಿಳಿದುಬಂದಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಆಗಸ್ಟ್ 7 ರಂದು ಹಂಟರ್ 350 ಬೈಕನ್ನು ಬಿಡುಗಡೆ ಮಾಡಲಾಗಿರುವುದರಿಂದ ಇದು ಪೂರ್ಣ ಪ್ರಮಾಣದ ಮಾರಾಟವನ್ನು ಹೊಂದಿಲ್ಲ. ಇದರ ಹೊರತಾಗಿಯೂ ಹಂಟರ್ 350 ಆಗಸ್ಟ್ 2022 ರಲ್ಲಿ 2ನೇ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‌ಫೀಲ್ಡ್ ಬೈಕ್ ಆಗಿ ಹೊರಹೊಮ್ಮಿದೆ. ಕೇವಲ 796 ಯುನಿಟ್‌ಗಳ ಅಂತರದಿಂದ ಅಗ್ರಸ್ಥಾನವನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಪಡೆದುಕೊಂಡಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಕೆಲವೇ ಯುನಿಟ್‌ಗಳ ಅಂತರದಿಂದಾಗಿ ಹಂಟರ್ ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಯಾಗಿದೆ. ರಾಯಲ್ ಎನ್‌ಫೀಲ್ಡ್‌ ಹಂಟರ್ 350 ಅನ್ನು ರೆಟ್ರೋ ಫ್ಯಾಕ್ಟರಿ, ಮೆಟ್ರೋ ಡ್ಯಾಪರ್ ಮತ್ತು ಮೆಟ್ರೋ ರೆಬೆಲ್‌ನ ಮೂರು ರೂಪಾಂತರಗಳಲ್ಲಿ ಪ್ರಸ್ತುತಪಡಿಸಲಾಗಿದೆ. ರೆಟ್ರೋ ಫ್ಯಾಕ್ಟರಿ ಬೆಲೆ ರೂ. 1,49,900 ಇದ್ದರೇ ಮೆಟ್ರೋ ಡ್ಯಾಪರ್ ಮತ್ತು ಮೆಟ್ರೋ ರೆಬೆಲ್ ಬೆಲೆಗಳು ಕ್ರಮವಾಗಿ ರೂ. 1,63,900 ಮತ್ತು ರೂ. 1,68,900 ಇದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಆಗಸ್ಟ್ 2022 ರಲ್ಲಿ ಹಂಟರ್ 350 ಮಾರಾಟ

ರಾಯಲ್ ಎನ್‌ಫೀಲ್ಡ್ ಆಗಸ್ಟ್ 2022 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಹಂಟರ್ 350 ನ 18,197 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು ಹಂಟರ್‌ನ 78 ಘಟಕಗಳನ್ನು ರಫ್ತು ಮಾಡಿದ್ದರಿಂದ ರಫ್ತು ಕೂಡ ಪ್ರಾರಂಭವಾಗಿದೆ. ಇನ್ನು ರಾಯಲ್ ಎನ್‌ಫೀಲ್ಡ್‌ನ ಅತಿ ಹೆಚ್ಚು ಮಾರಾಟವಾದ ಕ್ಲಾಸಿಕ್ 350 ದೇಶೀಯ ಮಾರುಕಟ್ಟೆಯಲ್ಲಿ 18,993 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಕ್ಲಾಸಿಕ್ ಮತ್ತು ಹಂಟರ್ ಎಂಬ ಎರಡು ಬೈಕ್‌ಗಳ ಒಟ್ಟಾರೆ ಮಾರಾಟವು 37,190 ಯುನಿಟ್‌ಗಳನ್ನು ನೋಂದಾಯಿಸಿವೆ. ಕ್ಲಾಸಿಕ್ 350 ಮಾರಾಟದಲ್ಲಿ ಹಂಟರ್‌ಗಿಂತ ಸ್ವಲ್ಪ ಮುಂದಿದೆ, ಆಗಸ್ಟ್ 2022 ರಲ್ಲಿ 796 ಯುನಿಟ್‌ಗಳ ಅಂತರದಿಂದ ಕ್ಲಾಸಿಕ್ ಅಗ್ರಸ್ಥಾನವನ್ನು ಅಲಂಕರಿಸಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ತನ್ನ ಎಲ್ಲಾ ಮಾದರಿಗಳನ್ನು ಒಳಗೊಂಡ 70,112 ಯುನಿಟ್‌ಗಳನ್ನು ಒಟ್ಟಾರೆಯಾಗಿ ಮಾರಾಟ ಮಾಡಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಈ ಮೂಲಕ ಶೇ 53 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇವುಗಳಲ್ಲಿ ಸುಮಾರು 63 ಸಾವಿರ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದರೇ (61% ಬೆಳವಣಿಗೆ) ಅಂದಾಜು 7 ಸಾವಿರ ಘಟಕಗಳನ್ನು ರಫ್ತು ಮಾಡಲಾಗಿದೆ (6% ಬೆಳವಣಿಗೆ).

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ರಾಯಲ್ ಎನ್‌ಫೀಲ್ಡ್ ಹಂಟರ್ 350 ಅರ್ಬನ್ ಸ್ಕ್ರ್ಯಾಂಬ್ಲರ್ ಆಗಿದ್ದು, ಇದನ್ನು RE ನ J-ಸರಣಿ ಪ್ಲಾಟ್‌ಫಾರ್ಮ್‌ನಲ್ಲಿ ತರಲಾಗಿದೆ. ಇದು ಚಿಕ್ಕದಾದ ವ್ಹೀಲ್‌ಬೇಸ್‌ ಹೊಂದಿದ್ದು, ಮುಂಭಾಗದಲ್ಲಿ 100/80 ರಬ್ಬರ್ ಮತ್ತು ಅದರ ಹಿಂಭಾಗದಲ್ಲಿ 120/80 ಅಳವಡಿಸಲಾಗಿರುವ 17 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಈ ಹಗುರವಾದ ಮತ್ತು ಹೆಚ್ಚು ಸಾಂದ್ರವಾದ ಚೌಕಟ್ಟು ಉತ್ತಮ ಚುರುಕುತನ, ಕುಶಲತೆ ಮತ್ತು ನಗರದ ರಸ್ತೆ ಪರಿಸ್ಥಿತಿಗಳಲ್ಲಿ ಉತ್ತಮ ನಿರ್ವಹಣೆಯನ್ನು ನೀಡುತ್ತದೆ. ವಿನ್ಯಾಸದ ವಿಷಯದಲ್ಲಿ ಹೊಸ ಹಂಟರ್ 350 ರೆಟ್ರೋ ಹ್ಯಾಲೊಜೆನ್ ಟೈಲ್ ಲ್ಯಾಂಪ್, ಓವಲ್ ಆಕಾರದ ಟರ್ನ್ ಸಿಗ್ನಲ್‌ಗಳು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ನೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಪಡೆದಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಹಂಟರ್ ಮೆಟ್ರೋ ಟ್ರಿಮ್ ಡ್ಯುಯಲ್ ಟೋನ್ ಬಣ್ಣಗಳನ್ನು ಪಡೆಯುತ್ತದೆ. ಇದು ರೌಂಡ್ ಆಕಾರದ ಇಂಡಿಕೇಟರ್‌ಗಳು, ಅಗಲ ಮತ್ತು ಉದ್ದವಾದ ಒನ್-ಪೀಸ್ ಸೀಟ್, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಟ್ರಿಪ್ಪರ್ ಸ್ಕ್ರೀನ್‌ನೊಂದಿಗೆ ಮೆಟಿಯರ್ 350 ನಿಂದ ಎರವಲು ಪಡೆದ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಬ್ಲೂಟೂತ್ ಅನ್ನು ಹೊಂದಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 300 ಎಂಎಂ ಮತ್ತು 270 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಮತ್ತು ಕಪ್ಪು ಬಣ್ಣದ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ. ಎಲ್ಇಡಿ ಇಂಡಿಕೇಟರ್‌ಗಳು, ಆಕರ್ಷನೀಯ ಟೈಲ್, ಸೀಟ್, ಬಾರ್-ಎಂಡ್ ಮಿರರ್‌ಗಳು ಇತ್ಯಾದಿಗಳನ್ನು ಪಡೆದುಕೊಂಡಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ರಾಯಲ್ ಎನ್‌ಫೀಲ್ಡ್ ಹಂಟರ್ 350 ವಿಶೇಷತೆಗಳು

ಹಂಟರ್ 350ಯ ಎರಡೂ ರೂಪಾಂತರಗಳು 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 800 ಎಂಎಂ ಸೀಟ್ ಎತ್ತರವನ್ನು ಪಡೆದರೆ ಹಂಟರ್ 350 ರೆಟ್ರೋ 177 ಕೆ.ಜಿ ತೂಗುತ್ತದೆ ಮತ್ತು 181 ಕೆ.ಜಿ ತೂಕದ ಮೆಟ್ರೋ ರೂಪಾಂತರಕ್ಕೆ ಹೋಲಿಸಿದರೆ ಹಗುರವಾಗಿರುತ್ತದೆ. ಹಂಟರ್ 350 ರೆಬೆಲ್ ಬ್ಲೂ, ರೆಬೆಲ್ ರೆಡ್, ರೆಬೆಲ್ ಬ್ಲ್ಯಾಕ್, ಡ್ಯಾಪರ್ ಗ್ರೇ, ಡ್ಯಾಪರ್ ಆಶ್ ಮತ್ತು ಫ್ಯಾಕ್ಟರಿ ಸಿಲ್ವರ್‌ನ ಇನ್ನೂ 7 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

RE ಹಂಟರ್ 350 349cc ಏರ್/ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್, J-ಸೀರೀಸ್ ಎಂಜಿನ್‌ನಿಂದ ಚಾಲಿತವಾಗಿದೆ, ಇದೇ ಎಂಜಿನ್ ಮೀಟೊಯೊರ್ ಮತ್ತು ಕ್ಲಾಸಿಕ್ 350 ಗೆ ಪವರ್ ನೀಡುತ್ತದೆ. ಈ ಎಂಜಿನ್ 6,100 rpm ನಲ್ಲಿ 20.2 hp ಪವರ್ ಮತ್ತು 4,000 rpm ನಲ್ಲಿ 27 Nm ಟಾರ್ಕ್ ಅನ್ನು ನೀಡುತ್ತದೆ.

RE ಆಗಸ್ಟ್ ತಿಂಗಳ ಮಾರಾಟದಲ್ಲಿ ಬಹುತೇಕ ಕ್ಲಾಸಿಕ್ 350ಗೆ ಸೆಡ್ಡು ಹೊಡೆದ ಹಂಟರ್ 350

ಇದರ ಗರಿಷ್ಠ ವೇಗ ಗಂಟೆಗೆ 114 ಕಿ.ಮೀ ಆಗಿದ್ದು, ಇಂಧನ ದಕ್ಷತೆಯನ್ನು 36.2 ಕಿಮೀ/ಲೀ ಎಂದು ನಿಗದಿಪಡಿಸಲಾಗಿದೆ. ಹೊಸ ಹಂಟರ್ ಹೊಸ ವೈಶಿಷ್ಟ್ಯಗಳೊಂದಿಗೆ ಬಂದಿದ್ದರೂ ಸಹ, ಗ್ರಾಹಕರು ರಾಯಲ್ ಎನ್‌ಫೀಲ್ಡ್ ಅಪ್ಲಿಕೇಶನ್ ಮೂಲಕ ತಮ್ಮಿಷ್ಟದಂತೆ ಬೈಕನ್ನು ಕಸ್ಟಮೈಸ್ ಮಾಡಬಹುದು.

Most Read Articles

Kannada
English summary
The Hunter 350 is almost beats a classic 350 on sale in the month of August
Story first published: Thursday, September 15, 2022, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X