ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಸದ್ಯ ಭಾರೀ ಬೇಡಿಕೆ ಪಡೆಯುತ್ತಿರುವ ಗ್ರಾಜಿಯಾ ಸ್ಕೂಟರ್ ಹೊಸ ದಾಖಲೆಯತ್ತ ಹೆಜ್ಜೆಹಾಕುತ್ತಿದೆ. ಹೀಗಾಗಿ ಹೊಸ ಸ್ಕೂಟರ್‌ನ ಮೊದಲ ಚಾಲನಾ ವಿಮರ್ಶೆಯ ಮೂಲಕ ಗ್ರಾಜಿಯಾ ವಿಶೇಷತೆಗಳನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿದೆ.

By Praveen Sannamani

ಈ ಹಿಂದೆ 2 ಹೊಸ ಸ್ಕೂಟರ್ ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದ ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಇದೀಗ ಗ್ರಾಜಿಯಾ ಸ್ಕೂಟರ್ ಅನ್ನು ಭರ್ಜರಿಯಾಗಿ ಬಿಡುಗಡೆ ಮಾಡಿದ್ದು, ಸದ್ಯ ಭಾರೀ ಬೇಡಿಕೆ ಪಡೆಯುತ್ತಿರುವ ಗ್ರಾಜಿಯಾ ಸ್ಕೂಟರ್ ಹೊಸ ದಾಖಲೆಯತ್ತ ಹೆಜ್ಜೆಹಾಕುತ್ತಿದೆ. ಹೀಗಾಗಿ ಹೊಸ ಸ್ಕೂಟರ್‌ನ ಮೊದಲ ಚಾಲನಾ ವಿಮರ್ಶೆಯ ಮೂಲಕ ಗ್ರಾಜಿಯಾ ವಿಶೇಷತೆಗಳನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಗ್ರಾಜಿಯಾ ಸ್ಕೂಟರ್ ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ವಿವಿಧ ಮಾದರಿಗಳಲ್ಲಿ ಗ್ರಾಜಿಯಾ ಅಭಿವೃದ್ಧಿ ಮಾಡಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಗ್ರಾಜಿಯಾ ಎಸ್‌ಟಿಡಿ, ಗ್ರಾಜಿಯಾ ಅಲಾಯ್ ಮತ್ತು ಗ್ರಾಜಿಯಾ ಡಿಎಲ್ಎಕ್ಸ್ ಎಂಬ ಮೂರು ಮಾದರಿಗಳನ್ನು ಹೊರತರಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಡಿಯೋಗಿಂತಲೂ ಭಿನ್ನವಾಗಿದೆ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಪ್ರಿಮಿಯಂ ವೈಶಿಷ್ಟ್ಯತೆಗಳೇ ಗ್ರಾಜಿಯಾ ಸ್ಕೂಟರ್ ಪ್ರಮುಖ ಆಕರ್ಷಣೆಯಾಗಿದ್ದು, ಡಿಯೋ ಇಷ್ಟಪಡುವ ಗ್ರಾಹಕರು ಗ್ರಾಜಿಯಾದತ್ತ ಮುಖ ಮಾಡುತ್ತಿದ್ದಾರೆ ಎನ್ನಬಹುದು. ಜೊತೆಗೆ ನಗರಪ್ರದೇಶಗಳಲ್ಲಿ ಅಷ್ಟೇ ಅಲ್ಲದೇ ಕಠಿಣ ಪ್ರದೇಶಗಳಲ್ಲೂ ಗ್ರಾಜಿಯಾ ಅತ್ಯುತ್ತಮ ರೈಡಿಂಗ್ ಅನುಭವ ದೊರಕಿಸಲಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಗ್ರಾಜಿಯಾ ಎಂಜಿನ್ ಸಾಮರ್ಥ್ಯ

ಹೋಂಡಾ ಗ್ರಾಜಿಯಾ ಸ್ಕೂಟರ್ ಆವೃತ್ತಿಯು ಆಕ್ಟಿವಾ ಮಾದರಿಯಲ್ಲೇ 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.52-ಬಿಎಚ್‌ಪಿ ಮತ್ತು 10.54 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಗ್ರಾಜಿಯಾ ವಿನ್ಯಾಸಗಳು ಗ್ರಾಜಿಯಾ ಸ್ಕೂಟರ್ ಹೋಂಡಾ ಸ್ಕೂಟರ್ ಮಾದರಿಗಳಲ್ಲೇ ವಿಭಿನ್ನವಾಗಿದ್ದು, 1,812 ಎಂಎಂ ಉದ್ದ, 697ಎಂಎಂ ಅಗಲ, 1,146 ಎಂಎಂ ಎತ್ತರ, 1,260 ಲಾಂಗ್ ವೀಲ್ಹ್ ಬೇಸ್, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಇನ್ನಷ್ಟು-ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಜೊತೆಗೆ 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಜೋಡಣೆ ಮಾಡಲಾಗಿದ್ದು, 12 ಇಂಚಿನ ಅಲಾಯ್ ವೀಲ್ಹ್, ಮುಂಭಾಗದ ಚಕ್ರದಲ್ಲಿ 190 ಎಂಎಂ ಗಾತ್ರದ ಡಿಸ್ಕ್ ಬ್ರೇಕ್ ಪಡೆದುಕೊಂಡಿರುವುದು ಡಿಯೋ ಸ್ಕೂಟರ್‌ಗಿಂತಲೂ ಉತ್ತಮ ಎನ್ನಬಹುದಾಗಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಜೊತೆಗೆ ಸ್ಟ್ಯಾಂಡರ್ಡ್ ವೆರಿಯಂಟ್‌ಗಳಲ್ಲಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಸಹ ಲಭ್ಯವಾಗಲಿದ್ದು, ಮುಂದುಗಡೆ ಟು ಟೋನ್ ಬಣ್ಣದೊಂದಿಗೆ ಮೊನಚಾದ ವಿನ್ಯಾಸ ಹಾಗೂ ಕ್ರೀಡಾತ್ಮಕ ಶೈಲಿಯನ್ನು ಕಾಪಾಡಿಕೊಳ್ಳಲಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಸ್ಕೂಟರ್ ಬೆಲೆಗಳು

ಗ್ರಾಜಿಯಾ ಮಾದರಿಗಳು ಬೆಲೆಗಳು(ದೆಹಲಿ ಎಕ್ಸ್‌ಶೋರಂ ಪ್ರಕಾರ)
ಗ್ರಾಜಿಯಾ ಎಸ್‌ಟಿಡಿ ರೂ. 57,827
ಗ್ರಾಜಿಯಾ ಅಲಾಯ್ ರೂ. 57,897
ಗ್ರಾಜಿಯಾ ಡಿಎಲ್ಎಕ್ಸ್ ರೂ. 62,269

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಗ್ರಾಜಿಯಾ ಹೊರನೋಟ

ಟ್ವಿನ್ ಪಾಡ್ ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರುವ ಗ್ರಾಜಿಯಾ ಸ್ಕೂಟರ್ ಮಾದರಿಯು ಮುಂಭಾಗದಲ್ಲಿ ವಿ ಆಕಾರವನ್ನು ಪಡೆದುಕೊಂಡಿದ್ದು, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮತ್ತು 18 ಲೀಟರ್‌ನಷ್ಟು ಸೀಟ್ ತಳಹದಿ ಸ್ಪೆಸ್ ಬಿಡಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಲಭ್ಯವಿರುವ ಬಣ್ಣಗಳು

ಗ್ರಾಜಿಯಾ ಹೊಸ ಸ್ಕೂಟರ್ ನಿಯೋ ಆರೇಂಜ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಪರ್ಲ್ ಸ್ಪ್ಯಾರ್ಟನ್ ರೆಡ್, ಪರ್ಲ್ ಅಮೆಜಿಂಗ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೆ ಮೆಟಾಲಿಕ್ ಮತ್ತು ಮ್ಯಾಟೆ ಮಾರ್ರವೆಲ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿ ಪರಿಚಯಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಮಾರಾಟದಲ್ಲಿ ದಾಖಲೆ

ಕಳೆದ ಮೂರು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳು ಮಾರಾಟದಲ್ಲಿ ವಿನೂತನ ದಾಖಲೆ ಮಾಡಿದ್ದು, ಇದುವರೆಗೆ ಬರೋಬ್ಬರಿ 60 ಸಾವಿರ ಸ್ಕೂಟರ್‌ಗಳು ಮಾರಾಟಗೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಜೊತೆಗೆ ಬಿಡುಗಡೆಯಾದ ಅಲ್ಪಾವಧಿಯಲ್ಲಿ ಇಷ್ಟೊಂದು ಪ್ರಮಾಣದ ಸ್ಕೂಟರ್‌ಗಳು ಮಾರಾಟವಾಗಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಫಸ್ಟ್ ರೈಡ್ ರಿವ್ಯೂ- ಸ್ಕೂಟರ್ ವಿಭಾಗದಲ್ಲಿ ಧೂಳೆಬ್ಬಿಸುತ್ತಿರುವ ಹೋಂಡಾ ಗ್ರಾಜಿಯಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

125 ಸಿಸಿ ವಿಭಾಗದಲ್ಲಿ ಹೊಸ ಸ್ಕೂಟರ್ ಉತ್ಪನ್ನವನ್ನು ಪರಿಚಯಿಸಿರುವ ಹೋಂಡಾ ಸಂಸ್ಥೆಯು ಗ್ರಾಜಿಯಾ ಆವೃತ್ತಿಯನ್ನು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಮಾಡಿದ್ದು, ಸ್ಪೋರ್ಟ್ ಲುಕ್ ಹಿನ್ನೆಲೆ ಯುವ ಸಮುದಾಯವನ್ನು ಸೆಳೆಯುವುದಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ಹಲವು ವಿಶೇಷತೆಗಳಿಗೆ ಕಾರಣವಾದ ಸುಜುಕಿ ವಿನೂತನ ಬರ್ಗಮನ್ ಸ್ಟ್ರಿಟ್ ಸ್ಕೂಟರ್

ರಾಯಲ್ ಎನ್‌ಫೀಲ್ಡ್ ವಿನೂತನ ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

Most Read Articles

Kannada
Read more on review honda scooter
English summary
Honda Grazia First Ride: Road Test Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X