ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

2020ರ ಏಪ್ರಿಲ್ ತಿಂಗಳಿನಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಜಾರಿಯಾಗುವುದರಿಂದ ಎಲ್ಲಾ ಕಂಪನಿಯು ತನ್ನ ಸರಣಿಯಲ್ಲಿರುವ ಕಾರುಗಳನ್ನು ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಅದರಂತೆ ನಿಸ್ಸಾನ್ ಕಿಕ್ಸ್ ಮಿಡ್ ಎಸ್‍‍ಯುವಿ ಬಿಎಸ್-6 ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ಇದೆ ಕಾರಣಕ್ಕಾಗಿ ನಿಸ್ಸಾನ್ ಕಂಪನಿಯು ತನ್ನ 2020ರ ಕಿಕ್ಸ್ ಕಾರ್ ಅನ್ನು ಸ್ಪಾಟ್ ಟೆಸ್ಟ್ ನಡೆಸಿದೆ. 2020ರ ಕಿಕ್ಸ್ ಬಿಎಸ್-6 ಎಂಜಿನ್‍‍ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ನಿಸ್ಸಾನ್ ಕಿಕ್ಸ್ ಮಿಡ್ ಎಸ್‍‍ಯುವಿಯು ಮೊದಲ ನೋಟದಲ್ಲಿ ಅದರ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಮಿಡ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ರಶ್ಲೆಲೇನ್ ಬಹಿರಂಗಪಡಿಸಿದೆ. ನಿಸ್ಸಾನ್ ಕಂಪನಿಯು ಈ ವರ್ಷದ ಪ್ರಾರಂಭದಲ್ಲಿ ತನ್ನ ಕಿಕ್ಸ್ ಮಿ‍ಡ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಕಾರ್ ಅನ್ನು ರೂ.9.55 ಲಕ್ಷಗಳಿಗೆ ಬಿಡುಗಡೆಗೊಳಿಸಿತ್ತು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ನಿಸ್ಸಾನ್ ಟೆರಾನೊ ಬದಲಿಗೆ ಕಿಕ್ಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ನಿಸ್ಸಾನ್ ಟೆರಾನ್ ಕಾರ್ ಅನ್ನು 2018ರಲ್ಲಿ ಸ್ಥಗಿತಗೊಳಿಸಲಾಗಿತ್ತು. ನಿಸ್ಸಾನ್ ಕಂಪನಿಯ ಸರಣಿಯಲ್ಲಿರುವ ಕಾರುಗಳ ಮಾರಾಟವು ಇಳಿಕೆಯಾಗಿದೆ. ಬಾರತೀಯ ರಸ್ತೆಗಳಲ್ಲಿ ನಿಸ್ಸಾನ್ ಕಂಪನಿಯ ಕಾರುಗಳನ್ನು ಕಾಣುವುದು ಅಪರೂಪವಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ಇದೇ ಕಾರಣದಿಂದ ಜಪಾನ್ ಮೂಲದ ನಿಸ್ಸಾನ್ ಕಂಪನಿಯು ನಿಸ್ಸಾನ್ ಕಿಕ್ಸ್ ರೆಡ್ ವೀಕೆಂಡ್ ಅನ್ನು ಪ್ರಾರಂಭಿಸಿದೆ. ಇದರ ಪ್ರಯುಕ್ತ ನಿಸ್ಸಾನ್ ಕಿಕ್ಸ್ ಮಿಡ್ ಎಸ್‍‍ಯುವಿಗೆ ರೂ.1.10 ಲಕ್ಷಗಳವರೆಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಸೇರಿ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಎಕ್ಸ್‌ಎಲ್, ಎಕ್ಸ್‌ವಿ, ಎಕ್ಸ್‌ವಿ ಪ್ರೀಮಿಯಂ ಮತ್ತು ಎಕ್ಸ್‌ವಿ ಪ್ರೀಮಿಯಂ ಪ್ಲಸ್ ಎಂಬ ರೂಪಾಂತರಗಳಾಗಿವೆ. 1.5 ಲೀಟರ್ ಎಚ್‍ 4ಕೆ ಪೆಟ್ರೋಲ್ ಎಂಜಿನ್ 406 ಬಿ‍‍ಹೆಚ್‍‍ಪಿ ಪವರ್ ಮತ್ತು 142 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ಇನ್ನೂ 1.5 ಲೀಟರ್ ಕೆ9 ಕೆ ಡೀಸೆಲ್ ಎಂಜಿನ್ 110 ಬಿ‍‍ಹೆಚ್‍‍ಪಿ ಪವರ್ ಮತ್ತು 240 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದರೆ, ಡೀಸೆಲ್ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿರುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ನಿಸ್ಸಾನ್ ಇಂಡಿಯಾ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ನಾಲ್ಕು ಆವೃತ್ತಿಯ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಮೈಕ್ರಾ ಆಕ್ಟಿವ್, ಮೈಕ್ರಾ, ಸನ್ನಿ ಮತ್ತು ಕಿಕ್ಸ್ ಆಗಿದೆ. ಆರ್ 35 ನಿಸ್ಸಾನ್ ಜಿಟಿ-ಆರ್ ಸೂಪರ್ ಕಾರ್ ಕೂಡ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ನಿಸ್ಸಾನ್ ಕಿಕ್ಸ್ ನಲ್ಲಿ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಲ್ಲ. ಹೊಸ ನಿಸ್ಸಾನ್ ಕಿಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ 500, ರೆನಾಲ್ಟ್ ಕ್ಯಾಪ್ಟೂರ್ ಮತ್ತು ಹೊಸ ಕಿಯಾ ಸೆಲ್ಟೋಸ್ ಎಸ್‍‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಬಿಎಸ್-6 ಎಂಜಿನ್ ಅನ್ನು ಅಳವಡಿಸಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಹೊಸ ಬಿಎಸ್-6 ನಿಸಾನ್ ಕಿಕ್ಸ್ ಮಿಡ್ ಎಸ್‍‍ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Spy Pics: Nissan Kicks BS6 Variant Spotted Testing In Pune - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X