Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೈಬ್ರಿಡ್ ಕಾರು ಬಿಡುಗಡೆಗೊಳಿಸಲು ಮುಂದಾದ ಹೋಂಡಾ
ಜಪಾನ್ನ ಕಾರು ತಯಾರಕ ಕಂಪನಿಯಾದ ಹೋಂಡಾ ಇತ್ತೀಚಿಗಷ್ಟೇ ತನ್ನ ಹೊಸ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಕಂಪನಿಯು ಶೀಘ್ರದಲ್ಲಿಯೇ ಜಾಝ್ ಕಾರನ್ನು ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಲಿದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಹೋಂಡಾ ಕಂಪನಿಯು ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಬಿಡುಗಡೆಗೊಳಿಸಲಿದೆ. ಮೂಲಗಳ ಪ್ರಕಾರ ಹೋಂಡಾ ಕಾರ್ಸ್ ಇಂಡಿಯಾ ಮುಂದಿನ ವರ್ಷ ಭಾರತದಲ್ಲಿ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಲಿದೆ. ಕರೋನಾ ವೈರಸ್ ಕಾರಣದಿಂದಾಗಿ ಹೈಬ್ರಿಡ್ ಕಾರಿನ ತಯಾರಿಕೆಯು ತಡವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೈಬ್ರಿಡ್ ಕಾರು ಯೋಜನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಕಾರನ್ನು 2021ರಲ್ಲಿ ಬಿಡುಗಡೆಗೊಳಿಸಲಾಗುವುದೆಂದು ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಗಕು ನಕಾನಿಶಿ ಹೇಳಿದ್ದಾರೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೋಂಡಾ ಕಂಪನಿಯು ಈ ಹೈಬ್ರಿಡ್ ಕಾರು ತಯಾರಿಕೆಗಾಗಿ ಸುಮಾರು 3ರಿಂದ 4 ವರ್ಷಗಳಿಂದ ಸಿದ್ದತೆ ನಡೆಸಿದೆ. ಈ ಕಾರಣಕ್ಕೆ ಕಂಪನಿಯು ಈ ಯೋಜನೆಯನ್ನು ಮತ್ತಷ್ಟು ಮುಂದೂಡುವ ಸಾಧ್ಯತೆಗಳಿಲ್ಲ. ಸದ್ಯಕ್ಕೆ ಹೋಂಡಾ ಕಂಪನಿಯು ಈ ಹೈಬ್ರಿಡ್ ಕಾರಿನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಆದರೆ ಹೋಂಡಾ ಕಾರ್ಸ್ ಇಂಡಿಯಾ ಹೊಸ ತಲೆಮಾರಿನ ಹೋಂಡಾ ಸಿಟಿ ಅಥವಾ ಹೊಸ ಹೋಂಡಾ ಜಾಝ್ ಕಾರುಗಳನ್ನು ಹೈಬ್ರಿಡ್ ಸಿಸ್ಟಂನೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹೋಂಡಾ ಕಾರ್ಸ್ ಇಂಡಿಯಾ ಸದ್ಯದಲ್ಲೇ ತನ್ನ ಹೆಚ್ಆರ್-ವಿ ಎಸ್ ಯುವಿಯನ್ನು ಬಿಡುಗಡೆಗೊಳಿಸಲಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಈ ಎಸ್ ಯುವಿಯು ಹೋಂಡಾ ಡಬ್ಲ್ಯೂಆರ್-ವಿ ಹಾಗೂ ಹೋಂಡಾ ಸಿಆರ್-ವಿ ನಡುವೆ ಇರಲಿದೆ ಎಂದು ಹೇಳಲಾಗಿದೆ. ಈ ಎರಡೂ ಕಾರುಗಳ ಬೆಲೆಯ ನಡುವೆ ಸುಮಾರು ರೂ.20 ಲಕ್ಷಗಳಷ್ಟು ಅಂತರವಿದೆ. ಹೋಂಡಾ ಹೆಚ್ಆರ್-ವಿ ಇದರ ನಡುವೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಅಕಾರ್ಡ್, ಹೈಬ್ರಿಡ್ ಸಿಸ್ಟಂನಲ್ಲಿ ಬಿಡುಗಡೆಯಾಗಿರುವ ಹೋಂಡಾ ಕಂಪನಿಯ ಏಕೈಕ ಕಾರಾಗಿದೆ. ಹೋಂಡಾ ಕಂಪನಿಯು ಈ ವರ್ಷದ ಆರಂಭದಲ್ಲಿ ಈ ಕಾರನ್ನು ಸ್ಥಗಿತಗೊಳಿಸಿತು. ಈ ಕಾರಿನಲ್ಲಿ 2.0-ಲೀಟರಿನ ಪೆಟ್ರೋಲ್ ಎಂಜಿನ್ ಹಾಗೂ ಎರಡು ಎಲೆಕ್ಟ್ರಿಕ್ ಮೋಟರ್ಗಳನ್ನು ಅಳವಡಿಸಲಾಗಿತ್ತು.