ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಕೆಲವು ದಿನಗಳ ಹಿಂದೆ ಬಾಲಿವುಡ್ ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಲ್ಯಾಂಬೊರ್ಗಿನಿ ಉರುಸ್ ಕಾರುಗಳನ್ನು ಖರೀದಿಸಿದ್ದರು. ಈಗ ಮತ್ತೊಬ್ಬ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಆ ಕಾರಿನ ಚಿತ್ರಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಕಾರ್ತಿಕ್ ಆರ್ಯನ್‌ರವರು ಖರೀದಿಸಿರುವ ಲ್ಯಾಂಬೊರ್ಗಿನಿ ಉರುಸ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.3.1 ಕೋಟಿಗಳಾಗಿದೆ.

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್‌ರವರು ಖರೀದಿಸಿರುವ ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯು ಕಪ್ಪು ಬಣ್ಣದಲ್ಲಿದ್ದು, ಆಕರ್ಷಕವಾಗಿ ಕಾಣುತ್ತದೆ. ಅವರು ತಮ್ಮ ಹೊಸ ಕಾರಿನೊಂದಿಗಿರುವ ವೀಡಿಯೊವನ್ನು ಶೇರ್ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಈ ವೀಡಿಯೊದಲ್ಲಿ ಅವರು ಖುಷಿಯಾಗಿರುವುದನ್ನು ಕಾಣಬಹುದು. ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿ ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ಈಗ ಕಾರ್ತಿಕ್ ಆರ್ಯನ್ ಸಹ ಸೇರಿದ್ದಾರೆ.

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಕಳೆದ ಜನವರಿಯಲ್ಲಿ ತಮ್ಮ ತಾಯಿಯ ಜನ್ಮದಿನದಂದು ಅವರಿಗೆ ಹೊಸ ಮಿನಿ ಕೂಪರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು.ಈ ಕಾರ್ ಅನ್ನು ಅವರೇ ಚಾಲನೆ ಮಾಡುತ್ತಿದ್ದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ತಮ್ಮ ಹೊಸ ಉರುಸ್ ಎಸ್‌ಯು‌ವಿಯೊಂದಿಗೆ ಮುಂಬೈನ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿರವರು ಕೆಂಪು ಬಣ್ಣದ ಹಾಗೂ ರಣವೀರ್ ಸಿಂಗ್ ಹಳದಿ ಬಣ್ಣದ ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯನ್ನು ಖರೀದಿಸಿದ್ದರು.

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಹೊಸ ಕಾರು ಖರೀದಿಸಿರುವ ಕಾರ್ತಿಕ್ ಆರ್ಯನ್'ರವರಿಗೆ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಲ್ಯಾಂಬೊರ್ಗಿನಿ ಉರುಸ್ ವಿಶ್ವಾದ್ಯಂತ ಜನಪ್ರಿಯವಾಗಿರುವ ಎಸ್‌ಯು‌ವಿಗಳಲ್ಲಿ ಒಂದಾಗಿದೆ. ಈ ಎಸ್‌ಯು‌ವಿಯು ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಭಾರತದಲ್ಲಿ ಈ ಎಸ್‌ಯು‌ವಿಯ 100 ಯುನಿಟ್'ಗಳು ಮಾರಾಟವಾಗಿವೆ ಎಂದು ಇತ್ತೀಚೆಗಷ್ಟೇ ಕಂಪನಿ ತಿಳಿಸಿತ್ತು. ಕೆಲವು ದಿನಗಳ ಹಿಂದಷ್ಟೇ ಈ ಕಾರಿನ10,000 ಯುನಿಟ್‌ಗಳ ಉತ್ಪಾದನೆ ಪೂರ್ಣಗೊಂಡಿದೆ ಎಂದು ಕಂಪನಿ ತಿಳಿಸಿತ್ತು.

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಹಾಗೂ ಹೆಚ್ಚಿನ ಸ್ಪೇಸ್ ಹೊಂದಿರುವ ಕಾರಣಕ್ಕ್ ವಿಶ್ವದಾದ್ಯಂತವಿರುವ ಗ್ರಾಹಕರು ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿ ಖರೀದಿಗೆ ಆದ್ಯತೆ ನೀಡುತ್ತಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 850 ಎನ್‌ಎಂ ಹಾಗೂ 641 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ದುಬಾರಿ ಬೆಲೆಯ ಕಾರು ಖರೀದಿಸಿದ ನಟ ಕಾರ್ತಿಕ್ ಆರ್ಯನ್

ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಲ್ಯಾಂಬೊರ್ಗಿನಿ ಕಂಪನಿಯು ಕರೋನಾ ಸಾಂಕ್ರಾಮಿಕದ ನಡುವೆಯೂ 52 ಯುನಿಟ್ ಉರುಸ್'ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

Most Read Articles

Kannada
English summary
Kartik Aryan buys new Lamborghini Urus SUV shares video on social media. Read in Kannada.
Story first published: Tuesday, April 6, 2021, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X